Thursday, December 22, 2011

Cricket ಹುಚ್ಚು

ಹೆಚ್ಚೆಂದರೆ ಅತಿಶಯೋಕ್ತಿ ಅಲ್ಲವೇನೋ
ಹುಚ್ಚೆಂದರೂ ತಪ್ಪಲ್ಲವೇನೂ
ನನ್ನ ಹುಡುಗನ ಮಧುರ ಒಲವು
ನಾನ್ನಲ್ಲ ಎಂದರೆ ನಂಬುವಿರೋ ಏನೋ?

ಆ ಹಳೆಯ ನೆನಪಿಗೆ ಆ ಸವಿಯಾದ ಪಯಣ
ಹೊಡೆತ ತಿಂದ ಆ ಏಟುಗಳ ಸ್ಮರಣ
ತಿಂದ ಊಟ ಆಗುತ್ತಿರಲಿಲ್ಲ ಜೀರ್ಣ
ಏನು ಇದಕ್ಕೆಲ್ಲ ಕಾರಣ?

ಅಷ್ಟು ದೊಡ್ಡ ಸಂಘದಲ್ಲಿ ಅವನಾದ ಹೀರೋ
ಬೇರೆಯೆಲ್ಲಾ ಆಯ್ತು ಝೀರೋ ದೊಡ್ಡ ಝೀರೋ
ಬಿಳಿ ಬಣ್ಣಕ್ಕೆ ತಿಳಿಯದ ಆಕರ್ಷಣೆ
ಭೂಮಿ ಆಕಾಶದ ಮಧ್ಯೆ ಸಂಘರ್ಷಣೆ

ಸ್ವರ್ಗದ ಮಡಿಲೇನೋ ಎಂಬ ಭಾವನೆ
ಮಾಡುತ್ತಿದ್ದ ಅನುಕರಣೆ
ಅದೇ ಪ್ರಪಂಚದ ಪೀಠಾಧಿಪತಿ ಇವ
ಮುಗ್ದ ಮನಸಿನ ಚಂಚಲ ಭಾವ

ಕೈಲಿ ಹಿಡಿದ ಆ ದಾಂಡು
ಬೀಸಿ ಬರುವ ಆ ಚೆಂಡು
ಆಗ ಪ್ರಪಂಚವಿತ್ತು ತುಂಬಾ ಗುಂಡು
ನಾನಾಗುವ ಮೊದಲು ಅವನಿಗೆ ಬಂಧು




Monday, December 19, 2011

ಅರ್ಧ ಹೆಂಡತಿ

ಯಾರಪ್ಪ ಈ ಮಾರಾಯ?? ಹೀಗೆ ಮಾತಾಡುತ್ತಾನೆ
ವಿಚಾರ ವಿನಿಮಯದ ನಂತರ ನನ್ನ ಮುಂದೆ ಹೀಗೆ ಹೇಳುತ್ತಾನೆ
ಮನೆ ಮಂದಿಯ ಬಗ್ಗೆ ಕೇಳದ ನಾನು
ಪುರಾಣವ ತೆಗೆದೇ, ಆಗಲೇ ತಿಳಿದದ್ದು ಈ ಅರ್ಧ ಹೆಂಡತಿಯ ಬಗ್ಗೆ!!!

ಈ ದೊಡ್ಡ ಬಂಗಲೆಯ ಒಳಗೆ ಆಂಗ್ಲ ಪದಗಳ ಕಾರುಬಾರು
ಸಣ್ಣ ಸಂಕಟದ ಅಲೆಯ ಮುಂದೆ ಬರಿ ಇತ್ತು ಅದರ ರಂಗು ಜೋರು
ಆದರೆ ಕನ್ನಡದ ಕಂಪು ಎಲ್ಲಿಯೂ ಅಳಿಯದೆ ಮಾತುಗಳು ಅಲ್ಲಿ ಬರ್ಜರಿ ಸಾಗಿದೆ
ಮನಸು ಬಿಚ್ಚಿ ಭಾವನೆಗಳು ಗರಿಗೆದರಿದೆ!

ಪದಗಳ ಮದ್ಯೆ ತಿಳಿಯಿತು "ಗೋವಾ" ದ ವಿಷಯ
ಅಲ್ಲಿತ್ತು ಮದುವೆಯ ಸಂಭ್ರಮದ ಮಾಯಾ
ಹತ್ತಿರ ಬಂಧುಗಳ ನಡುವೆ ಮಧುವಣಗಿತ್ತಿ
ಹರುಷವು ತುಂಬಿತ್ತು ಅವಳ್ಳನ್ನು ಸುತ್ತಿ ಸುತ್ತಿ

ಈ ಚರ್ಚೆಯೆಲ್ಲಾ ಆಕೆಯ ಮೇಲೆ
ಅವಳೇ ಈ ಅರ್ಧ ಹೆಂಡತಿ ಎಂಬಾ ಬಾಲೆ!!
ಯಾರೋ ಏನೋ ತಿಳಿಯದ ನಾನು, ಆ ಪದಕ್ಕೆ ಮನಸೋತೆ
ಕವನವ ಬರೆವ ಆಸೆ ವ್ಯಕ್ತ ಪಡಿಸಿದೆ!!

ಪದಗಳ ಹೆಕ್ಕಿ ಬರೆಯಲಾದೆ, ಸಣ್ಣ ಪುಟ್ಟ ಪದಗಳ ಹೊಂದಿಸಿದೆ
ಕವಿತೆಯ ಓದಿ ಮನನೊಂದಬೇಡಿ, ಪದಗಳನು ಕಾವ್ಯದಲ್ಲಿ ಬಂಧಿಸಿದೆ


"साली आधी घर वाली "

Saturday, December 10, 2011

ಬಂಧನ

ಎಲ್ಲೋ ಅಳಿದುಹೋಗುತ್ತಿದ್ದ ಪ್ರೀತಿಯ ಭರವಸೆಯ ನನ್ನಲ್ಲಿ ಮೂಡಿಸಿದೆ
ಬಾಡಿ ಹೋಗುತ್ತಿದ್ದ ಬಳ್ಳಿಗೆ ನೀರಿನ ಆಸರೆಯಾದೆ!
ಸಂತಸವ ಹರಡುವ ಭಾವನೆಯ ತಂದೆ
ನನ್ನ ಪುನಃ ಜೀವಂತವಾಗಿಸಿದೆ!

ಹೇಗೋ ಏನೋ ತಿಳಿಯದೆ ನಿನ್ನಲ್ಲಿ ನಂಬಿಕೆ ಅತಿರೇಕವಾಯ್ತು
ಬಣ್ಣದ ಆಗಸದಲ್ಲಿ ಹಾರುವ ನನಗೆ ರೆಕ್ಕೆಯ ಕಳೆದುಕೊಂಡತಾಯ್ತು
ಸದಾ ನಾನು ನಿನ್ನ ನೋವಿಗೆ ಕಾರಣವೇನೋ ಅನಿಸುವಂತಾಯ್ತು
ಕೊನೆಗೆ ನನ್ನ ಜೀವಂತಿಕೆಯ ಬಗ್ಗೆ ನನಗೆ ದುಃಖವೆನಿಸಿತು!!

ಸಂತಸದ ಕಡಲಲ್ಲಿ ಸಾಗುತ್ತಿದ್ದ ನಮಗೆ ಈ ನೋವೇಕೆ?
ನಮ್ಮ ಮಧ್ಯ ಕ್ಷಮೆಯ ಬಂಧನವೇಕೆ?
ನಾವೇನು ಸಮಾಜದ ಕಟ್ಟುಪಾಡುಗಳಿಗೆ ಹೊರತಲ್ಲ
ಆದರೆ ಅದನ್ನು ಅರ್ಥೈಸಿಕೊಳ್ಳದ ಮನಸ್ತಿತಿ ಏಕೆ?

ಕೋಪದ ನುಡಿಗಳ ಕೋಡಿ ನಮ್ಮ ನಡುವೆ ಬಂದಿತೆ?
ಜೀವನವ ಮರೆವಷ್ಟು ದೂರ ನಿಂತೇ ಹೇಗೆ?
ನನ್ನ ಉಪಸ್ತಿತಿ ನಿಂಗೆ ಅನವಶ್ಯಕ ಅನಿಸಿತೆ?
ನನ್ನ ಮಾತುಗಳು ನಿನಗೆ ಮುಳುವಾಯ್ತೆ?

