ಈ ಪ್ರೇಮದ ಕವನ ನಿನಗಾಗಿ
ನಿನ್ನ ಪ್ರೀತಿಯ ಮಾತು, ನಗು, ನೋಟಕ್ಕಾಗಿ
ನಿನ್ನ ಮುದ್ಧು ಮಾತಿನ ಧಾಟಿ, ನನ್ನನು ನಿನ್ನ ಎಡೆಗೆ ದೂಡುತಿದೆ
ನಿನ್ನ ಸ್ನೇಹದ ಕಂಪು ನನ್ನ ಜೇವನವ ತುಂಬಿದೆ !!!!!
ಬಾಳಿನ ಪುಟಗಳ ಪದಪುಂಜ, ನೂರಾರು ಭಾವನೆಗಳ ಆಗರ...
ಈ ಭಾವನೆಗಳಿಗೆ ಅರ್ಥ ನಿeಡೆಯಾ ಪೂರಾ
ನಿನ್ನದೇ ನೆನಪಿನ ಗುಂಗು, ಕಾಡುತಿದೆ ಪ್ರತಿ ಸಲ
ತುಂಬಾ ಬಾರದೇ ಖಾಲಿ ಮನದ ಸ್ಥಳ!!!
ಕಪ್ಪೆಚಿಪ್ಪಿನಂತೆ ಸಾಗರದೊಳಗೆ ಇದ್ದೆ
ಮಳೆಯ ಹನಿಯಂತೆ ನೀ ಕದ ತಟ್ಟಿದೆ
ಹುಣ್ಣಿಮೆಯ ಚಂದಿರನ ತಂಪಿನೊಳಗೆ
ಹೂವಿನ ಕಂಪಿನೊಳಗೆ
ಪುಳಕವನ್ನು ತಂದೆ
ಸುಳಿದು ಬರುವೆ ನಿನ್ನ ನೆರಳಿನಂತೆ
ಕತ್ತಲಲ್ಲಿ ಬೆಳಕಿನ ಕಿರಣದಂತೆ,
ನೀಡುವೆ ಒಲವಿನ ಈ ಸಿಂಚನ
ಸ್ಪರ್ಶದ ಆ ಮೋಡಿ
ಅಪ್ಪಿದೆ ನನ್ನ ಹೃದಯ ಗುಂಡಿಗೆಯ ಸೇರಿ
ಮಾಡದಿರು ಮತ್ತೇನೆ ಮೋಡಿಯನು
ಮಾರು ಹೋಗಿರುವೆ ನಿನ್ನ ಪ್ರೇಮಕೆ ನಾನು !!!!
No comments:
Post a Comment