ಕಣ್ಣಲ್ಲಿ ಒಂದು ಹನಿ ತಾ ಇಣುಕಿದೆ
ಮನಸು ತನ್ನ ತಪ್ಪೇನೆಂದು ಪ್ರಶ್ನಿಸುತಿದೆ
ತಂಗಾಳಿ ತರಹದ ನಿನ್ನ ಸ್ನೇಹ ದೂರ ಏಕೆ ಆಗಿದೆ,
ನನ್ನಲಿ ಈ ಕಳವಳ ಏಕೆ ಶುರುವಾಗಿದೆ?
ನನ್ನ ಪದಗಳ ಭಾವನೆ ನೀನು
ನನ್ನ ಕನಸಿನ ಮಾಯಾಲೋಕ ನೀನು
ನನ್ನ ಉಸಿರಿನ ಕಂಪು ನೀನು
ನನ್ನ ಬಾಳ ನೌವ್ಕೆಯ ನಾವಿಕ ನೀನು .....
ಕವಿತೆಗಳಲಿ ಹೇಗೆ ನಾ ಬಣ್ಣಿಸಲಿ ನಿನ್ನ ಸಂಗತಿಗಳನು
ನೀನು ದೂರ ಉಳಿದೆ ನನ್ನ ಬಾಳಿನಲಿ
ಉಸಿರು ಉಸಿರಿನಲಿ ನಿನ್ನದೇ ನಾದ
ನಾನು ಉಲಿಯುತಿರುವೆ ನಿನ್ನದೇ ಪದ....
ಈ ಕವಿತೆ ನಿನಗಾಗಿ
ನಾನು ನಿನ್ನ ಮೇಲೆ ಇಟ್ಟಿರುವ ಪ್ರೀತಿಗಾಗಿ
ನೀ ಆದೇ ನನ್ನಿಂದ ದೂರ
ಅದರೂ ನಾನು ಬಯಸುವೆ ನಿನ್ನ ಪ್ರೀತಿಯ ಸ್ವಾಧ
ದೂರವಾದ ನಿನ್ನ ಪ್ರೀತಿಯ ಸ್ವರ
ದೂರವಾದ ನಿನ್ನ ಸ್ನೇಹದ ಕರ
ಎಲ್ಲವೂ ನನ್ನ ಕನಸುಗಳನ್ನು ನಾಶ ಮಾಡಿದೆ
ಅದರೂ ನಿನಗಾಗಿ ನಾನು ಬೇಡುವುದು ಒಂದೇ
ಎಲ್ಲೇ ಇದ್ದರು ನನ್ನ ಪ್ರೀತಿಯನ್ನು ನಿಂದಿಸದಿರು
ನಿರ್ಮಲ ಹಾಗೂ ಸ್ವಾರ್ಥ ರಹಿತ ಸ್ನೇಹವನ್ನು ಜರಿಯದಿರು !!!!!!!
No comments:
Post a Comment