ಈ ಪ್ರಶ್ನೆಗಳಿಗೆ ಉತ್ತರ ಬೇಡ
ನಿನ್ನನು ಅರಿಯುವ ಸ್ವತಂತ್ರ ನೀಡು ನನಗೆ
ನಿನ್ನ ಮನದ ಮೂಲೆಯ ಆಳುವ ಯೋಗ ನನ್ನದಾಗಲಿ ನಿನ್ನ ಮನೆಯನಲ್ಲ!
ನಿನ್ನ ಮನೆಯ ಸಂತಸದ ತೋರಣ ನಾನಾಗುವ ಭಾಗ್ಯ ನನಗೆ ಸಿಗಲಿ!

ಪ್ರತಿ ಮಾತಿನಲ್ಲೂ ಸೋಲಿನ ಅನುಭವ ಬೇಡ
ನಿನ್ನ ಜಯದ ಮಾಲೆಗೆ ನಾನು ಹೂವಾದರೆ ಸಾಕು
ನಿನ್ನ ಎಲ್ಲ ಆಸೆಗಳ ನನ್ನ ಕನಸಿನಂತೆ ಸಿಂಗರಿಸುವೆ
ಬದಕನ್ನು ಒಮ್ಮೆ ನನ್ನ ಕಣ್ಣುಗಳಿಂದ ನೋಡುವ ಔದಾರ್ಯ ತೋರು ಎನಗೆ

ಈ ಕವನವ ನನ್ನ ಭಾವನೆಗಳಿಂದ ಅಲಂಕರಿಸಿರುವೆ
ಅದಕ್ಕೆ ಅಹಂಕಾರದ ಹೆಸರು ಬೇಡ
ನನ್ನಲ್ಲಿ ನೀನು ಕೊಂಚ ನಂಬಿಕೆಯ ಇಡು
ನಿನ್ನ ನಂಬಿಕೆಯ ಎಂದೂ ತಪ್ಪು ಮಾಡೆನು!

Wednesday, October 19, 2011

ಸ್ಪಂದನ

ಸ್ಪಂದಿಸಲಾರೆನು ನಿನ್ನಯ ಪ್ರೀತಿಗೆ,
ಸ್ನೇಹಕೆ ಸೋತೆನು ಹೇಗೋ ಕನಸನು ಅಳಿಸದೆ!!
ನಿನ್ನೆಲ್ಲಾ ಮೌನವನ್ನು ನಾ ಕದ್ದು ಒಯ್ಯಲೇನು?
ಒಮ್ಮೆ ಸುರಿಸಲು ಆ ಮುತ್ತಿನ ನಗೆಯೊಂದನು! ಸೇರಿದೆ ನಿನ್ನನು!!

ಬಯಸದೆ ಬಳಿಗೆ ಬಂದ ಸ್ಪೂರ್ತಿ ಕಿರಣ ಸ್ಪರ್ಶವು 
ಸೇರಿತು ಈ ಎದೆಯನು ತುಂಬಲು ಹೊಸ ರಾಗವು 
ಆ ಬಾನಿಗೆ ರಂಗನು ನಿನ್ನ ಬಣ್ಣದಿಂದ ನೀಡಬಲ್ಲೆ 
ನನ್ನ ಹುಡುಗುತನವನು ತಪ್ಪು ತಿಳಿಯಬೇಡ ನೀ ಇಂದು!!
ನೂರಾರು ಕವಿತೆಗಳನು ನಾ ಬರೆದು ನೀಡಲೇನು? 
ಅದರಲ್ಲಿಯೇ ಅಡವಿಸಿದೆ ನಾ ನನ್ನ ಬಾಳನು! ಕೊಡುಗೆಯ ನೀಡಲು!!

ಪ್ರೇಮದ ಈ ಕವನಗಳಿಗೆ ಪದಗಳಿಗ ಸಾಲದೇ?
ಹಾರಲು ಕಳಿಸಿದ ನಿನಗೆ ಹಾರಲೀಗ ಬಾರದೇ?
ಈ ಜೀವಕೆ ಜೀವವ ನೀನೆ ಸೇರಿಸಿ ಕೂಡಿಸಿ ಜೊತೆ ಸಾಗಬೇಕು 
ನನ್ನ ಆ ಹೆಜ್ಜೆಗಳಿಗೆ ನಿನ್ನ ಲಜ್ಜೆಯ ಗುಂಗು ಜೊತೆ ಸೇರಿತೆನು?
ಮರುಭೂಮಿಯಲ್ಲಿ ನೀನು ಹೂವಾಗಿ ಬಂದೆಯೇನು?
ನೀ ತೋರಲು ಆ ನೀರಿನ ಹೊಸ ಜಾಡನು?ದಾಹವ ತೀರಲು!!



Wednesday, October 12, 2011

ತಾಣ-ಪಯಣ

ಮುಗಿಲ ಓಡಲಲಿ ಆ ಬೆಟ್ಟಗಳು 
ಮನದ ದುಗುಡತೆಯ ದೂರ ತಳ್ಳಿದವು
ಮಂಜು ಮುಸುಕಿದ ಆ ಹಾದಿ
ಸ್ವರ್ಗದ ಮುಸುಕ ಎಳೆದವು!!

ಸಣ್ಣ ಎಳೆಯ ಬೀಸುತ ರವಿಯು 
ನೀರ ಬಿಂದುಗಳ ಸ್ಪರ್ಶಿಸಿದ
ಹವಾಮಾನದ ಆ ವೈಪರಿತ್ಯಕೆ 
ಮಧುರ ಸುಧೆಯ ಹರಿಸಿದ 


ಎಲ್ಲೆಲ್ಲೋ ಕಾಗದದ ಹಾಳೆಯ ಮೇಲೆ ಕಂಡ ಚಿತ್ರವದು
ನೈಜ ಚಿತ್ರಣ ತಲ್ಲಣವ ಮೂಡಿಸಿದ ಕ್ಷಣವದು
ಸುಂದರ ಆ ತಾಣದಲ್ಲಿ ಸಣ್ಣ ಝರಿಯ ಆಲಾಪ 
ತಂಪು ತಂಪು ಗಾಳಿಯ ಮಧುರ ಪ್ರಲಾಪ

ಪಯಣಿಸುತ್ತಿದ್ದ ದಾರಿಯ ತುಂಬೆಲ್ಲಾ ಹಸಿರು
ದೂರ ಮಾಡತೊಡಗಿತ್ತು ನಮ್ಮ ಬೇಸರು
ಅಲ್ಲಲ್ಲಿ ಕಿತ್ತು ಬಂದಿದ್ದ ಮರಗಳ ಬೇರು 
ಹುಟ್ಟಿಸಿತು ನಮ್ಮಲ್ಲಿ ಒಮ್ಮೊಮ್ಮೆ ಬೆವರು!

ನಿಂತ ತಾಣವೆಲ್ಲಾ ಸೃಷ್ಟಿಯ ಸುಂದರ ಚಿತ್ರಣ 
ಯಾರಲ್ಲಿ ಮೂಡಿಸದು ಹೇಳಿ ನವಿರಾದ ತಲ್ಲಣ?
ಅದೊಂದು ಅನಾನುಭಾವ ಮಂಥನ 
ಅದೇ ಈ ಕವಿತೆಯ ಮೂಲ ಚೇತನ!

ಈಗ ಮೂಡಿತಲ್ಲವೇ ಮನದಲ್ಲಿ ಪ್ರಶ್ನೆ?
ಯಾವುದೀ ಪರಿಸರ ಚಿನ್ಹೆ
ಯಾವುದೋ ಕನಸಲ್ಲ ಇದು
ಅದುವೇ ನಮ್ಮ ಕರುನಾಡ ಚಿಕ್ಕಮಗಳೂರು




Sunday, September 25, 2011

ಪಯಣ

ಹೆಗಲಲಿ ಹೊತ್ತ ಬ್ಯಾಗ್, ನಡು ಬಿಸಿಲಿನ ಚುರು ಚುರು ಸುಡುವ ಆ ಸೂರ್ಯ, ಬೈಕನ ಚಕ್ರಗಳು ಅದನ್ನು ಲೆಕ್ಕಿಸದೆ ವೇಗದಲ್ಲಿ ಸಾಗುತಿತ್ತು. ದೊಡ್ಡದಾದ " ನೈಸ್" ರಸ್ತೆಯಲ್ಲಿ ಪಕ್ಕದಲ್ಲಿ ನಮ್ಮೊಡನೆ ಸಾಗುತ್ತಾ ದೂರವಾಗುತ್ತಿದ್ದ ತೆಂಗು ಹಾಗು ಅಡಿಕೆ ಮರಗಳು ಬಿರ್ರನೆ ಬೀಸುತ್ತಿದ್ದ  ಕಲುಷಿತ ಬಿಸಿ ಗಾಳಿ. ಹಾಗೆ ಮಾತಿನ ಬಿರುಸು ಚಟುವಟಿಕೆ ನಮ್ಮಿಬ್ಬರ ಮಧ್ಯೆ ನಾವು ಹೋಗುತ್ತಿದ್ದ ತಿರುವನ್ನು ಮರೆಸಿತು.

