Wednesday, May 11, 2011

ಅಲೆ

ಕಣ್ಣಂಚಿನಲ್ಲಿ ಹನಿಯೊಂದು ಮೂಡಿ ದನಿಯಾಯ್ತು ಹೇಗೋ ಈಗ,
ಬರಿದಾದ ಮನದಿ ಹೂ ಚಿಗುರಿತೊಂದು ಹೇಗೋ ತಾನೇ ಆಗ!!
ಕನಸನ್ನು ಕಾಣಲು ಅನುಮತಿಯ ತಂದೆಯಾ
ಮನದಲ್ಲಿ ಮೂಡಿಸಿ ಹೊಸ ಕವಿತೆಯ .....

ಬರಿಗೈಯಲ್ಲೇ ನಾ ಬರೆಯಬಲ್ಲೆ ಮನದಾಳದ ಮಾತು,
ನನ್ನಲ್ಲಿ ಮೂಡಿಸುತಾ ಪ್ರೇಮದ ಚಿತ್ತಾರದ ಮಾತು,
ಹೃದಯದ ಸೆರೆಮನೆಯೊಳಗೆ ನನ್ನ ನೀನು ಬಂಧಿಸಿ
ತೊಡಿಸುತ ನನ್ನ ಕೈಗೆ ನೀರ ಅಲೆಯ ಉಂಗುರ
ಆ ಅಲೆಯೇ ನನ್ನ  ಜೀವನದಿ ಮೂಡಿಸಿದೆ ಹೊಸ ರಂಗು
ಜೋಕಾಲಿಯಾಗಿ ತೂಗುತಿದೆ ನಿನ್ನ ಪ್ರೇಮದ ಗುಂಗು

ಮಣ್ಣಿನ ಕಣ ಕಣದಲ್ಲೂ ನಿನ್ನ ನೆನಪಿನ ಮಳೆಯ ಕಂಪು
ಹಾದಿಯಲ್ಲೆಲ್ಲಾ ಹೂವಿನ ಆ ನವಿರಾದ ಕಂಪು
ಬೆಳಕಿನ ಬಣ್ಣದ ಕಾಮನಬಿಲ್ಲು
ಕಟ್ಟಿರುವೆ ನಾನು ಅಲ್ಲಿ ಪ್ರೇಮದ ಮಹಲು
ಆ ಮಹಲೇ ನನ್ನ ಬಾಳ ಮೈಲಿಗಲ್ಲು
ಅಲ್ಲಿ ನೀನು ಹೀಗೆ ಪ್ರೀತಿಯ ಚೆಲ್ಲು.....

No comments:

Post a Comment

Creative Commons Licence
This work is licensed under a Creative Commons Attribution-ShareAlike 3.0 Unported License.