ನನ್ನ ಪ್ರತಿ ಹೆಜ್ಜೆಗಳ ಗುರುತು ನೀ ಆಗಬೇಕೆಂದು ನಾ ಬಯಸಿದೆ,
ನಿನ್ನದೇ ನೆನಪಿನಲ್ಲಿ ಮಗ್ನಳಾಗಿ ನಾ ನಿನ್ನ ಅರಸಿದೆ,
ಬಾಳ ಪಯಣದ ಒಂದೊಂದು ತಿರುವಿನಲೂ
ಕೇವಲ ನಿನ್ನ ನೆರಳ ನಾ ಆಶಿಸಿದೆ!!
ನೂರೊಂದು ಕಿರಣಗಳ ಬಿರುತಾ ರವಿ ತಾ ಮೂಡಿದ
ಆ ಕಿರಣಗಳ ಪದರಗಳಲಿ ನನ್ನ ಸೇರಿಸಿದ
ಮೂಡಿಸಿದ ಮನದಲ್ಲಿ ಹೊಸ ಆಸೆಗಳ
ತುಂಬುತ ಒಲವಿನಾಸರೆಯ ಕೆರೆಯ
ಒಲಿದನು ಒಲವಿನ ಚರಿತೆಯ ಬರೆಯುತ
ಹೃದಯದಲ್ಲಿ ಪ್ರೇಮದ ಮುಸುಕ ಎಳೆಯುತ
ಕಳೆದು ಹೋದೆ ನಾ ನಿನ್ನಲ್ಲಿ ಉಸಿರ ಸೇರಿಸುತ
ಜೀವನದಲ್ಲಿ ಎಲ್ಲರಿಗೂ ಈ ಪ್ರೇಮದ ಮಾಹಿತಿ ನೀಡುತ
ಜೀವನದ ಪುಟಗಳಲಿ ಬರೆದೆ ನಾನು ನಿನ್ನ ಹೆಸರು
ನನಗೆ ತಿಳಿದಿತ್ತು ನಾನೇ ನಿನ್ನ ಉಸಿರು
ನನ್ನ ಬದುಕಿನ ಹಾಲಿಗೆ ನೀನೇ ಮೊಸರು
ನೀಡು ನನ್ನ ಕವನಗಳಿಗೆ ನೀ ಹಸಿರು!!!
No comments:
Post a Comment