ಅಲ್ಲಿಯೇ ಸಾಗುತ್ತಿದ್ದ ಒಬ್ಬಾತ ನಾವು ೩ಕಿ ಮಿ ಅಷ್ಟು ಮುಂದೆ ಬಂದಿದ್ದೇವೆಂದು ತಿಳಿಸಿದ, ಮತ್ತೆ ಹಿಂದಿರುಗಿ ನಮ್ಮ ಪಯಣ ಸಾಗಿತು. ಗಾಳಿಯ ಸ್ಪರ್ಶ ತಣ್ಣಗಾಯಿತು, ಸೂರ್ಯನ ಕಿರಣಗಳು ನಮ್ಮನು ತಾಕುತ ಸ್ವಾಗತ ಕೋರಿದಂತೆ ಅನಿಸಿತು. ಅಲ್ಲಿದ್ದ ಆ ಮರಗಳು ಅವುಗಳ ಪಿಸುಮಾತು ನಮ್ಮ ಈ ಪಯಣಕ್ಕೆ ಸುಂದರ ಅನುಭವವ ನೀಡಿತು.

ಮುಂದೆ ಸಾಗುತ್ತಾ ನಾವು ದಾರಿಯಲ್ಲಿ ಕಂಡ ಹಸಿರು ಆ ಪರಿಸರ ಮನದ ಮೂಲೆಯಲ್ಲಿ ತುಂಬಿದ ದುಗಡವೆಲ್ಲಾ ದೂರ ಮಾಡಿತು. ಮೋಡದ ಮರೆಯಲ್ಲಿ ರವಿ ತಾನು ಬೆಟ್ಟಗಳ ಮೇಲೆ ತನ್ನ ಕಿರಣಗಳ ಚೆಲ್ಲುತಾ ಕಚಗುಳಿಯ ಅನುಭವವ ಮಾಡಿರಬಹುದು. ಅದೇ ಹಾದಿಯಲಿ ನನ್ನ ಮನ ಕವಿತೆಯ ಪದಗಳ ಹೆಕ್ಕುತಿತ್ತು.

"ಬದುಕಿನ ಭವ್ಯತೆಯ ಮುನ್ನುಡಿಯಲಿ
ದೈವ ತಾ ನೀಡಿದ ಅಚ್ಚರಿಯ ಬೊಗಸೆಯಲಿ 
ಆತನ ಸೃಷ್ಟಿಯ ಕನ್ನಡಿಯಲಿ 
ಕಂಡೆ ನಾ ಸೌಂದರ್ಯವ ಪ್ರತಿ ಅಂಚಿನಲ್ಲಿ" 

ಆ ಬೆಟ್ಟದ ಅಡಿಯಲ್ಲಿ ನಾನು ಆ ಗಾಳಿಯ ಪಿಸುಮಾತು ಆಗಸದ ಬಣ್ಣ ಭಾನುವಿನ ಆ ರಶ್ಮಿಯ ಸಾಲು ಸಾಲು ನನ್ನ ಇಷ್ಟು ದಿನದ ಎಲ್ಲ ದುಃಖ ದುಗುಡಗಳ ದೂರ ಮಾಡಿತು.

ಆ ಮೋಡಗಳ ಸಾಲುಗಳಲ್ಲಿ ಇದ್ದ ಆ ರವಿಯು ನನ್ನೊಂದಿಗೆ ಮರೆಯಾಗದೆ ಇದ್ದ, ಎಲ್ಲ ಜೀವಂತವಾದಂತೆ ನಾನು ಪರವಶಲಾದೆ. ಹಸಿರು ಚಿಗುರು ಎಲೆಗಳು ಭೂಮಿಗೆ ಅಂಟಿದ್ದ ಆ ಪೈರು ನಾನು ಬಾವನ ಲೋಕದಲ್ಲಿ ಸಂಚರಿಸುತಿದ್ದೆ.
ಆದರೆ  ಪ್ರತಿ ಆದಿಗೂ ಅಂತ್ಯವಿದೆ ಹಾಗೆಯೆ ನಮ್ಮ ಈ ಪಯಣಕ್ಕೂ.

ಆದರೆ ಪಯಣದ ಪ್ರತಿ ಹಂತದ ಆ ಅನುಭವ ನಿಜಕ್ಕೂ ಮನದ ಕದ ತಟ್ಟಿದೆ. ಆ ಕುಡಿದ ಎಳೆನೀರು, ಹಾದಿಯ ಮಧ್ಯದಲ್ಲಿ ಸೂರ್ಯನ " ರೇಸ್ " ಜೊತೆಗೆ ತಿಂದ ಆ "ಲೆಸ್" ನಿಜಕ್ಕೂ ನೆನಪಿನ ಪುಸ್ತಕದಲ್ಲಿ ತನ್ನ ಜಾಗವ ಕಾದಿರಿಸಿದೆ.


"ಪಯಣದ ಈ ಹಾದಿ ಸಾಗುತಿರಲಿ 
ಜೀವನದ ತಿರುವಿನಲ್ಲಿ ಹೊಸತು ವಿಷಯವಿರಲಿ 
ಪ್ರತಿ ಪಯಣದ ಸಂತೆಯಲಿ 
ನನ್ನ ಕಾವ್ಯದ ಗುಂಗು ಬೆರೆತಿರಲಿ"
ಆ ನೆನಪುಗಳ ಬಂಡಾರವ ನಾನು ಮನದ ಖಜಾನೆಯಲಿ ಜೋಪಾನ ಮಾಡುವೆ. ಸಂತಸದ ಹೊನಲು ಹೀಗೆ ಹರಿಯುತಿರಲಿ.
ಮನೆಯ ಸೇರಿ ಆ ರಾತ್ರಿಯ ಕನಸಲ್ಲೂ ನನ್ನ ಮುಖದ ಮೇಲೆ ಆ ಮುಗುಳ್ನಗೆ ಹಾಗೆ ಉಳಿದಿತ್ತು.
ನನ್ನ ಜೀವನದಲ್ಲಿ ಇಂತ ಒಂದು ದಿನವ ನೀಡಿದ ನಿನಗೆ ನನ್ನ ಧನ್ಯವಾದಗಳು.

Wednesday, September 14, 2011

ಕ್ಷಮೆ ಇರಲಿ

ದುಃಖದ ಮಡುವಿನಲ್ಲಿ ಕಣ್ಣಿರ ಹನಿ 
ಮಾತಿಲ್ಲದಿದ್ದರೂ ಮೂಡಿದ ದನಿ 
ಜೀವನದಲ್ಲಿ ನೋವಿನ ಒಂದು ಗಣಿ 
ತುಂಬಲಾರದೆ ಹೋದೆ ಅಲ್ಲಿ ನಗುವಿನ ಮಣಿ 

ದಿನದಲ್ಲಿ ತುಂಬಿದ್ದ ಸಂತಸ ಒಂದು ಮಾತಿಂದ ದೂರವಾಯ್ತು
ಪ್ರತಿ ಪದಗಳು ಮುಳ್ಳಾಯ್ತು
ಕಣ್ಣಿರ ಬಿಂದುವಿನಲ್ಲಿ ಸಂತಸವು ಕತ್ತಲೆಡೆಗೆ ಸಾಗಿತ್ತು
ಆ ಕತ್ತಲಲ್ಲಿ ನೋವು ಕಾಣದಾಯ್ತು

