Monday, March 5, 2018

ನೆರಳು ಬೆಳಕಿನ ಪಯಣ

      ಅದೆಷ್ಟೋ ದಿನದ ನಂತರ ಆ ಚಂದಿರನ ದರ್ಶನ, ಆ ತಣ್ಣನೆ ಬೆಳದಿಂಗಳು ನಮ್ಮೂರ "ಚಂದಮಾಮ" ನ ನೆನಪು ತಂದಿತು. ಆ ತಿಳಿ ಆಕಾಶ ಬೆಳ್ಳನೆ ಮೋಡ.. ತಂಪು ತಂಗಾಳಿ ಎಲ್ಲಾ ಮೈಮರಿಸಿತ್ತು. 
     ಅದೊಂದು ದಿನ "ನಮ್ಮೂರು ಚಂದವೋ ನಿಮ್ಮೂರು ಚಂದವೋ" ಹಾಡು ಆಕಾಶವಾಣಿ ಯಲ್ಲಿ ಮೂಡಿಬರುತಿತ್ತು. ಹಾಡಲ್ಲಿ ಏನಿದೆ? ದಿನ ಅದೇ ಹಾಡು, ಅದೇ TV, ಅದೇ traffic, ಅದೇ ಗಾಡಿ ಹಾಗು ಅದೇ bus, ದಿನಕ್ಕೊಮ್ಮೆ ಅಲ್ಲಲ್ಲಿ ಟ್ರಾಫಿಕ್ ನ ಕಾಟ..ಆದರೇನು ಆ office ಕ್ಯಾಬ್ ನಲ್ಲಿ ಎಲ್ಲರ ಜೊತೆ ಹಾಡೋ ಹಾಡು, ಮಾಡೋ ತರಲೇ ಆ ದಿನದ ಮುನ್ನುಡಿಯಾಗುತ್ತಿತ್ತು. 
      ಕೆಲಸದಲ್ಲಿ ಏನಾದರೂ ಹೊಸತು ಬೇಕು, ಹೊರ ದೇಶಕ್ಕೆ ಹೋಗಿ ಸುತ್ತಾಡಬೇಕು ಅನಿಸಿದ್ದು ನಿಜ, ಆದರೆ ಬಯಸಿದ ಅವಕಾಶ ಸರಿಯಾದ ಸಮಯಕ್ಕೆ ಸಿಗುವುದೋ ಇಲ್ಲವೋ ಅನಿಸಿದಾಗ ಹಾರಿದ್ದು "ಕಾಂಗರೂ ನಾಡು" 
    ಹಾಂ! ಈ ಊರಿನಲ್ಲಿ ಚಂದಿರನ ಬಗ್ಗೆ ಏಕೆ ಬರೆದಿದ್ದು ಅಂತೀರಾ? ಇಲ್ಲಿ ರಾತ್ರಿಗಳನ್ನು ನೋಡಿದ್ದು ಬಹಳ ಕಡಿಮೆ. Long days shorter nights ಇಲ್ಲಿ. ಸುಮಾರು ರಾತ್ರಿ ೯. ೪೦ ರ ಸುಮಾರಿಗೆ ಸೂರ್ಯ ಅಸ್ತಮಾನ, ಆ ಬೆಳಕಿನ ನಡುವೆ ಕಳೆದು ಹೋಗುತ್ತಿದ್ದ ನಮ್ಮ ಚಂದಮಾಮ. ಮೊದಲಲ್ಲಿ ಕಂಡ ಆ ಚಳಿಗಾಲ ಜೀವನದಲ್ಲಿ ಎಂದೂ ಕಂಡಿರದಂತಹುದು ಹಾಗೂ ಅನುಭವಿಸಲಾಗದಂತದು. ದುಗುಡತೆಯ ಹೆಚ್ಚಿಸುವುದು ಆ ಚಳಿ. 
