Saturday, December 10, 2011

ಬಂಧನ

ಎಲ್ಲೋ ಅಳಿದುಹೋಗುತ್ತಿದ್ದ ಪ್ರೀತಿಯ ಭರವಸೆಯ ನನ್ನಲ್ಲಿ ಮೂಡಿಸಿದೆ
ಬಾಡಿ ಹೋಗುತ್ತಿದ್ದ ಬಳ್ಳಿಗೆ ನೀರಿನ ಆಸರೆಯಾದೆ!
ಸಂತಸವ ಹರಡುವ ಭಾವನೆಯ ತಂದೆ
ನನ್ನ ಪುನಃ ಜೀವಂತವಾಗಿಸಿದೆ!

ಹೇಗೋ ಏನೋ ತಿಳಿಯದೆ ನಿನ್ನಲ್ಲಿ ನಂಬಿಕೆ ಅತಿರೇಕವಾಯ್ತು
ಬಣ್ಣದ ಆಗಸದಲ್ಲಿ ಹಾರುವ ನನಗೆ ರೆಕ್ಕೆಯ ಕಳೆದುಕೊಂಡತಾಯ್ತು
ಸದಾ ನಾನು ನಿನ್ನ ನೋವಿಗೆ ಕಾರಣವೇನೋ ಅನಿಸುವಂತಾಯ್ತು
ಕೊನೆಗೆ ನನ್ನ ಜೀವಂತಿಕೆಯ ಬಗ್ಗೆ ನನಗೆ ದುಃಖವೆನಿಸಿತು!!

ಸಂತಸದ ಕಡಲಲ್ಲಿ ಸಾಗುತ್ತಿದ್ದ ನಮಗೆ ಈ ನೋವೇಕೆ?
ನಮ್ಮ ಮಧ್ಯ ಕ್ಷಮೆಯ ಬಂಧನವೇಕೆ?
ನಾವೇನು ಸಮಾಜದ ಕಟ್ಟುಪಾಡುಗಳಿಗೆ ಹೊರತಲ್ಲ
ಆದರೆ ಅದನ್ನು ಅರ್ಥೈಸಿಕೊಳ್ಳದ ಮನಸ್ತಿತಿ ಏಕೆ?

ಕೋಪದ ನುಡಿಗಳ ಕೋಡಿ ನಮ್ಮ ನಡುವೆ ಬಂದಿತೆ?
ಜೀವನವ ಮರೆವಷ್ಟು ದೂರ ನಿಂತೇ ಹೇಗೆ?
ನನ್ನ ಉಪಸ್ತಿತಿ ನಿಂಗೆ ಅನವಶ್ಯಕ ಅನಿಸಿತೆ?
ನನ್ನ ಮಾತುಗಳು ನಿನಗೆ ಮುಳುವಾಯ್ತೆ?

ಈ ಪ್ರಶ್ನೆಗಳಿಗೆ ಉತ್ತರ ಬೇಡ
ನಿನ್ನನು ಅರಿಯುವ ಸ್ವತಂತ್ರ ನೀಡು ನನಗೆ
ನಿನ್ನ ಮನದ ಮೂಲೆಯ ಆಳುವ ಯೋಗ ನನ್ನದಾಗಲಿ ನಿನ್ನ ಮನೆಯನಲ್ಲ!
ನಿನ್ನ ಮನೆಯ ಸಂತಸದ ತೋರಣ ನಾನಾಗುವ ಭಾಗ್ಯ ನನಗೆ ಸಿಗಲಿ!

ಪ್ರತಿ ಮಾತಿನಲ್ಲೂ ಸೋಲಿನ ಅನುಭವ ಬೇಡ
ನಿನ್ನ ಜಯದ ಮಾಲೆಗೆ ನಾನು ಹೂವಾದರೆ ಸಾಕು
ನಿನ್ನ ಎಲ್ಲ ಆಸೆಗಳ ನನ್ನ ಕನಸಿನಂತೆ ಸಿಂಗರಿಸುವೆ
ಬದಕನ್ನು ಒಮ್ಮೆ ನನ್ನ ಕಣ್ಣುಗಳಿಂದ ನೋಡುವ ಔದಾರ್ಯ ತೋರು ಎನಗೆ

ಈ ಕವನವ ನನ್ನ ಭಾವನೆಗಳಿಂದ ಅಲಂಕರಿಸಿರುವೆ
ಅದಕ್ಕೆ ಅಹಂಕಾರದ ಹೆಸರು ಬೇಡ
ನನ್ನಲ್ಲಿ ನೀನು ಕೊಂಚ ನಂಬಿಕೆಯ ಇಡು
ನಿನ್ನ ನಂಬಿಕೆಯ ಎಂದೂ ತಪ್ಪು ಮಾಡೆನು!

No comments:

Post a Comment

Creative Commons Licence
This work is licensed under a Creative Commons Attribution-ShareAlike 3.0 Unported License.