ನೆನಪಿರಲಿ ನನಗೆ ನಿನ್ನ ಆ ಎಲ್ಲಾ ಪದಗಳು 
ನಡೆಯುವ ಮನುಜ ಎಡವುದು ಸಹಜವೇ 
ತಿದ್ದಿ ನಡೆವ ಸಹಜತೆ ಮನದಲ್ಲಿ ಇರಲಿ
ಮನದಲ್ಲಿ ಮುಗ್ದತೆ ಎಂದೂ ಹಸಿರಾಗಿರಲಿ

ಮುಗ್ದ ಮನಸು ಬಯಸಿದ್ದು ಬಣ್ಣದ ಕನಸುಗಳು 
ಕಪ್ಪು ಬಣ್ಣವ ಹಚ್ಚ ಬಯಸಲಿಲ್ಲ ನಾ ಎಂದೂ
ಮನದ ಗಾಜನು ಒಡೆದ ಕ್ರೂರಿ ನಾನು 
ಜೋಡಿಸಲಾರೆ ಸರಿ ಮಾಡಲಾರೆ 

ಹೃದಯದಲ್ಲಿ ತುಂಬಿರುವ ಈ ತಪ್ಪು ಭಾವನೆ ದೂರ ಆಗಲಿ
ಎಲ್ಲರ ಮನವೂ ತಿಳಿ ನೀರಿನ ಕೊಳವಾಗಿರಲಿ
ನಾನು ಆ ನೀರಿಗೆ ಬೀಳುವ ಕಲ್ಲಾಗ ಬಯಸಲಿಲ್ಲ 
ಆ ನೀರಿಗೆ ಕ್ಷಣ ಕಾಲದ ಬಿಂದು ನಾನು !!!!!

Friday, August 19, 2011

ಬಾಂಧವ್ಯ

ಪ್ರೀತಿ ಜೀವನದ ಮಧುರ ತರಂಗ
ಅದಾಯ್ತು ಸುಂದರ ನೀ ಇರಲು ಸಂಗ 
ಬಾಳಿನಲಿ ನೀ ತುಂಬಿದೆ ಸಂತಸ 
ಸಾಗುತಿದೆ ನಿನ್ನೊಡನೆ ನನ್ನ ವರುಷ 

ವಸಂತದ ಚಿತ್ರಣ ತುಂಬಿರಲು
ನಗುವಿನ ಮುದ್ರೆ ನೀ ನೀಡಿರಲು
ನನ್ನ ಲೋಕವೇ ಬದಲಾಯ್ತು
ಕನಸಿನ ಹಾದಿ ನಿನ್ನೆಡೆಯಾಯ್ತು

ಮೌನವಾದ ನನ್ನನು ನುಡಿಸಿದೆ
ನುಡಿದ ಪದಗಳ ಕವಿತೆಯಾಗಿಸಿದೆ
ನೋವಿನ ಮುಖ ಕಾಣದಾದೆ
ಸುಖದ ಸಂಪದ ನೀನಾದೆ

ಈ ನಲ್ಮೆಯ ನಿಧಿಗೆ ಆಗದಿರಲಿ ಧಾಳಿ
ಮನದಲ್ಲಿ ನಿನ್ನ ಬಿಂಬ ತುಂಬಿರಲಿ
ಸಂತೋಷದ ಹೊಳೆ ಹರಿದಿರಲಿ
ನಮ್ಮಿಬ್ಬರ ಈ ಬಾಂಧವ್ಯ ಹಸನಾಗಿರಲಿ





Tuesday, August 16, 2011

ಮಳೆ

ಕಾರ್ಮೋಡದ ಒಡಲಿಂದ ಹರಿದಿತ್ತು ಮಳೆಯ ಮಾಲೆ
ಮಿಂಚಿನ ಕಿರಣಗಳ ಸಾಲು ಸಾಲೇ
ವೇಗವಾಗಿ ಬೀಸುತ್ತಿದ್ದ ಗಾಳಿಯ ಅಲೆ 
ನೀರಿನ ಬಿಂದುವಿನ ಮುತ್ತಿನ ಬಲೆ

ಮನೆಯ ಮೂಲೆಯ ಕಿಟಕಿಯಲಿ ಕಂಡೆ 
ನೀನು ನನ್ನ ನೆನಪಿನ ಅಲೆಯಲ್ಲಿ ತೇಲಿಬಂದೆ
ಹಸಿರು ಬಣ್ಣದ ಆ ಎಲೆಗಳ ಮೇಲೆ ಬೆಳ್ಳಿಯ ಉಂಗುರ 
ಸುಂದರ ಪರಿಸರ ಹಾಸಿತು ಪ್ರೇಮದ ಹಂದರ

ಮಳೆಯಲಿ ನೆನದ ಆ ನೆನಪುಗಳು
ತಂಪನು ಎರೆದ ನಿನ್ನ ಸವಿ ಮಾತುಗಳು 
ತಣ್ಣನೆ ಗಾಳಿಯಂತ ನಿನ್ನ ಸ್ನೇಹ 
ಎಲ್ಲವೂ ಮನವ ಕಾಡುತಿಹುದು ಈಗ 

ಹೊಸ ಲೋಕದ ಸೃಷ್ಟಿ ಅಲ್ಲಿ 
ಮಳೆಯ ಹನಿಯ ಚಿಟ ಪಟದಲ್ಲಿ 
ನೀರಿನ ಆ ಮುತ್ತಿನಲಿ 
ನಿನ್ನ ಮೊಗವ ಕಂಡೆನಲ್ಲಿ

ಪ್ರತಿ ಎಲೆಯು ನಿನ್ನ ಹೆಸರ ಕೂಗಿದಂತೆ
ನನ್ನ ಎದೆಯ ನುಡಿಯ ನುಡಿದಂತೆ 
ಅನಿಸಿಹುದು ನನಗೆ ಹೀಗೆ ಇಲ್ಲಿ 
ನೀನು ಸಹ ನನ್ನನು ನೆನದಿರಬಹುದೇ ಅಲ್ಲಿ?

-- ಅಂತಹ ಪ್ರತಿ ನಿನ್ನ ನೆನಪಿಗೂ ನನ್ನ ಈ ಕವಿತೆ 

Thursday, August 11, 2011

Dad!!! Its you

When I took my first step on this earth
You held my hand and walk me through
Everyday of my life is gift of you
Daddy I really love you!!

As I grew up you were my inspiration
You were the one who bought this transition
I am going stronger and you are the reason
I think of you for all my question(s)

Time passes and I miss your presence
But also I search my own existence
people say I am still to gain experience
Yes, I want to prove my perseverance

Stepping in this world I see myself alone
I have your principles with me which I own
The bonding is beautiful and cannot be shown
I just need your shadow to cure my pain

Dad you mean everything to me
You are the strength that keep me alive
Its true that I miss you
Yes, Daddy I Really love you!

Monday, August 8, 2011

ಭಾವನೆ

ಆ ಕರಿ ಮೋಡಗಳ ಸಾಲು ಸಾಲು
ಮಿಂಚಿನ ಬಣ್ಣದ ಸೊಡಲು
ಅಲೆ ಅಲೆ ಹೊಮ್ಮುವ ಕಡಲು
ಭಾವನೆಗಳ ಅರಳಿಸುವ ಈ ಒಡಲು

ಲೂಟಿ ಆದೆ ಆ ಭಾವನೆಗಳಿಗೆ 
ಮನವ ಮಿಡಿವ ಆ ಶ್ರುತಿಗೆ 
ಸ್ವರಕೆ ರಾಗ ಸೇರಿಸುವ ಆ ಶಕ್ತಿಗೆ 
ಕೊನೆಯೇ ಇಲ್ಲದ ಆ ಬಾಂದವ್ಯಕೆ

ಎಷ್ಟು ನೋಡಿದರೂ ಸಾಲದಷ್ಟು ನೋಟ 
ಎಷ್ಟು ನುಡಿದರೂ ಮುಗಿಯದ ಮಾತು
ಕಣ್ಣು ಕಣ್ಣ ಆ ಮೂಕ ಭಾಷೆಗೆ,
ಸೋಲದವರಿಲ್ಲ ಈ ಪ್ರೀತಿಗೆ

ಪ್ರೀತಿ ಮಧುರವಾದುದು
ಭಾಷೆಗೆ ಬಣ್ಣನೆಗೆ ನಿಲುಕದ್ದು
ನಿರ್ಮಲವಾದದ್ದು ಕೋಮಲವಾದುದು
ಕವಿಯ ರಚನೆಯಂತೆ 
ಇದು ಪ್ರಕೃತಿಯಂತೆ 
ಸದಾ ನಮ್ಮೊಂದಿಗೆ ಬೆರೆತಿಹುದಂತೆ!! 



