ಹೆಗಲಲಿ ಹೊತ್ತ ಬ್ಯಾಗ್, ನಡು ಬಿಸಿಲಿನ ಚುರು ಚುರು ಸುಡುವ ಆ ಸೂರ್ಯ, ಬೈಕನ ಚಕ್ರಗಳು ಅದನ್ನು ಲೆಕ್ಕಿಸದೆ ವೇಗದಲ್ಲಿ ಸಾಗುತಿತ್ತು. ದೊಡ್ಡದಾದ " ನೈಸ್" ರಸ್ತೆಯಲ್ಲಿ ಪಕ್ಕದಲ್ಲಿ ನಮ್ಮೊಡನೆ ಸಾಗುತ್ತಾ ದೂರವಾಗುತ್ತಿದ್ದ ತೆಂಗು ಹಾಗು ಅಡಿಕೆ ಮರಗಳು ಬಿರ್ರನೆ ಬೀಸುತ್ತಿದ್ದ ಕಲುಷಿತ ಬಿಸಿ ಗಾಳಿ. ಹಾಗೆ ಮಾತಿನ ಬಿರುಸು ಚಟುವಟಿಕೆ ನಮ್ಮಿಬ್ಬರ ಮಧ್ಯೆ ನಾವು ಹೋಗುತ್ತಿದ್ದ ತಿರುವನ್ನು ಮರೆಸಿತು.
ಅಲ್ಲಿಯೇ ಸಾಗುತ್ತಿದ್ದ ಒಬ್ಬಾತ ನಾವು ೩ಕಿ ಮಿ ಅಷ್ಟು ಮುಂದೆ ಬಂದಿದ್ದೇವೆಂದು ತಿಳಿಸಿದ, ಮತ್ತೆ ಹಿಂದಿರುಗಿ ನಮ್ಮ ಪಯಣ ಸಾಗಿತು. ಗಾಳಿಯ ಸ್ಪರ್ಶ ತಣ್ಣಗಾಯಿತು, ಸೂರ್ಯನ ಕಿರಣಗಳು ನಮ್ಮನು ತಾಕುತ ಸ್ವಾಗತ ಕೋರಿದಂತೆ ಅನಿಸಿತು. ಅಲ್ಲಿದ್ದ ಆ ಮರಗಳು ಅವುಗಳ ಪಿಸುಮಾತು ನಮ್ಮ ಈ ಪಯಣಕ್ಕೆ ಸುಂದರ ಅನುಭವವ ನೀಡಿತು.
ಮುಂದೆ ಸಾಗುತ್ತಾ ನಾವು ದಾರಿಯಲ್ಲಿ ಕಂಡ ಹಸಿರು ಆ ಪರಿಸರ ಮನದ ಮೂಲೆಯಲ್ಲಿ ತುಂಬಿದ ದುಗಡವೆಲ್ಲಾ ದೂರ ಮಾಡಿತು. ಮೋಡದ ಮರೆಯಲ್ಲಿ ರವಿ ತಾನು ಬೆಟ್ಟಗಳ ಮೇಲೆ ತನ್ನ ಕಿರಣಗಳ ಚೆಲ್ಲುತಾ ಕಚಗುಳಿಯ ಅನುಭವವ ಮಾಡಿರಬಹುದು. ಅದೇ ಹಾದಿಯಲಿ ನನ್ನ ಮನ ಕವಿತೆಯ ಪದಗಳ ಹೆಕ್ಕುತಿತ್ತು.
ಆ ಬೆಟ್ಟದ ಅಡಿಯಲ್ಲಿ ನಾನು ಆ ಗಾಳಿಯ ಪಿಸುಮಾತು ಆಗಸದ ಬಣ್ಣ ಭಾನುವಿನ ಆ ರಶ್ಮಿಯ ಸಾಲು ಸಾಲು ನನ್ನ ಇಷ್ಟು ದಿನದ ಎಲ್ಲ ದುಃಖ ದುಗುಡಗಳ ದೂರ ಮಾಡಿತು.
ಆ ಮೋಡಗಳ ಸಾಲುಗಳಲ್ಲಿ ಇದ್ದ ಆ ರವಿಯು ನನ್ನೊಂದಿಗೆ ಮರೆಯಾಗದೆ ಇದ್ದ, ಎಲ್ಲ ಜೀವಂತವಾದಂತೆ ನಾನು ಪರವಶಲಾದೆ. ಹಸಿರು ಚಿಗುರು ಎಲೆಗಳು ಭೂಮಿಗೆ ಅಂಟಿದ್ದ ಆ ಪೈರು ನಾನು ಬಾವನ ಲೋಕದಲ್ಲಿ ಸಂಚರಿಸುತಿದ್ದೆ.
ಆದರೆ ಪ್ರತಿ ಆದಿಗೂ ಅಂತ್ಯವಿದೆ ಹಾಗೆಯೆ ನಮ್ಮ ಈ ಪಯಣಕ್ಕೂ.