    ಆಸ್ಟ್ರೇಲಿಯಾ ಚೆಂದದ ಊರು, ಜನ ಬಹಳ ಸರಳರು ಆದರೂ ಅಲ್ಲಲ್ಲಿ ಕಿರಿಕ್ ಗಳು ಇದಿದ್ದೆ , ಆದರೆ ಕೆಟ್ಟವರೇನು ಅಲ್ಲ. ಸುಂದರ ಪರಿಸರ, ಹಸಿರನು ತೊರೆಯದೆ, ಉಸಿರನ್ನು ಅಳಿಸದೇ ಎಲ್ಲವನ್ನು ಸಮನಾಗಿ ತೂಗಿಸಿದ್ದಾರೆ. 
     ಕಂಡ ಪ್ರಪಂಚ ಹೊಸತು ಹಾಗಾಗಿ ಎಲ್ಲಾ ಚೆಂದ ಚೆಂದ ಚೆಂದ !! ಆದರೆ ನಮ್ಮ ದೇಶ ನಮ್ಮ ಜನ, ನಮ್ಮ ಭಾಷೆ, ಇದನ್ನು ಬಿಟ್ಟು ಏನೋ ಕಳೆದುಕೊಂಡ ಅನುಭವ. ಎಲ್ಲಾ ಇದ್ದು ಏನೂ ಇರದ ಭಾವ. ಅಮ್ಮ ಮಾಡೋ ರುಚಿ ಅಡಿಗೆ, ಸ್ನೇಹಿತರ ಒಡನಾಟ, ಊಟದ ಸಮಯದಲ್ಲಿ ನಡಿಯೋ ವಾದ ವಿವಾದ!, ಆಗಾಗ ಗುನುಗುನಿಸೋ ಹೊಸ ಹಾಡುಗಳು, ವಾರಾಂತ್ಯದಲ್ಲಿ ನೋಡೋ ಸಿನಿಮಾ, ಆಗಾಗ ಗಾಡಿಯಲ್ಲಿ ತಿರುಗಿ traffic ನ ಬೈದು ಕೊಳ್ಳೋ ರೀತಿ, ಹಬ್ಬದ ಸಂಭ್ರಮ, ಆ ರಂಗೋಲಿಯ ರಂಗು, ಆ ತೋರಣಗಳ ಹಸಿರು,ನಮ್ಮವರ  ಹಿತವಚನ ಅದೇ ನಮ್ಮ ಜೀವನ, ಈ ಹೊಸತೇನೇ ಇದ್ದರೂ ಕೆಲ ದಿನಗಳ ಸಂತಸ ವಿನಃ ಅದೇ ನಮ್ಮ ಜೀವನದ ಶಾಶ್ವತ ಗುರಿ ಅಲ್ಲ. ಇದು ಕೇವಲ ನೆರಳು ಬೆಳಕಿನ ಪಯಣ. 
     "ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು" ಈ ಭಾವಗೀತೆಯ ಸಾರಾಂಶ ಸತ್ಯವೇ ಸರಿ. 
     ನಮ್ಮ ದೇಶ ನಮ್ಮದು, ನಮ್ಮ ನುಡಿ ನಮ್ಮದು, ಆ ಮಣ್ಣಿನ ಗುಣ ನಮ್ಮನ್ನು ಅಲ್ಲಿಗೆ ಪುನಃ ಕರೆವ ಶಕ್ತಿ ಹೊಂದಿದೆ. ಆ ಶಕ್ತಿಗೆ ಆ ರಕ್ಷೆಗೆ ನಮನ. ಸಾಗೋ ಪ್ರತಿ ಹಾದಿಯಲ್ಲೂ ನಮಗೆ ನಮ್ಮತನದ ಹುಡುಕಾಟ, ಪ್ರೀತಿ ಕರುಣೆಯ ತವಕ. ಆದರೆ ಅದಕ್ಕೆ ಏನೂ ಕೊರತೆ ಇಲ್ಲ. ಕೊರತೆ ಮನದ ಸೋಲು, ಆ ಸೋಲಿಗೆ ತವಕಿಸದೆ, ಸಾಗಿ ಹಾದಿಯ ಮೀರಿ ಗುರಿಯ ಮುಟ್ಟಿ ಮರಳಲು ಅಷ್ಟೇ ಮನದ ತುಡಿತ. 
 