Wednesday, August 3, 2011

ಅದೊಂದು ದಿನ

ಸ್ನೇಹಿತನೇ,

ಅಂದು ನಾನು ಹೇಳ ಬಯಸಿದೆ ಸಣ್ಣ ಪದವ 
ಅರಿಯದೆ ಅರಳಿಸಿತು ನನ್ನಲ್ಲಿ ಭಯದ ಕಣವ 
ಮನವು ನುಡಿಯುತಿತ್ತು ಆ ಮಧುರ ಮಾತು,
ಕೇಳಬಯಸುತಿತ್ತು ಅದನು ನಿನ್ನ ಬಳಿಯೇ ಕುಳಿತು 

ಆ ಕ್ಷಣಗಳು ವಿಸ್ಮಯ,
ನಾನಾದೆ ತನ್ಮಯ,
ನೀ ನುಡಿಸು ಬಾ ನನ್ನ ಹೃದಯ ವೀಣೆಯ,
ನೀನೆ ತಾನೆ ನನ್ನ ಬಾಳ ಗೆಳಯ!

ಮೌನವೆ ನುಡಿಯಾಯ್ತು ನುಡಿಯು ಕವಿತೆಯಾಯ್ತು 
ಬಾಳು ಹಸನಾಯ್ತು ನೋವು ಹುಸಿಯಾಯ್ತು
ಸಂಗೀತದ ಸ್ವರಗಳ ಸಮ್ಮಿಲನವಲ್ಲಿ
ಪನ್ನೀರ ಎರೆಯಿತು ನನ್ನ ಅಂಗಳದಲ್ಲಿ 

ಮನದಲ್ಲಿ ಆ ರೀತಿಯ ತೊಳಲಾಟ 
ಜೀವನದಲ್ಲಿ ಬಂಧನಗಳ ಈ ಆಟ 
ಬಿಡಿಸಲು ನೀನು ನನ್ನ ಕನಸುಗಳ ಗಂಟ
ಅಳಿಸದಿರು ಎಂದಿಗೂ ನೀ ನಮ್ಮಿಬ್ಬರ ಈ ನಂಟ


Sunday, July 24, 2011

ಸುರಿಮಳೆ

ಅಲ್ಲಿ ಸ್ನೇಹದ ಹರುಷದ ಸುರಿಮಳೆ,
ನಡೆದಿತ್ತು ಬದುಕಿನ ಭಾವನೆಗಳ ಸಮ್ಮಿಲನ,
ಜೀವನದ ಕೆಲವು ಕ್ಷಣಗಳಲ್ಲಿ ಸಂತಸದ ಸಂಚಲನ
ಇದು ನನ್ನ ಬಾನುವಾರದ ಸಂಜೆಯ ಒಂದು ಗಾನ!!

ಮನಸು ಅಲ್ಲಿ ಗರಿಗೆದರಿ ಹಾರುತ್ತಿತ್ತು
ಎಲ್ಲಾ ಮುಗ್ದತೆಯ ಸವಿ ನೆನಪುಗಳು 
ಅಲ್ಲಿ ಎಲ್ಲರೂ ಬಯಸಿದ್ದು ನಗುವಿನ ಹಾಡುಗಳು 
ಗುನುಗುನಿಸಿದ್ದು Sanireeta ಪದಗಳು!!

ಪಯಣದ ದಾರಿ ತುಂಬಾ ಚಿಕ್ಕದೆನಿಸಿತು 
ಕ್ಷಣಗಳು ಕ್ಷಣದಲ್ಲಿ ಮರೆಯಾಗುತಿತ್ತು
ಅಲ್ಲಿ ನನಗೆ ಕಂಡದೆಲ್ಲಾ ಹತ್ತಿರವಾಗುತಿತ್ತು
ಹಾಗೆ ಸಮಯ ನನ್ನಿಂದ ದೂರವಾಗುತಿತ್ತು!!

ಪ್ರತಿ ಪದಗಳು ಕವನವಾಯಿತು 
ಮನಸಲ್ಲಿ ಶಾಂತತೆ ನೆಲಸಿತು 
ಸಮೀಪದ ಸಂಗೀತ ಅಲ್ಲಿ ಕೇಳಿಸಿತು
ಆದರೆ ಕೊನೆಗೂ ವಿದಾಯ ಹೇಳುವ ಸಮಯ ಹತ್ತಿರವಾಯ್ತು!!!




Friday, May 27, 2011

ಒಂಟಿ

ಈ life ಲಿ ನಾನು ಒಬ್ಬಂಟಿ 
ಜೀವನವಾಯ್ತು twenty twenty
ಅಲ್ಲಿ ತುಂಬಿತ್ತು ಬರೀ ಶುಂಟಿ
ಇಲ್ಲವಾಯ್ತು ಇಲ್ಲಿ ಮಸ್ತಿ !!!!!

ಬಯಸುತ ಸೇರಿದೆ ಕೆಲವು  group
ಆದರೂ ಮನದ ಗೂಡು ಆಗಿತು ಕಲಬೆರಿಕೆ soup
ನನ್ನ ದಿನಗಳು ಆಗಿದೆ ಖಾಲಿ pipe 
ಈಗ ಎಲ್ಲರೂ ಅಂತಾರೆ ನಾನು ಒಂದು type !!!!

ಹೇಗೆ ತುಂಬಲಿ ಈ ದಿನಗಳಲಿ happiness
ಇರದಾಗಿದೆ ಇಲ್ಲಿ  ಬಂಧನದ sickness 
ಆವರಿಸಿದೆ ಇಲ್ಲಿ ತುಂಬಾ darkness 
ಕಣ್ಣಲ್ಲಿ ತುಂಬಿದೆ ಬರೀ tears !!!!

ಬೇಜಾರಾದ್ರೆ ಕಂಪ್ಯೂಟರ್ ನಲ್ಲಿ games 
ಹೊರಗಡೆ ಹೋದ್ರೆ traffic signals 
ದಿನಗಳು ಕಳೆದಿದೆ  without  friends 
ಬೇಕಿದೆ ಈಗ ಸಂತಸದ showers !!!!!   

ಪ್ರೀತಿ ತುಂಬುವುದಂತೆ energy 
ಆದರೂ ಜನರಲ್ಲಿ ತುಂಬಿದೆ stratergy 
ಜೀವನದಲ್ಲಿ ಹಾಕಿಕೊಂಡು ಹಲವೂ policy 
ಯಾವಾಗ ಸಿಗುವುದು ಇದಕ್ಕೆಲ್ಲಾ clarity !!!!

Thursday, May 19, 2011

Life ಇಷ್ಟೇನೆ

ನೆನಪಿನ ಅಂಗಳ ಚಿಕ್ಕದಾದ್ರು
ಕನಸಿನ ಕವಲು ಹಿರಿಯದಾದ್ರು 
ಬದುಕಿನ ಆಯಸ್ಸು limited ತಾನೆ 
Life ಇಷ್ಟೇನೆ !!!

ಅಲೆಗಳ ಹಾಗೆ ನಡೆವ ಬಾಳು
ಏಳು ಬೀಳು ಎಲ್ಲಾ ಉಂಟು
ಬೇವು ಬೆಲ್ಲದ ರುಚಿಯು ಹೆಚ್ಚು 
Life ಇಷ್ಟೇನೆ!!!!

ಅರ್ಥಗಳೆ ಇರದ ಪದವು ಇಹುದು
ಪ್ರೀತಿಯ ಅರಿಯದ ಲೋಕವು ಇಹುದು
ಇಂತ ಸಮಾಜದಿ ನೀನು ಬದುಕು 
Life ಇಷ್ಟೇನೆ!!! 

ಬೆಳಿಗ್ಗೆ ಎದ್ದು ಮುಖವ ತೊಳೆದು 
Brush ಮಾಡಿ ಕೆಲಸವ ಹುಡುಕು 
ಇಷ್ಟ ಇರದ ಕೆಲಸವ ಸೇರ್ಕೋ
Life ಇಷ್ಟೇನೆ!!!

