ಕನಸಿನ ಲೋಕದ ಕವನ ನಾನು
ಕಾಣದ ಕವಿಯ ಲೇಖಣಿ ನಾನು
ಕತ್ತಲಿನ ಜಗತ್ತಿನ ಜ್ಯೋತಿಯು ನಾನು
ನಿನ್ನಲಿನ ಉತ್ಸುಕಥೆಯ ಶಕ್ತಿಯು ನಾನು
ಮುಗಿಯದ ಬದುಕಿನ ಹೋರಾಟ ನಾನು
ಹಾಡಿನ ಸಾಲಿನ ಪದಗಳು ನಾನು
ಮಗುವಿನ ಮನಸಿನ ಮುಗ್ಧತೆ ನಾನು
ನಿನ್ನಲಿನ ಅಂತರಾತ್ಮ ನಾನು
ಹೋರಾಟದ ಹೃದಯದ ದೈರ್ಯವು ನಾನು
ಮುದುಡಿದ ಹೂವಿನ ನೋವು ನಾನು
ಪ್ರೀತಿಯ ಚಿಮ್ಮುವ ಭಾವನೆ ನಾನು
ನಿನ್ನಲಿನ ಪ್ರಕೃತಿ ನಾನು
ಸಂತಸವ ಬೆಸೆವ ಸಂಬಂಧವು ನಾನು
ಮನೆಯ ಅಂಗಳದ ಹಸಿರು ತೋರಣ ನಾನು
ಅದಿ-ಅಂತ್ಯ ಇಲ್ಲದ ಶಕ್ತಿಯು ನಾನು
ನಿನ್ನಲಿನ ಸತ್ಯವಂತಿಕೆ ನಾನು
ಈ ನಾನು ಯಾರು?
ಅಹಂಕಾರವ ಅಳಿಸುವ ದೈವತ್ವ ನಾನು
ಮನುಷ್ಯನ ಕೈಗೆ ಎಟುಕದ ಮಹತ್ವ ನಾನು
I liked this the most, particularly the line - "ಮನುಷ್ಯನ ಕೈಗೆ ಎಟುಕದ ಮಹತ್ವ ನಾನು". Requires deep thinking and an experienced life to write like this. Keep writing.
ReplyDelete