ಮೋಡದಿ ಮರೆಯಾದರೂ ಸೂರ್ಯ
ನೀ ಬಂದು, ಒಲವಿನ ಬೆಳಕ ಸುರಿದೆ
ತಾವರೆಯಂತೆ ಹೃದಯದ ಕದ ತಟ್ಟಿ,
ಮನದಿ ಹೊಸ ರಾಗ ಮಿಡಿದೆ,
ಒಲವಿನ ಸವಿ ಬೆಳಕಲಿ ಮನಸಿನ ಕತ್ತಲ ಅಳಿಸಿದೆ
ಒಲವಿನ ಸವಿ ಬೆಳಕಲಿ ಮನಸಿನ ಕತ್ತಲ ಅಳಿಸಿದೆ
ಕಣ್ಣ ತೆರೆದು ನೋಡಲು ಸುತ್ತಲೂ ನಿನ್ನದೇ ನೆರಳು
ಅತಿ ಅಮೂಲ್ಯ ನೀ ಜೀವನದ ಸ್ಫೂರ್ತಿ ಹರಳು
ನೆನಪುಗಳ ಬಲೆಯಲಿ ನೇಯ್ಗೆ ಮಾಡುತಾ
ಮಾಯೆಯ ಕವನವ ಕವಿಯಂತೆ ನುಡಿದೆ ,ಅರಿವಿನ ಬೆಳಕೇ ನೀ ಆದೆ
ಆಗಸದ ಎತ್ತರ ಈ ಎಲ್ಲಾ ಭಾವನೆಗಳು, ವೀಣೆಯ ಸ್ವರದಂತೆ ಆ ಶೃತಿಗಳು
ಅರಿಯುವೆಯಾ? ಆ ಸ್ವರಗಳ ಭಾವನೆಗಳ?
ಮಂದಾರ ಹೂವಿನಂತೆ ಬಹಳ ನಯ ಈ ಒಲವು..
ನಿಂತ ನೀರಿನಂತೆ ತಿಳಿ ಈ ಒಲವು
ಸನಿಹ ಇದ್ದರೂ ದೂರವಾದರೂ ಬಿಳುಪಿನ ಆಲೆ ಈ ಒಲವು
ಅತಿ ಅಮೂಲ್ಯ ನೀ ಜೀವನದ ಸ್ಫೂರ್ತಿ ಹರಳು
ನೆನಪುಗಳ ಬಲೆಯಲಿ ನೇಯ್ಗೆ ಮಾಡುತಾ
ಮಾಯೆಯ ಕವನವ ಕವಿಯಂತೆ ನುಡಿದೆ ,ಅರಿವಿನ ಬೆಳಕೇ ನೀ ಆದೆ
ಆಗಸದ ಎತ್ತರ ಈ ಎಲ್ಲಾ ಭಾವನೆಗಳು, ವೀಣೆಯ ಸ್ವರದಂತೆ ಆ ಶೃತಿಗಳು
ಅರಿಯುವೆಯಾ? ಆ ಸ್ವರಗಳ ಭಾವನೆಗಳ?
ಮಂದಾರ ಹೂವಿನಂತೆ ಬಹಳ ನಯ ಈ ಒಲವು..
ನಿಂತ ನೀರಿನಂತೆ ತಿಳಿ ಈ ಒಲವು
ಸನಿಹ ಇದ್ದರೂ ದೂರವಾದರೂ ಬಿಳುಪಿನ ಆಲೆ ಈ ಒಲವು
No comments:
Post a Comment