ದಿನವೂ ದೇವರ ಪೂಜೆ ಮಾಡು 
ಬೇಕಿದ್ದು ಬೇಡದ್ದು ಎಲ್ಲ ಕೇಳ್ಕೋ 
ದೇವರೇ ನಿನಗೆ ವರವ ನೀಡಲಿ 
Life ಇಷ್ಟೇನೆ !!!

ಆಂಗ್ಲ ಭಾಷೆಯಲಿ ಓದನು ಮುಗಿಸು 
ವಿದೇಶಕ್ಕೆ ಪ್ರಯಾಣ ಮಾಡು
ಹೆಚ್ಚು ಹೆಚ್ಚು ಹಣವ ಗಳಿಸು 
Life ಇಷ್ಟೇನೆ!!

ಎಲ್ಲ tension  ತೊರೆದು ನೀನು
ಹೊಲದಿ ಒಮ್ಮೆ ಓಡಾಡು
ಮನದ ಶಾಂತಿಯ ಮರಳಿ ಪಡೆ 
Life ಇಷ್ಟೇನೆ!!!



ಪ್ರೇಮ ಕವನ

ನನ್ನ ಪ್ರತಿ ಹೆಜ್ಜೆಗಳ ಗುರುತು ನೀ ಆಗಬೇಕೆಂದು ನಾ ಬಯಸಿದೆ,
ನಿನ್ನದೇ ನೆನಪಿನಲ್ಲಿ ಮಗ್ನಳಾಗಿ ನಾ ನಿನ್ನ ಅರಸಿದೆ,
ಬಾಳ ಪಯಣದ ಒಂದೊಂದು ತಿರುವಿನಲೂ 
ಕೇವಲ ನಿನ್ನ ನೆರಳ ನಾ ಆಶಿಸಿದೆ!!

ನೂರೊಂದು ಕಿರಣಗಳ ಬಿರುತಾ ರವಿ ತಾ ಮೂಡಿದ 
ಆ ಕಿರಣಗಳ ಪದರಗಳಲಿ ನನ್ನ ಸೇರಿಸಿದ 
ಮೂಡಿಸಿದ ಮನದಲ್ಲಿ ಹೊಸ ಆಸೆಗಳ 
ತುಂಬುತ ಒಲವಿನಾಸರೆಯ ಕೆರೆಯ 

ಒಲಿದನು  ಒಲವಿನ ಚರಿತೆಯ ಬರೆಯುತ
ಹೃದಯದಲ್ಲಿ ಪ್ರೇಮದ ಮುಸುಕ ಎಳೆಯುತ 
ಕಳೆದು ಹೋದೆ ನಾ ನಿನ್ನಲ್ಲಿ  ಉಸಿರ ಸೇರಿಸುತ 
ಜೀವನದಲ್ಲಿ ಎಲ್ಲರಿಗೂ ಈ ಪ್ರೇಮದ ಮಾಹಿತಿ ನೀಡುತ 

ಜೀವನದ ಪುಟಗಳಲಿ ಬರೆದೆ ನಾನು ನಿನ್ನ ಹೆಸರು
ನನಗೆ ತಿಳಿದಿತ್ತು ನಾನೇ ನಿನ್ನ ಉಸಿರು
ನನ್ನ ಬದುಕಿನ ಹಾಲಿಗೆ ನೀನೇ ಮೊಸರು 
ನೀಡು ನನ್ನ ಕವನಗಳಿಗೆ ನೀ ಹಸಿರು!!!

  

Wednesday, May 11, 2011

ಅಲೆ

ಕಣ್ಣಂಚಿನಲ್ಲಿ ಹನಿಯೊಂದು ಮೂಡಿ ದನಿಯಾಯ್ತು ಹೇಗೋ ಈಗ,
ಬರಿದಾದ ಮನದಿ ಹೂ ಚಿಗುರಿತೊಂದು ಹೇಗೋ ತಾನೇ ಆಗ!!
ಕನಸನ್ನು ಕಾಣಲು ಅನುಮತಿಯ ತಂದೆಯಾ
ಮನದಲ್ಲಿ ಮೂಡಿಸಿ ಹೊಸ ಕವಿತೆಯ .....

ಬರಿಗೈಯಲ್ಲೇ ನಾ ಬರೆಯಬಲ್ಲೆ ಮನದಾಳದ ಮಾತು,
ನನ್ನಲ್ಲಿ ಮೂಡಿಸುತಾ ಪ್ರೇಮದ ಚಿತ್ತಾರದ ಮಾತು,
ಹೃದಯದ ಸೆರೆಮನೆಯೊಳಗೆ ನನ್ನ ನೀನು ಬಂಧಿಸಿ
ತೊಡಿಸುತ ನನ್ನ ಕೈಗೆ ನೀರ ಅಲೆಯ ಉಂಗುರ
ಆ ಅಲೆಯೇ ನನ್ನ  ಜೀವನದಿ ಮೂಡಿಸಿದೆ ಹೊಸ ರಂಗು
ಜೋಕಾಲಿಯಾಗಿ ತೂಗುತಿದೆ ನಿನ್ನ ಪ್ರೇಮದ ಗುಂಗು

ಮಣ್ಣಿನ ಕಣ ಕಣದಲ್ಲೂ ನಿನ್ನ ನೆನಪಿನ ಮಳೆಯ ಕಂಪು
ಹಾದಿಯಲ್ಲೆಲ್ಲಾ ಹೂವಿನ ಆ ನವಿರಾದ ಕಂಪು
ಬೆಳಕಿನ ಬಣ್ಣದ ಕಾಮನಬಿಲ್ಲು
ಕಟ್ಟಿರುವೆ ನಾನು ಅಲ್ಲಿ ಪ್ರೇಮದ ಮಹಲು
ಆ ಮಹಲೇ ನನ್ನ ಬಾಳ ಮೈಲಿಗಲ್ಲು
ಅಲ್ಲಿ ನೀನು ಹೀಗೆ ಪ್ರೀತಿಯ ಚೆಲ್ಲು.....

Tuesday, April 5, 2011

ಹೃದಯ ಮಿಲನ

ಸ ರಿ ಗ ಮ ಪ ದ ನಿ ನುಡಿದಿದೆ ನನ್ನ ಈ ಉಸಿರು
ಬೆಳಕಿನ ಹಾದಿ ತೆರೆದಿದೆ ಹೀಗೆಯೇ
ಕಣ್ಣು ಕಣ್ಣಿನ ಮಿಲನದಿ ಹೃದಯ ಹೃದಯಗಳ ಕಚಗುಳಿ
ಬರೆಯುತ ಹೊಸ ಪ್ರೇಮ ಪದಕೆ ಮುನ್ನುಡಿ!!!

ನನ್ನಯ ಒಲುಮೆಯ ಪ್ರೇಮ ಕವಿತೆ ನೀನು
ನನ್ನಯ ಕನಸಿನ ನನಸಾದೆ ನೀನು
ಹೇಗೆಂದು ಬಣ್ಣಸಲಿ ನಿನ್ನ ಪ್ರೇಮದ ಬಣ್ಣಗಳನು
ಚಿತ್ತಾರ ಬರೆದೆ ನನ್ನ ಜಗತ್ತಲಿ ಹೊಸ ರಂಗು ತುಂಬಿ ನೀನು 

ಬರೆಯುತ ಹೊಸ ಪ್ರೇಮ ಪದಕೆ ಮುನ್ನುಡಿ!!!

ಸ ರಿ ಗ ಮ ಪ ದ ನಿ...........

ಕಣ್ಣನು ಕಾಯುವ ರೆಪ್ಪೆಯಂತಾದೆ ನೀ
ದಾರಿಯ ತೋರುವ ಬೆಳಕಂತಾದೆ ನೀ
ನನ್ನ ಕಣ ಕಣದಲು ಸೇರಿದೆ ನಿನ್ನ ಪ್ರೀತಿಯ ಮಂಪರು
ನಿನ್ನ ಹೃದಯವ ಹೀಗೆ ಸೇರುವೆ ನಾನಾಗಿ ಮಳೆ ತುಂತುರು 

ಬರೆಯುತ ಹೊಸ ಪ್ರೇಮ ಪದಕೆ ಮುನ್ನುಡಿ!!
ಸ ರಿ ಗ ಮ ಪ ದ ನಿ...........