ಆದರೆ ಪಯಣದ ಪ್ರತಿ ಹಂತದ ಆ ಅನುಭವ ನಿಜಕ್ಕೂ ಮನದ ಕದ ತಟ್ಟಿದೆ. ಆ ಕುಡಿದ ಎಳೆನೀರು, ಹಾದಿಯ ಮಧ್ಯದಲ್ಲಿ ಸೂರ್ಯನ " ರೇಸ್ " ಜೊತೆಗೆ ತಿಂದ ಆ "ಲೆಸ್" ನಿಜಕ್ಕೂ ನೆನಪಿನ ಪುಸ್ತಕದಲ್ಲಿ ತನ್ನ ಜಾಗವ ಕಾದಿರಿಸಿದೆ.

"ಬದುಕಿನ ಭವ್ಯತೆಯ ಮುನ್ನುಡಿಯಲಿ
ದೈವ ತಾ ನೀಡಿದ ಅಚ್ಚರಿಯ ಬೊಗಸೆಯಲಿ
ಆತನ ಸೃಷ್ಟಿಯ ಕನ್ನಡಿಯಲಿ
ಕಂಡೆ ನಾ ಸೌಂದರ್ಯವ ಪ್ರತಿ ಅಂಚಿನಲ್ಲಿ"
ಆ ಬೆಟ್ಟದ ಅಡಿಯಲ್ಲಿ ನಾನು ಆ ಗಾಳಿಯ ಪಿಸುಮಾತು ಆಗಸದ ಬಣ್ಣ ಭಾನುವಿನ ಆ ರಶ್ಮಿಯ ಸಾಲು ಸಾಲು ನನ್ನ ಇಷ್ಟು ದಿನದ ಎಲ್ಲ ದುಃಖ ದುಗುಡಗಳ ದೂರ ಮಾಡಿತು.
ಆ ಮೋಡಗಳ ಸಾಲುಗಳಲ್ಲಿ ಇದ್ದ ಆ ರವಿಯು ನನ್ನೊಂದಿಗೆ ಮರೆಯಾಗದೆ ಇದ್ದ, ಎಲ್ಲ ಜೀವಂತವಾದಂತೆ ನಾನು ಪರವಶಲಾದೆ. ಹಸಿರು ಚಿಗುರು ಎಲೆಗಳು ಭೂಮಿಗೆ ಅಂಟಿದ್ದ ಆ ಪೈರು ನಾನು ಬಾವನ ಲೋಕದಲ್ಲಿ ಸಂಚರಿಸುತಿದ್ದೆ.
ಆದರೆ ಪ್ರತಿ ಆದಿಗೂ ಅಂತ್ಯವಿದೆ ಹಾಗೆಯೆ ನಮ್ಮ ಈ ಪಯಣಕ್ಕೂ.
ಆದರೆ ಪಯಣದ ಪ್ರತಿ ಹಂತದ ಆ ಅನುಭವ ನಿಜಕ್ಕೂ ಮನದ ಕದ ತಟ್ಟಿದೆ. ಆ ಕುಡಿದ ಎಳೆನೀರು, ಹಾದಿಯ ಮಧ್ಯದಲ್ಲಿ ಸೂರ್ಯನ " ರೇಸ್ " ಜೊತೆಗೆ ತಿಂದ ಆ "ಲೆಸ್" ನಿಜಕ್ಕೂ ನೆನಪಿನ ಪುಸ್ತಕದಲ್ಲಿ ತನ್ನ ಜಾಗವ ಕಾದಿರಿಸಿದೆ.
"ಪಯಣದ ಈ ಹಾದಿ ಸಾಗುತಿರಲಿ
ಜೀವನದ ತಿರುವಿನಲ್ಲಿ ಹೊಸತು ವಿಷಯವಿರಲಿ
ಪ್ರತಿ ಪಯಣದ ಸಂತೆಯಲಿ
ನನ್ನ ಕಾವ್ಯದ ಗುಂಗು ಬೆರೆತಿರಲಿ"
ಆ ನೆನಪುಗಳ ಬಂಡಾರವ ನಾನು ಮನದ ಖಜಾನೆಯಲಿ ಜೋಪಾನ ಮಾಡುವೆ. ಸಂತಸದ ಹೊನಲು ಹೀಗೆ ಹರಿಯುತಿರಲಿ.
ಮನೆಯ ಸೇರಿ ಆ ರಾತ್ರಿಯ ಕನಸಲ್ಲೂ ನನ್ನ ಮುಖದ ಮೇಲೆ ಆ ಮುಗುಳ್ನಗೆ ಹಾಗೆ ಉಳಿದಿತ್ತು.

ನನ್ನ ಜೀವನದಲ್ಲಿ ಇಂತ ಒಂದು ದಿನವ ನೀಡಿದ ನಿನಗೆ ನನ್ನ ಧನ್ಯವಾದಗಳು.
No comments:
Post a Comment