ಮುಗಿಲ ಓಡಲಲಿ ಆ ಬೆಟ್ಟಗಳು
ಮನದ ದುಗುಡತೆಯ ದೂರ ತಳ್ಳಿದವು
ಮಂಜು ಮುಸುಕಿದ ಆ ಹಾದಿ
ಸ್ವರ್ಗದ ಮುಸುಕ ಎಳೆದವು!!
ಸಣ್ಣ ಎಳೆಯ ಬೀಸುತ ರವಿಯು
ನೀರ ಬಿಂದುಗಳ ಸ್ಪರ್ಶಿಸಿದ
ಹವಾಮಾನದ ಆ ವೈಪರಿತ್ಯಕೆ
ಮಧುರ ಸುಧೆಯ ಹರಿಸಿದ
ಎಲ್ಲೆಲ್ಲೋ ಕಾಗದದ ಹಾಳೆಯ ಮೇಲೆ ಕಂಡ ಚಿತ್ರವದು
ನೈಜ ಚಿತ್ರಣ ತಲ್ಲಣವ ಮೂಡಿಸಿದ ಕ್ಷಣವದು
ಸುಂದರ ಆ ತಾಣದಲ್ಲಿ ಸಣ್ಣ ಝರಿಯ ಆಲಾಪ
ತಂಪು ತಂಪು ಗಾಳಿಯ ಮಧುರ ಪ್ರಲಾಪ
ಪಯಣಿಸುತ್ತಿದ್ದ ದಾರಿಯ ತುಂಬೆಲ್ಲಾ ಹಸಿರು
ದೂರ ಮಾಡತೊಡಗಿತ್ತು ನಮ್ಮ ಬೇಸರು
ಅಲ್ಲಲ್ಲಿ ಕಿತ್ತು ಬಂದಿದ್ದ ಮರಗಳ ಬೇರು
ಹುಟ್ಟಿಸಿತು ನಮ್ಮಲ್ಲಿ ಒಮ್ಮೊಮ್ಮೆ ಬೆವರು!
ನಿಂತ ತಾಣವೆಲ್ಲಾ ಸೃಷ್ಟಿಯ ಸುಂದರ ಚಿತ್ರಣ
ಯಾರಲ್ಲಿ ಮೂಡಿಸದು ಹೇಳಿ ನವಿರಾದ ತಲ್ಲಣ?
ಅದೊಂದು ಅನಾನುಭಾವ ಮಂಥನ
ಅದೇ ಈ ಕವಿತೆಯ ಮೂಲ ಚೇತನ!
ಈಗ ಮೂಡಿತಲ್ಲವೇ ಮನದಲ್ಲಿ ಪ್ರಶ್ನೆ?
ಯಾವುದೀ ಪರಿಸರ ಚಿನ್ಹೆ
ಯಾವುದೋ ಕನಸಲ್ಲ ಇದು
ಅದುವೇ ನಮ್ಮ ಕರುನಾಡ ಚಿಕ್ಕಮಗಳೂರು
No comments:
Post a Comment