ಸ್ನೇಹದ ಸಪ್ತಸ್ವರಗಳ ನುಡಿಸಿದ ಜೀವನ
ಹೆಜ್ಜೆಗಳಿಗೆ ಹೊಸತನವ ನೀಡಿದ ಚೇತನ
ಬಣ್ಣಗಳ ಲೋಕದಲ್ಲಿ ತೇಲಿದ ಮನ
ಪ್ರೀತಿಗೆ ಪ್ರೀತಿಯ ಬೆರೆಸಿದ ಸ್ನೇಹದ ಆ ಕ್ಷ್ಣಣ
ಆ ನಮ್ಮ ಸ್ನೇಹದ ಮಧುರ ಕ್ಷಣಗಳು
ಮೂಡಿಸಿದವು ಬಹಳ ಕನಸುಗಳು
ಸ್ನೇಹದ ಬಂಧನವ ಗಟ್ಟಿಗೊಳಿಸಿತದು
ಒಂದಾಗಿರಬೇಕೆಂದು ತೊಟ್ಟ ಸ್ನೇಹ ಕಂಕಣವದು
ರೆಕ್ಕೆಗಳ ತೊಟ್ಟು ಹಾರಿದ ಕ್ಷಣ
ಕವಲುಗಳ ತೊಡೆದು ಬಂಧನವ ಬಿಡಿಸಿತು
ಮುಗ್ದತೆಗೆ ಮೈಲಿಗಲ್ಲು ಆ ಸಂಬಂಧ
ಭಾವನೆಗಳ ರಂಗೋಲಿಗಳ ಮೂಡಿಸಿತು
ಮಳೆಯಲ್ಲಿ ಮಿಂದ ಆ ದಿನಗಳು, ನೋವಿಗೆ ಸ್ಪಂದಿಸಿದ ಆ ಕೈಗಳು
ಜೊತೆ ನಡೆದ ಆ ಹೆಜ್ಜೆಗಳು, ತಪ್ಪನ್ನು ತಿದ್ದಿದ ಆ ಕೈಗಳು
ಅಳತೆ ಸಿಗುವುದೇ ಆ ಸ್ನೇಹಕೆ ... ಎಲ್ಲಾ ಬಂಧದ ಎಲ್ಲೆಯ ಮೀರಿದ ಆಗಸವದು
ಹರುಷದ ಸಾಗರದ ಅಲೆ ಈ ಅನುಬಂಧ ... ಸುಂದರ ಸ್ನೇಹವಿದು

No comments:
Post a Comment