ಮುಳುಗುತಿರುವ ಈ ಜೀವನಕೆ, ನೀ ನೌಕೆಯಾದಂತೆ...
ಬರಿದಾದ ಬಾಳಿಗೆ, ತಂಗಾಳಿಯ ನೀ ತಂದಂತೆ
ಉಸಿರಿರದ ಜೀವಕೆ ಉಸಿರನ್ನು ನೀ ತಂದಿರುವೆ,
ಖಾಲಿ ಹೃದಯಕೆ ವರವಾಗಿ ಬಂದಿಹೆ...
ಹೆಸರಿರದ ನಂಟಿಗೆ , ಜೊತೆಯಾಗಿ ಸಾಗಿಹೆ....
ಕತ್ತಲಿಂದ ಬೆಳಕಿನೆಡೆಗೆ ಜೊತೆಯಾಗಿ ಸುಮ್ಮನೆ ...
ಹಸಿರಾಗಿಸಿ, ಹೃದಯಕೆ ತಂಪನ್ನು ಚೆಲ್ಲಿಹೆ...
ನೀನಾದೆ ಬಾಳಿಗೆ, ಹುಣ್ಣಿಮೆಯ ಚಂದ್ರಿಕೆ ..
ನೀ ಇದ್ದರೆ ದೂರ, ಪ್ರತಿಬಿಂಬವೂ ದೂರ, ಹೀಗೇತಕೆ ಹೇಳು?
ಮರುಭೂಮಿಯ ತರದಿ, ಬಾಳಿನ ಈ ಸಾರ ಹೀಗೇತಕೆ ನನಗೆ ತಿಳಿಯದು?
ನೋವಿನ ಸರಮಾಲೆಗಳೇ, ಅಪಸ್ವರದ ಶೃತಿಯ ಮಿಡಿತಗಳೇ...
ಆದರೂ, ನನ್ನಲ್ಲಿ ಜೀವವ ತುಂಬಿಹೆ ನೀ ....
ನನ್ನಲ್ಲಿ ನನ್ನನ್ನೇ ಬದುಕಿಸಿ, ಪ್ರೀತಿಯ ಚಿಗುರೊಡೆಸಿ,
ಹೋದ ನಿನ್ನಲ್ಲಿ ಕಾಣುವೆ ನೋವಲ್ಲೂ ನಗುವನು
ಮೋಡದ ಮಳೆ ಹನಿಗಳು, ಸಾಗರದ ಅಲೆಗಳ ತರದಿ,
ಅಡಗಿಸಿಹೆ ನಾ ಪ್ರೀತಿಯ ಭಂಡಾರವನು,
ನಗಿಸುವ ಆ ಕಲೆಯ, ಸ್ನೇಹದ ಆ ಬಲೆಯ ನಾ ಕಂಡೆನು
ಪ್ರೇಮದ ಆ ಮೋಡಿಗೆ ನಾ ಸಿಲುಕಿಹೆನು
ನಾ ನಡೆವ ಹಾದಿಗೆ, ಹೂವೇ ನೀ ಆಗಿಹೆ
ಆಗಲೂ, ತಿಳಿಯದೆ ಹೋದೆನು ನಾ ನಿನ್ನಿರುವಿಕೆಯನು
No comments:
Post a Comment