Monday, October 2, 2017

ಒಲವ ರಾಗ

ಮೋಡದಿ ಮರೆಯಾದರೂ ಸೂರ್ಯ
ನೀ ಬಂದು, ಒಲವಿನ ಬೆಳಕ ಸುರಿದೆ  
ತಾವರೆಯಂತೆ ಹೃದಯದ ಕದ ತಟ್ಟಿ,
ಮನದಿ ಹೊಸ ರಾಗ ಮಿಡಿದೆ,
ಒಲವಿನ ಸವಿ ಬೆಳಕಲಿ ಮನಸಿನ ಕತ್ತಲ ಅಳಿಸಿದೆ

ಕಣ್ಣ ತೆರೆದು ನೋಡಲು ಸುತ್ತಲೂ ನಿನ್ನದೇ ನೆರಳು
ಅತಿ ಅಮೂಲ್ಯ ನೀ ಜೀವನದ ಸ್ಫೂರ್ತಿ ಹರಳು
ನೆನಪುಗಳ ಬಲೆಯಲಿ ನೇಯ್ಗೆ ಮಾಡುತಾ
ಮಾಯೆಯ ಕವನವ ಕವಿಯಂತೆ ನುಡಿದೆ ,ಅರಿವಿನ ಬೆಳಕೇ ನೀ ಆದೆ

ಆಗಸದ ಎತ್ತರ ಈ ಎಲ್ಲಾ ಭಾವನೆಗಳು, ವೀಣೆಯ ಸ್ವರದಂತೆ ಆ ಶೃತಿಗಳು
ಅರಿಯುವೆಯಾ? ಆ ಸ್ವರಗಳ ಭಾವನೆಗಳ?
ಮಂದಾರ ಹೂವಿನಂತೆ ಬಹಳ ನಯ ಈ ಒಲವು..
ನಿಂತ ನೀರಿನಂತೆ ತಿಳಿ ಈ ಒಲವು
ಸನಿಹ ಇದ್ದರೂ ದೂರವಾದರೂ ಬಿಳುಪಿನ ಆಲೆ ಈ ಒಲವು

Monday, July 25, 2016

ಒಲವ ಚೇತನ

ಕನಸಿನ ನೆನಪನಿಡು,
ಒಲವಿನ ಮುದ್ರೆ ಕೊಡು
ನನ್ನ ಈ ಮನದ ಮಂದಿರಕ್ಕೆ ನೀ, ಹೆಜ್ಜೆ ಇಡು
ಕಣ್ಣಲ್ಲಿ ಕಣ್ಣು ಇಡು
ಕಾವ್ಯಕ್ಕೆ ಸ್ವರವ ಕೊಡು
ದಣಿದ ಈ ಹೃದಯಕ್ಕೆ ನೀ, ನಿನ್ನ .. ಪ್ರೀತಿ ಕೊಡು

ಬದುಕಿನ ನೋವುಗಳಾ ನಾ ತೊರೆದೆ...
ನಿನ್ನ ಈ ಪ್ರೀತಿಗಾಗಿ ಹಾತೊರೆದೆ.....

।।ಕೇಳು ನನ್ನೊಲವೇ ... ನೀ.. ನನ್ನ ಚೇತನ  ...
ಕೇಳು ನನ್ನೊಲವೇ ....  ನೀ.. ನನ್ನ ಜೀವನ ....।।

ಸಂಗೀತದ ಸ್ವರಕೆ ನೀ ಪದಗಳಾದೆ ..
ಮನದ ಮಂದಿರಕೆ ನೀ ದೇವನಾದೆ ..

