ಸಮುದ್ರದ ಅಲೆಗೆ ಹೊರಬಂದ ಮುತ್ತು
ತನ್ನತನವ ಬಿಟ್ಟು ಬಂದಿತ್ತು
ತವರು ಮನೆಯಿಂದ ದೂರವಾಗಿ
ಹೊಸ ಲೋಕವ ಸೇರಿತು
ಬಣ್ಣದ ಆಕಾಶ ತಣ್ಣನೆ ಗಾಳಿ
ಮರಳಿನ ಸ್ಪರ್ಶ ಎಲ್ಲ ಹೊಸತು
ಜೀವನದ ಗುರಿಯಲ್ಲಿನ ಮೊದಲ ಆ ನೋಟ
ಧೈರ್ಯವ ತುಂಬುತಿತ್ತು
ಈ ಹೊಸ ಲೋಕದಲಿ ತಾನು ಒಬ್ಬಂಟಿ
ನೀರ ಅಲೆಗಳು ದಡದ ಎಡೆಗೆ ತಳ್ಳಿತು
ಸಾಗರದ ಗರ್ಭದಿಂದ ಹೊರಬಂದು
ತನ್ನ ಅಸ್ತಿತ್ವವನ್ನು ಸ್ತಾಪಿಸಲು ಹೋರಾಟ ಆರಂಭಿಸಿತು
ಜೀವನದ ಪ್ರತಿ ಹೆಜ್ಜೆಯೂ ಒಂದು ಹೋರಾಟ
ಅದರಲ್ಲಿ ಜಯವ ಆರಸುತ
ಮಾನವತ್ವ ಮೆರಯಬೇಕು
No comments:
Post a Comment