Saturday, January 29, 2011

ಒಲವಿನ ಮಾಂತ್ರಿಕ

ತರ ತರ ಇದು ಯಾವ ತರ ಭಾವನೆಯ ಅಲೆ ನನ್ನೊಳಗೆ
ಸರ ಸರ ಸುಳಿಯುತಿದೆ ಉಲಿಯುತಿದೆ ಉಸಿರು ಉಸಿರೊಳಗೆ
ಆ ಭಾವನೆಯ ಕಲ್ಪನೆಯ ಮಾಂತ್ರಿಕ ನೀನು
ಆ ಕವಿತೆಗಳ ಪುಟಗಳಲಿ ಸೇರಬೇಕು ನಾನು!!!



ನಿನ್ನ ಭೇಟಿ ಆದ ಆ ಕ್ಷಣಗಳು, ಮನದೊಳಗೆ ಸೇರಿಕೊಂಡು ಹೊಸ ರಾಗವ ಹಾಡುತಿದೆ
ನಿನ್ನ ಮುದ್ದು ಮುದ್ದು ಮಾತಿನ ಧಾಟಿ ನನ್ನನು ಪ್ರೇಮದಿಂದ ನಿನ್ನೆಡೆಗೆ ದೂಡುತಿದೆ ,
ಹೊಸದಾದ ಪ್ರೇಮ ಕಾವ್ಯ ನೀ ಬರೆದೆ ನನ್ನ ಬಾಳಿನಲಿ
ನೀ ತಂದೆ ಹೊಸ ಕನಸು ಹೇಗೆಂದು ನಾ ಅದ ಬಣ್ಣಿಸಲಿ!!




ಕಣ್ಣು ತಾನುತಾನೆ  ಕಾಣದಂತ ಹೊಸದಾದ ಕನಸುಗಳನ್ನು ಹೆಣೆದವನು ನೀನಲ್ಲವೇ,
ಬಾಳಿನಲ್ಲಿ ನಾನು ಬಯಸದಂತ ಸಂಭ್ರಮದ ಅಲೆಯನ್ನೆಲ್ಲಾ  ತಂದವನು ನೀನಲ್ಲವೇ
ರವಿಯಂತೆ ನೀ ಬಂದೆ ಕತ್ತಲಾದ ನನ್ನ ಬಾಳಿನಲಿ,
ಎಂದೆಂದೂ ಮಾಸದಂತ ಪ್ರೇಮವಾಗು ನನ್ನ ಉಸಿರಿನಲಿ



ತರ ತರ ಇದು ಯಾವ ತರ ಭಾವನೆಯ ಅಲೆ ನನ್ನೊಳಗೆ
ಸರ ಸರ ಸುಳಿಯುತಿದೆ ಉಲಿಯುತಿದೆ ಉಸಿರು ಉಸಿರೊಳಗೆ
ಆ ಭಾವನೆಯ ಕಲ್ಪನೆಯ ಮಾಂತ್ರಿಕ ನೀನು
ಆ ಕವಿತೆಗಳ ಪುಟಗಳಲಿ ಸೇರಬೇಕು ನಾನು!!!

ಅಂಬರವೆ ಓ ಅಂಬರವೆ ಬಣ್ಣಗಳ ಚೆಲ್ಲು ಬಾ ನೀನು,
ಹೊಸದಾದ ಲೋಕವನು ತೋರುವೆನು ನಿನಗೆ ನಾನು
ನನ್ನ ಹೃದಯದಲಿ ಅಡಗಿರುವ ಕವನಗಳು ನೀನೆ
ನಿನ್ನೊಳಗೆ ಹುದುಗಿರುವ ಪ್ರೇಮಧಾರೆ ನಾನೆ!!!

No comments:

Post a Comment

Creative Commons Licence
This work is licensed under a Creative Commons Attribution-ShareAlike 3.0 Unported License.