ಸ್ನೇಹಿತನೇ,
ಅಂದು ನಾನು ಹೇಳ ಬಯಸಿದೆ ಸಣ್ಣ ಪದವ
ಅರಿಯದೆ ಅರಳಿಸಿತು ನನ್ನಲ್ಲಿ ಭಯದ ಕಣವ
ಮನವು ನುಡಿಯುತಿತ್ತು ಆ ಮಧುರ ಮಾತು,
ಕೇಳಬಯಸುತಿತ್ತು ಅದನು ನಿನ್ನ ಬಳಿಯೇ ಕುಳಿತು
ಆ ಕ್ಷಣಗಳು ವಿಸ್ಮಯ,
ನಾನಾದೆ ತನ್ಮಯ,
ನೀ ನುಡಿಸು ಬಾ ನನ್ನ ಹೃದಯ ವೀಣೆಯ,
ನೀನೆ ತಾನೆ ನನ್ನ ಬಾಳ ಗೆಳಯ!
ಮೌನವೆ ನುಡಿಯಾಯ್ತು ನುಡಿಯು ಕವಿತೆಯಾಯ್ತು
ಬಾಳು ಹಸನಾಯ್ತು ನೋವು ಹುಸಿಯಾಯ್ತು
ಸಂಗೀತದ ಸ್ವರಗಳ ಸಮ್ಮಿಲನವಲ್ಲಿ
ಪನ್ನೀರ ಎರೆಯಿತು ನನ್ನ ಅಂಗಳದಲ್ಲಿ
ಮನದಲ್ಲಿ ಆ ರೀತಿಯ ತೊಳಲಾಟ
ಜೀವನದಲ್ಲಿ ಬಂಧನಗಳ ಈ ಆಟ
ಬಿಡಿಸಲು ನೀನು ನನ್ನ ಕನಸುಗಳ ಗಂಟ
ಅಳಿಸದಿರು ಎಂದಿಗೂ ನೀ ನಮ್ಮಿಬ್ಬರ ಈ ನಂಟ
No comments:
Post a Comment