Tuesday, March 15, 2011

ಪ್ರಕೃತಿ

ಹಸಿರು ಬೆಟ್ಟಗಳ ನಡುವಲಿ, ಬಾನಿನ ಅಂಚಿನ ಬೆಳಕಲಿ
ಸೌಂದರ್ಯ ತುಂಬಿದ ಪ್ರಕೃತಿಯಲಿ
ಕವಿಯ ಕವಿತೆಯ ಕದ ತೆರೆಯಲಿ
ಹೃದಯ ಮೀಟುವ ನಾದ ಜನರ ಮನ ಮುಟ್ಟಲಿ

ಸುಂದರ ಬದುಕು, ಸುಂಟರಗಾಳಿಗೆ ಸಿಲುಕದಿರಲಿ
ಪ್ರಕೃತಿ ಎಂದೆಂದೂ ನಗುತ ಇರಲಿ
ಚೈತ್ರದ ಕಂಪು ಎಲ್ಲೆಡೆ ತುಂಬಿರಲಿ
ತಣ್ಣನೆ ಸಿಹಿ ಗಾಳಿ ಉಲ್ಲಾಸವ ಹರಡಲಿ

ಇದು ಪರಿಸರದ ಎಚ್ಚರಿಕೆಯ ಘಂಟೆ
ಹರಡಲಿದೆ ವಿಷದ ಕಂತೆ
ಮಾನವ ಬದುಕುವದ ಕಲಿ
ಇದಲ್ಲ ನಿನ್ನ ಸಾಮ್ರಾಜ್ಯದ ಸಂತೆ

ಕಾಣದ ಲೋಕದ ಸಾಮ್ರಾಜ್ಯದ ಅರಸ
ಹಿಡಿದಿರುವ ನಮ್ಮ ಉಸಿರಿನ ಗಂಟ
ಹಾಳು ಮಾಡಿದಷ್ಟು ಆತನ ಆಸ್ತಿ
ಪಡೆವ ತಪ್ಪಿಗೆ ತಕ್ಕ ಶಾಸ್ತಿ!!!


Wednesday, February 2, 2011

ನಿನ್ನ ನೆನಪು

ನನ್ನನಗಲಿ ನೀನು ಹೋದ ಆ ಗಳಿಗೆ
ಬಾನನ್ನಗಲಿ ಸೂರ್ಯ ಮುಳುಗಿದ ದುಃಖದಲಿ
ನೀನಿರಲು ನನ್ನ ನರನಾಡಿಯಲಿ
ತುಂಬುವುದು ಹರುಷದ ಸುಧೆ ಮನಸಿನಲಿ
ನೀ ತರುವೆ ಒಲಿವಿನ ಮಧು ನನ್ನ ಜೀವನದಿ ನಾ ಸೇರುವೆನು ನಿನ್ನನು ಆಗಿ ನದಿ

ನೀ ಇರಲು ನಾ ಇರುವೆ ಪ್ರೇಮ
ನನ್ನುಸಿರು ನೀ ತಾನೆ ಪ್ರೇಮ !!!!

ನಿನ್ನ ಜೊತೆ ಜೊತೆಯಾಗಿ ಸಾಗುತ್ತಿದ್ದ  ನನ್ನ ಪಾದ ನಿನ್ನ ಹೆಜ್ಜೆ ಗುರುತನು ಅರಸುತಿದೆ
ಕನ್ನಡಿಯ ಹಿಂದಿಂದ ಕಾಣುತ್ತಿದ್ದ ಪ್ರತಿರೂಪ ಬಿಂಬವನ್ನು ತಾನು ಅರಸುತಿದೆ
ಬಯಸಿ ಬಂದ ಬಾಳಿನಲಿ ಕನಸ ಕಾಣೋ ಕ್ಷಣಗಳಲಿ
ಕಳೆದು ಹೋದ ದಾರಿಯ ಹುಡುಕುತಿರುವೆನು ಏಕೋ?
ಬೆಳಕನ್ನು ಕಾಣದ ಈ  ದಾರಿಯಲಿ ನಿನ್ನ ನೆರಳನ್ನು ನಾ ಹೇಗೆ ಹುಡುಕುತಿರಲಿ?

ನೀ ಇರಲು ನಾ ಇರುವೆ ಪ್ರೇಮ
ನನ್ನುಸಿರು ನೀ ತಾನೆ ಪ್ರೇಮ !!!!

ಮನಸ ತುಂಬಿ ಚೆಲ್ಲಿ ಹೋದ ಪ್ರೇಮದ ಧಾರೆ ನೀನು, ನಿನ್ನ ನಾನು ಹೇಗೆ ಕಳೆದುಕೊಳ್ಳಲಿ?
ಉಸಿರು ಉಸಿರುನಲ್ಲಿಯೂ ಸೇರಿಹೋದಂತಹ ಪರಿಮಳದ ಹೂವು ನೀನು,
ನಿನ್ನ ಬಿಟ್ಟು ಬಾಳಿನಲಿ ಇರಲಾರೆ  ನೆನಪಿನಲಿ
ಸುಳಿದು ಬರಲಾರೆಯ ಹೀಗೆ ತಂಗಾಳಿಯಲಿ
ಪ್ರೇಮವೆ ತುಂಬಿರುವ ಈ ಲೋಕದಲಿ ಕೋಪದ ನೆರಳು ಸಹ ಕಾಣದಿರಲಿ

ನೀ ಇರಲು ನಾ ಇರುವೆ ಪ್ರೇಮ
ನನ್ನುಸಿರು ನೀ ತಾನೆ ಪ್ರೇಮ !!!!




In the tunes of Nan odali nuvvu from movie oye


Saturday, January 29, 2011

Time & Feelings

Its been many days since I relate myself with you,
Could you feel the distance that's creating
Never expected anyting much from you.
But seems that you feel I am expecting too much from you

Time plays a vital role in anyone's life.
Happiness and sadness become part of it
Its difficult to act to be happy
I need a hand which holds me tightly.

Bind us together, I am scared
Please try to heal this wound
Kill the loneliness and make me alive
Feel it for me to see it alike!!

I suppose that we aren't so busy
but acts are seen to be
be the one you were
I dont wanna see any changes for me

Share the love share the pain
I am there for you all the time
Is this promise only from me
Feel my Love to believe me


ಒಲವಿನ ಮಾಂತ್ರಿಕ

ತರ ತರ ಇದು ಯಾವ ತರ ಭಾವನೆಯ ಅಲೆ ನನ್ನೊಳಗೆ
ಸರ ಸರ ಸುಳಿಯುತಿದೆ ಉಲಿಯುತಿದೆ ಉಸಿರು ಉಸಿರೊಳಗೆ
ಆ ಭಾವನೆಯ ಕಲ್ಪನೆಯ ಮಾಂತ್ರಿಕ ನೀನು
ಆ ಕವಿತೆಗಳ ಪುಟಗಳಲಿ ಸೇರಬೇಕು ನಾನು!!!



ನಿನ್ನ ಭೇಟಿ ಆದ ಆ ಕ್ಷಣಗಳು, ಮನದೊಳಗೆ ಸೇರಿಕೊಂಡು ಹೊಸ ರಾಗವ ಹಾಡುತಿದೆ
ನಿನ್ನ ಮುದ್ದು ಮುದ್ದು ಮಾತಿನ ಧಾಟಿ ನನ್ನನು ಪ್ರೇಮದಿಂದ ನಿನ್ನೆಡೆಗೆ ದೂಡುತಿದೆ ,
ಹೊಸದಾದ ಪ್ರೇಮ ಕಾವ್ಯ ನೀ ಬರೆದೆ ನನ್ನ ಬಾಳಿನಲಿ
ನೀ ತಂದೆ ಹೊಸ ಕನಸು ಹೇಗೆಂದು ನಾ ಅದ ಬಣ್ಣಿಸಲಿ!!




