ದುಃಖದ ಮಡುವಿನಲ್ಲಿ ಕಣ್ಣಿರ ಹನಿ
ಮಾತಿಲ್ಲದಿದ್ದರೂ ಮೂಡಿದ ದನಿ
ಜೀವನದಲ್ಲಿ ನೋವಿನ ಒಂದು ಗಣಿ
ತುಂಬಲಾರದೆ ಹೋದೆ ಅಲ್ಲಿ ನಗುವಿನ ಮಣಿ
ದಿನದಲ್ಲಿ ತುಂಬಿದ್ದ ಸಂತಸ ಒಂದು ಮಾತಿಂದ ದೂರವಾಯ್ತು
ಪ್ರತಿ ಪದಗಳು ಮುಳ್ಳಾಯ್ತು
ಕಣ್ಣಿರ ಬಿಂದುವಿನಲ್ಲಿ ಸಂತಸವು ಕತ್ತಲೆಡೆಗೆ ಸಾಗಿತ್ತು
ಆ ಕತ್ತಲಲ್ಲಿ ನೋವು ಕಾಣದಾಯ್ತು
ನೆನಪಿರಲಿ ನನಗೆ ನಿನ್ನ ಆ ಎಲ್ಲಾ ಪದಗಳು
ನಡೆಯುವ ಮನುಜ ಎಡವುದು ಸಹಜವೇ
ತಿದ್ದಿ ನಡೆವ ಸಹಜತೆ ಮನದಲ್ಲಿ ಇರಲಿ
ಮನದಲ್ಲಿ ಮುಗ್ದತೆ ಎಂದೂ ಹಸಿರಾಗಿರಲಿ
ಮುಗ್ದ ಮನಸು ಬಯಸಿದ್ದು ಬಣ್ಣದ ಕನಸುಗಳು
ಕಪ್ಪು ಬಣ್ಣವ ಹಚ್ಚ ಬಯಸಲಿಲ್ಲ ನಾ ಎಂದೂ
ಮನದ ಗಾಜನು ಒಡೆದ ಕ್ರೂರಿ ನಾನು
ಜೋಡಿಸಲಾರೆ ಸರಿ ಮಾಡಲಾರೆ
ಹೃದಯದಲ್ಲಿ ತುಂಬಿರುವ ಈ ತಪ್ಪು ಭಾವನೆ ದೂರ ಆಗಲಿ
ಎಲ್ಲರ ಮನವೂ ತಿಳಿ ನೀರಿನ ಕೊಳವಾಗಿರಲಿ
ನಾನು ಆ ನೀರಿಗೆ ಬೀಳುವ ಕಲ್ಲಾಗ ಬಯಸಲಿಲ್ಲ
ಆ ನೀರಿಗೆ ಕ್ಷಣ ಕಾಲದ ಬಿಂದು ನಾನು !!!!!
No comments:
Post a Comment