Monday, August 8, 2011

ಭಾವನೆ

ಆ ಕರಿ ಮೋಡಗಳ ಸಾಲು ಸಾಲು
ಮಿಂಚಿನ ಬಣ್ಣದ ಸೊಡಲು
ಅಲೆ ಅಲೆ ಹೊಮ್ಮುವ ಕಡಲು
ಭಾವನೆಗಳ ಅರಳಿಸುವ ಈ ಒಡಲು

ಲೂಟಿ ಆದೆ ಆ ಭಾವನೆಗಳಿಗೆ 
ಮನವ ಮಿಡಿವ ಆ ಶ್ರುತಿಗೆ 
ಸ್ವರಕೆ ರಾಗ ಸೇರಿಸುವ ಆ ಶಕ್ತಿಗೆ 
ಕೊನೆಯೇ ಇಲ್ಲದ ಆ ಬಾಂದವ್ಯಕೆ

ಎಷ್ಟು ನೋಡಿದರೂ ಸಾಲದಷ್ಟು ನೋಟ 
ಎಷ್ಟು ನುಡಿದರೂ ಮುಗಿಯದ ಮಾತು
ಕಣ್ಣು ಕಣ್ಣ ಆ ಮೂಕ ಭಾಷೆಗೆ,
ಸೋಲದವರಿಲ್ಲ ಈ ಪ್ರೀತಿಗೆ

ಪ್ರೀತಿ ಮಧುರವಾದುದು
ಭಾಷೆಗೆ ಬಣ್ಣನೆಗೆ ನಿಲುಕದ್ದು
ನಿರ್ಮಲವಾದದ್ದು ಕೋಮಲವಾದುದು
ಕವಿಯ ರಚನೆಯಂತೆ 
ಇದು ಪ್ರಕೃತಿಯಂತೆ 
ಸದಾ ನಮ್ಮೊಂದಿಗೆ ಬೆರೆತಿಹುದಂತೆ!! 



No comments:

Post a Comment

Creative Commons Licence
This work is licensed under a Creative Commons Attribution-ShareAlike 3.0 Unported License.