।।ಕೇಳು ನನ್ನೊಲವೇ ... ನೀ.. ನನ್ನ ಚೇತನ  ...
ಕೇಳು ನನ್ನೊಲವೇ ....  ನೀ.. ನನ್ನ ಜೀವನ ....।।

ನನ್ನ ಬಾಳಿನ ರಂಗು ನೀ ಆದೆ ..
ನನ್ನ್ನ ಕಣ್ಣ ಬೆಳಕು ನೀ ಆದೆ ...

।।ಕೇಳು ನನ್ನೊಲವೇ ... ನೀ.. ನನ್ನ ಚೇತನ  ...
ಕೇಳು ನನ್ನೊಲವೇ ....  ನೀ.. ನನ್ನ ಜೀವನ ....।।

ಒಲವೇ.... ಒಲವೇ....ನನ್ನೊಲವೆ ನನ್ನ ಚೈತನ್ಯ
ನನ್ನ ಸ್ಪೂರ್ತಿ ಸೆಲೆಯೇ ನೀ ಆದೆ...



ಬಾಳು


ಮುಳುಗುತಿರುವ ಈ ಜೀವನಕೆ, ನೀ ನೌಕೆಯಾದಂತೆ...
ಬರಿದಾದ ಬಾಳಿಗೆ, ತಂಗಾಳಿಯ ನೀ ತಂದಂತೆ
ಉಸಿರಿರದ ಜೀವಕೆ ಉಸಿರನ್ನು ನೀ ತಂದಿರುವೆ,
ಖಾಲಿ ಹೃದಯಕೆ ವರವಾಗಿ ಬಂದಿಹೆ...

ಹೆಸರಿರದ ನಂಟಿಗೆ , ಜೊತೆಯಾಗಿ ಸಾಗಿಹೆ....
ಕತ್ತಲಿಂದ ಬೆಳಕಿನೆಡೆಗೆ ಜೊತೆಯಾಗಿ ಸುಮ್ಮನೆ ...
ಹಸಿರಾಗಿಸಿ, ಹೃದಯಕೆ ತಂಪನ್ನು ಚೆಲ್ಲಿಹೆ...
ನೀನಾದೆ  ಬಾಳಿಗೆ, ಹುಣ್ಣಿಮೆಯ ಚಂದ್ರಿಕೆ ..

ನೀ ಇದ್ದರೆ  ದೂರ, ಪ್ರತಿಬಿಂಬವೂ ದೂರ, ಹೀಗೇತಕೆ ಹೇಳು?
ಮರುಭೂಮಿಯ ತರದಿ, ಬಾಳಿನ ಈ ಸಾರ  ಹೀಗೇತಕೆ ನನಗೆ ತಿಳಿಯದು?
ನೋವಿನ ಸರಮಾಲೆಗಳೇ, ಅಪಸ್ವರದ ಶೃತಿಯ ಮಿಡಿತಗಳೇ...
ಆದರೂ, ನನ್ನಲ್ಲಿ ಜೀವವ ತುಂಬಿಹೆ ನೀ ....

ನನ್ನಲ್ಲಿ ನನ್ನನ್ನೇ ಬದುಕಿಸಿ, ಪ್ರೀತಿಯ ಚಿಗುರೊಡೆಸಿ,
ಹೋದ ನಿನ್ನಲ್ಲಿ ಕಾಣುವೆ ನೋವಲ್ಲೂ ನಗುವನು
 
ಮೋಡದ ಮಳೆ ಹನಿಗಳು, ಸಾಗರದ ಅಲೆಗಳ ತರದಿ,
ಅಡಗಿಸಿಹೆ ನಾ ಪ್ರೀತಿಯ ಭಂಡಾರವನು,
ನಗಿಸುವ ಆ ಕಲೆಯ, ಸ್ನೇಹದ ಆ ಬಲೆಯ ನಾ ಕಂಡೆನು
ಪ್ರೇಮದ ಆ ಮೋಡಿಗೆ ನಾ ಸಿಲುಕಿಹೆನು