ಕಣ್ಣು ತಾನುತಾನೆ  ಕಾಣದಂತ ಹೊಸದಾದ ಕನಸುಗಳನ್ನು ಹೆಣೆದವನು ನೀನಲ್ಲವೇ,
ಬಾಳಿನಲ್ಲಿ ನಾನು ಬಯಸದಂತ ಸಂಭ್ರಮದ ಅಲೆಯನ್ನೆಲ್ಲಾ  ತಂದವನು ನೀನಲ್ಲವೇ
ರವಿಯಂತೆ ನೀ ಬಂದೆ ಕತ್ತಲಾದ ನನ್ನ ಬಾಳಿನಲಿ,
ಎಂದೆಂದೂ ಮಾಸದಂತ ಪ್ರೇಮವಾಗು ನನ್ನ ಉಸಿರಿನಲಿ



ತರ ತರ ಇದು ಯಾವ ತರ ಭಾವನೆಯ ಅಲೆ ನನ್ನೊಳಗೆ
ಸರ ಸರ ಸುಳಿಯುತಿದೆ ಉಲಿಯುತಿದೆ ಉಸಿರು ಉಸಿರೊಳಗೆ
ಆ ಭಾವನೆಯ ಕಲ್ಪನೆಯ ಮಾಂತ್ರಿಕ ನೀನು
ಆ ಕವಿತೆಗಳ ಪುಟಗಳಲಿ ಸೇರಬೇಕು ನಾನು!!!

ಅಂಬರವೆ ಓ ಅಂಬರವೆ ಬಣ್ಣಗಳ ಚೆಲ್ಲು ಬಾ ನೀನು,
ಹೊಸದಾದ ಲೋಕವನು ತೋರುವೆನು ನಿನಗೆ ನಾನು
ನನ್ನ ಹೃದಯದಲಿ ಅಡಗಿರುವ ಕವನಗಳು ನೀನೆ
ನಿನ್ನೊಳಗೆ ಹುದುಗಿರುವ ಪ್ರೇಮಧಾರೆ ನಾನೆ!!!

Friday, January 28, 2011

ಹತ್ತು ರೂಪಾಯಿ!!

ಬಹಳ ದಿನಗಳ ಬಳಿಕ ಮತ್ತೆ ಕವಿತೆ ಕವನಗಳ ಬರೆವ ಮನಸಾಯ್ತು
ಎಲ್ಲೊ ಕಳೆದ ದಿನಗಳು ಸ್ನೇಹಿತರ ನೆನಪು ಕಾಡತೊಡಗಿತು

ಇದು ಕಾಲೇಜ್ ಓದುತ್ತಿದ್ದ  ಸಮಯ, ನಾನು ಅಲ್ಲಿ ಯಾವ ಗುಂಪಿಗೂ ಸೇರಿದವಳಲ್ಲ,
ಹಾಗೆಂದು ನನಗೆ ಸ್ನೇಹಿತರು ಕಡಿಮೆ ಏನೂ ಇಲ್ಲ ,ಪ್ರತಿ ಬೆಂಚಿನ ಪ್ರತಿಯೊಬ್ಬರೊಡನೆ ಮಾತಾಡುತಿದ್ದೆ!!
ಆಗ ನಂಗೆ ಶಾಲೆಯ ಸ್ನೇಹಿತರ ಓಡನಾಟವೆ ಹೆಚ್ಚು ಇತ್ತು !!
ಆಗ ಪರಿಚಯವಾದದ್ದು ಅಶ್ವಿನಿ, ಚೇತನ್, ರವಿ, ಚರಣ್ ಹಾಗೂ ಇಂದ್ರಜಿತ್.

ನಾನು ದಿನ ಕಳೆಯುತ್ತಿದ್ದಂತೆ ಅವರಿಗೆ ಹತ್ತಿರವಾಗುತಿದ್ದೆ, ಅವೆರಲ್ಲರೂ ನನ್ನ ಈ ಬಾಳಿನ ನಲ್ಮೆಯ ಸ್ನೇಹಿತರಾದರು!!

ಚೇತು ( ಚೇತನ್) ಬಹಳ ತುಂಟ ಕಾಲೇಜ್ ಪ್ರತಿಯೊಬ್ಬರನ್ನು ನಕ್ಕು ನಗಿಸುವುದೇ ಅವನ ಕೆಲಸ ಅವನಿಗೆ  Hrithik  ಅಂದ್ರೆ ಪ್ರಾಣ, ಅವನ ಹಾಗೆ ನೃತ್ಯ ಕೂಡ ಮಾಡ್ತಿದ. ನಾನು ಮೊದಲು ರಕ್ಷಾ ಬಂದನ ಕಟ್ಟಿದ್ದೂ ಸಹ ಅವನಿಗೆ.

ಇಂದು(ಇಂದ್ರಜಿತ್) ಮುದ್ದು ಹುಡುಗಿ, ಶಾಕ್ ಆಗಬೇಡಿ ಇದು ಹುಡುಗಿಯ ಹೆಸರೇ! ಮೂಲತಃ ಪಂಜಾಬಿ ಹುಡುಗಿ, ಬಹಳ ಬುದ್ದಿವಂತೆ.  ನನ್ನ ಆತ್ಮಿಯ ಗೆಳತಿ ಸಹ, ಲೈಫ್ ಲಿ ಈಜಿ ಗೋ ಅನ್ನೋ ಹುಡುಗಿ.

ಚರಣ್( ಚೆರ್ರಿ) ನನ್ನ ಒಡನಾಟ ಅವನೊಂದಿಗೆ ಅಷ್ಟಾಗಿ ಇರದಿದ್ದರೂ ಈಗ ನನ್ನ ಅಚ್ಚು ಮೆಚ್ಚಿನ ಗೆಳಯ ಅವನು!!

ರವಿ, ಕಂಡ ಮೊದಲ ದಿನವೇ ಪ್ರೇಮದ ಆಗಮನ, ಯಾರೋ ನಂಬೋದಿಲ್ಲ ಮುಗ್ಧ ಮನಸಿನ ಹುಚ್ಚು ಪ್ರೇಮ, ಅವನು ನನ್ನಿಂದ ದೂರ ಇದ್ದ ಕ್ಷಣಗಳೇ ಹೆಚ್ಚು, ಆದರೂ ಅಲ್ಲಿ ಒಲವಿನ ಮಿಡಿತದ ಸಮ್ಮಿಲನ. ಅವನು ವಾರ್ಷಿಕೋತ್ಸವದ ಸಮಯದಲ್ಲಿ ಸೋನು ನಿಗಮ್ ನ " ದೀವಾನ" ಆಲ್ಬಮ್ ನ ಹಾಡುಗಳನ್ನು ಎಲ್ಲರಿಗೂ ಕೇಳಿಸುತ್ತಿದ್ದ , ಆ ದಿನವೇ ನನ್ನ ಮನದ ಪುಟಗಳಲ್ಲಿ ಅವನ ಹೆಸರಿನ ಕವನ ಚಿಗುರೊಡೆದಿತ್ತು.

ಇವರೆಲ್ಲ ಇಂದಿಗೂ ನನ್ನ ಬಾಳಿನ ಅಮೂಲ್ಯ ರತ್ನಗಳು!!

ಪ್ರತಿ ದಿನವು ಹುಡುಗರ ಕಡೆ ಇಂದ ಹುಡುಗಿರು ಇರೋ ಕಡೆಗೆ ಒಂದು ಪತ್ರ ರವಾನೆ ಅದರಲ್ಲಿ ಇರುವ ವಿಚಾರ ಏನೆಂದರೆ, " ಹತ್ತು ರೂಪಾಯಿ !!" ಅದು ಕೊನೆಯಲ್ಲಿ ನನ್ನ ಕೈ ಸೇರುತ್ತಿತ್ತು, ನಾನು ಅವರಿಗೆ ಆ ಹಣವನ್ನು ನೀಡುವ ಚಂದದಾರಳು.
ಅದು ಪ್ರತಿ ದಿನದ ವಹಿವಾಟು ಆ ದುಡ್ಡಿನಲ್ಲಿ ೩ ಜನ ಒಂದೇ ಬೈಕ್ ನ ಮೇಲೆ ಸವಾರಿ ಒಮ್ಮೊಮ್ಮೆ !!

ಅವರ ಸ್ನೇಹಮಯಿ ಮನಸು ನನ್ನ ಮನಸಿಗೆ ಬಹಳ ಶಾಂತತೆ ತಂದು ಕೊಟ್ಟಿತ್ತು. ಈಗಲೂ ನನ್ನ ಪುಟ್ಟ ಪ್ರಪಂಚದ ಕವಲುಗಳು ಇವರು. ಸದಾ ನನ್ನೊಂದಿಗೆ ಅವರ ನೆನಪುಗಳು ಉಳಿದಿರಲಿ.
 
  
 Dedicated to chetu cherry ravi and Indu





Creative Commons Licence
This work is licensed under a Creative Commons Attribution-ShareAlike 3.0 Unported License.