ನಾ ನಡೆವ ಹಾದಿಗೆ, ಹೂವೇ ನೀ ಆಗಿಹೆ
ಆಗಲೂ, ತಿಳಿಯದೆ ಹೋದೆನು ನಾ ನಿನ್ನಿರುವಿಕೆಯನು 

Thursday, February 11, 2016

ಬೆಳಕೇ ಬೆಳಕೇ

ಬೆಳಕೇ ಬೆಳಕೇ ಹೇ ಕಣ್ಣ ಬೆಳಕೇ
ದಾರಿಯ ತೋರಿಸು ನೀ ... ಅವಳ ಕಡೆಗೆ
ಕಳೆದು ಹೋಗಿರುವೆ ನಾ ... ಅವಳ ಒಳಗೆ
ಗೊಂದಲವಾಗಿದೆ ಮನವು ಏನು ತಿಳಿಯದೆ ....

ಅವನ ಹೃದಯ ಬಡಿತಕೆ ನನ್ನ ಹೆಜ್ಜೆ ಸಪ್ಪಳ ಸೇರಿರಲಿ
ಸಾವಿನೆಡೆಗೆ ಸುಳಿದಿಹ ಮನವನು ನಿನ್ನ ಪ್ರೀತಿ ಬಂದು ಉಳಿಸಲಿ ...

ನಾನು ಈಗ ಮೂಕ ಪ್ರೇಮಿ,
ನಿನ್ನ ಪ್ರೀತಿ ನನಗೆ ಈ ಭೂಮಿ,
ಬೆಂಕಿ ಉರಿಯ ನಡುವೆ ನನ್ನ ನೀನು ಹೇಗೆ ನೋಡುವೇ?
ಬೆಂಕಿಯ ಉರಿಯನು ಒಲವಿನಿಂದ ನಾ ಗೆಲ್ಲುವೆ...
ಈ ಕಾಡಿನ ಕಪ್ಪು ಲೋಕದಿ ನನ್ನ ನೀನು ಹೇಗೆ ಪಡೆಯುವೆ?

ನೀನು ನನ್ನ ಪ್ರೀತಿಯ ಸ್ವರೂಪ
ನಾನು ಈಗ ಗೊಂದಲದ ಪ್ರತಿರೂಪ
ಏಕೆ ನೀ ನನ್ನನ್ನು ಒಲವಿನಲ್ಲಿ ಬಂಧಿಸಿಹೆ ?
ನೋವಿನ ಪ್ರೀತಿಯ ಏಕೆ ನೀ ನನಗೆ ನೀಡಿದೆ ?
ನೋವಿನ ಅರಿವೇ ಇಲ್ಲದೆ ಮಾಡಿದ ತಪ್ಪಿಗೇಕೆ ಶಿಕ್ಷೆಯ ನೀಡುವೆ?





Tuesday, October 27, 2015

ಮನವೇ

ಓ ಮನವೇ ... ಓ ಮನವೇ ...
ಓ ಮುದ್ದು ಮನವೆ... ಮುಗ್ಧ ಮನವೆ...
ಅರಿವ ತಿಳಿಯದ ಸುಪ್ತ ಮನವೇ ...
ಏಕೆ ಹುದುಗಿಸಿರುವೆ ಅತೃಪ್ತಿ ಕನಸು..
ಭಯದ ಸುಳಿಯಲಿ ಏಕೆ ಸಿಲುಕಿರುವೆ...

ರಾತ್ರಿಯ ನಿರ್ಮಲ ಆಕಾಶ ಶಾಂತ ಈ ಭೂಮಿಯಲಿ
ನಿನ್ನ ಬಯಕೆ ಏನು? ಏಕೆ ನಿನಗೆ ಈ ಅಶಾಂತಿ ...
ಕದಿಯದಿರು ನಿನ್ನ ಈ ದಿನಗಳನು ...
ಸಿಹಿಯ ಸ್ನೇಹದ ಹಸ್ತಕೆ ನಿನ್ನ ಮುಗುಳ್ನಗು ಕೊಡು ...

ಜೊತೆ ನಡೆವ ಪ್ರತಿ ಹೆಜ್ಜೆಗೆ ಸಂತಸವ ಹಂಚು ..
ಬೆಳಕಿನ ಕಡೆ ನಡೆಯಲು ದಾರಿಯ ನೀಡು
ಹೆಣೆಯದಿರು ನಿನ್ನದೇ ಹುಚ್ಚು ಬೇಲಿ
ನಿನ್ನ ನೀನು ಬಚ್ಚಿಟ್ಟು ಮರೆತು ಹೋದೆ ನಿನ್ನಯ ಇರುವಿಕೆಯ
ಚಾವಣಿ ಗೋಡೆ ಇರದ ಮನೆಯೊಳಗೆ ಇದ್ದು, ಮನದ ಕಿಟಕಿಯ ತೆರೆದು
ಸೇರಿಸಿಕೋ ನಿನ್ನ ನೀನು ಈ ಲೋಕದೊಳಗೆ

ಬಾರೆಯ ನನ್ನೊಡನೆ ಓ ... ಈ ಅವಾನಿಗೆ ಆಗುವ ನಾವು ಚೇತನ
ಹರಿಸುವ ಸ್ನೇಹ ಪ್ರೇಮದ ಓಕುಳಿಯ ..



Monday, October 12, 2015

ಸ್ನೇಹದ ಕಂಕಣ

ಸ್ನೇಹದ ಸಪ್ತಸ್ವರಗಳ ನುಡಿಸಿದ ಜೀವನ
ಹೆಜ್ಜೆಗಳಿಗೆ ಹೊಸತನವ ನೀಡಿದ ಚೇತನ
ಬಣ್ಣಗಳ ಲೋಕದಲ್ಲಿ ತೇಲಿದ ಮನ
ಪ್ರೀತಿಗೆ ಪ್ರೀತಿಯ ಬೆರೆಸಿದ ಸ್ನೇಹದ ಆ ಕ್ಷ್ಣಣ

ಆ ನಮ್ಮ ಸ್ನೇಹದ ಮಧುರ ಕ್ಷಣಗಳು
ಮೂಡಿಸಿದವು ಬಹಳ ಕನಸುಗಳು
ಸ್ನೇಹದ ಬಂಧನವ ಗಟ್ಟಿಗೊಳಿಸಿತದು
ಒಂದಾಗಿರಬೇಕೆಂದು ತೊಟ್ಟ ಸ್ನೇಹ ಕಂಕಣವದು

ರೆಕ್ಕೆಗಳ ತೊಟ್ಟು ಹಾರಿದ ಕ್ಷಣ
ಕವಲುಗಳ ತೊಡೆದು ಬಂಧನವ ಬಿಡಿಸಿತು
ಮುಗ್ದತೆಗೆ ಮೈಲಿಗಲ್ಲು ಆ ಸಂಬಂಧ
ಭಾವನೆಗಳ ರಂಗೋಲಿಗಳ ಮೂಡಿಸಿತು

ಮಳೆಯಲ್ಲಿ ಮಿಂದ ಆ ದಿನಗಳು, ನೋವಿಗೆ ಸ್ಪಂದಿಸಿದ ಆ ಕೈಗಳು
ಜೊತೆ ನಡೆದ ಆ ಹೆಜ್ಜೆಗಳು, ತಪ್ಪನ್ನು ತಿದ್ದಿದ ಆ ಕೈಗಳು
ಅಳತೆ ಸಿಗುವುದೇ ಆ ಸ್ನೇಹಕೆ ... ಎಲ್ಲಾ ಬಂಧದ ಎಲ್ಲೆಯ ಮೀರಿದ ಆಗಸವದು
ಹರುಷದ ಸಾಗರದ ಅಲೆ ಈ ಅನುಬಂಧ ... ಸುಂದರ ಸ್ನೇಹವಿದು

Creative Commons Licence
This work is licensed under a Creative Commons Attribution-ShareAlike 3.0 Unported License.