Wednesday, August 3, 2011

ಅದೊಂದು ದಿನ

ಸ್ನೇಹಿತನೇ,

ಅಂದು ನಾನು ಹೇಳ ಬಯಸಿದೆ ಸಣ್ಣ ಪದವ 
ಅರಿಯದೆ ಅರಳಿಸಿತು ನನ್ನಲ್ಲಿ ಭಯದ ಕಣವ 
ಮನವು ನುಡಿಯುತಿತ್ತು ಆ ಮಧುರ ಮಾತು,
ಕೇಳಬಯಸುತಿತ್ತು ಅದನು ನಿನ್ನ ಬಳಿಯೇ ಕುಳಿತು 

ಆ ಕ್ಷಣಗಳು ವಿಸ್ಮಯ,
ನಾನಾದೆ ತನ್ಮಯ,
ನೀ ನುಡಿಸು ಬಾ ನನ್ನ ಹೃದಯ ವೀಣೆಯ,
ನೀನೆ ತಾನೆ ನನ್ನ ಬಾಳ ಗೆಳಯ!

ಮೌನವೆ ನುಡಿಯಾಯ್ತು ನುಡಿಯು ಕವಿತೆಯಾಯ್ತು 
ಬಾಳು ಹಸನಾಯ್ತು ನೋವು ಹುಸಿಯಾಯ್ತು
ಸಂಗೀತದ ಸ್ವರಗಳ ಸಮ್ಮಿಲನವಲ್ಲಿ
ಪನ್ನೀರ ಎರೆಯಿತು ನನ್ನ ಅಂಗಳದಲ್ಲಿ 

ಮನದಲ್ಲಿ ಆ ರೀತಿಯ ತೊಳಲಾಟ 
ಜೀವನದಲ್ಲಿ ಬಂಧನಗಳ ಈ ಆಟ 
ಬಿಡಿಸಲು ನೀನು ನನ್ನ ಕನಸುಗಳ ಗಂಟ
ಅಳಿಸದಿರು ಎಂದಿಗೂ ನೀ ನಮ್ಮಿಬ್ಬರ ಈ ನಂಟ


Sunday, July 24, 2011

ಸುರಿಮಳೆ

ಅಲ್ಲಿ ಸ್ನೇಹದ ಹರುಷದ ಸುರಿಮಳೆ,
ನಡೆದಿತ್ತು ಬದುಕಿನ ಭಾವನೆಗಳ ಸಮ್ಮಿಲನ,
ಜೀವನದ ಕೆಲವು ಕ್ಷಣಗಳಲ್ಲಿ ಸಂತಸದ ಸಂಚಲನ
ಇದು ನನ್ನ ಬಾನುವಾರದ ಸಂಜೆಯ ಒಂದು ಗಾನ!!

ಮನಸು ಅಲ್ಲಿ ಗರಿಗೆದರಿ ಹಾರುತ್ತಿತ್ತು
ಎಲ್ಲಾ ಮುಗ್ದತೆಯ ಸವಿ ನೆನಪುಗಳು 
ಅಲ್ಲಿ ಎಲ್ಲರೂ ಬಯಸಿದ್ದು ನಗುವಿನ ಹಾಡುಗಳು 
ಗುನುಗುನಿಸಿದ್ದು Sanireeta ಪದಗಳು!!

ಪಯಣದ ದಾರಿ ತುಂಬಾ ಚಿಕ್ಕದೆನಿಸಿತು 
ಕ್ಷಣಗಳು ಕ್ಷಣದಲ್ಲಿ ಮರೆಯಾಗುತಿತ್ತು
ಅಲ್ಲಿ ನನಗೆ ಕಂಡದೆಲ್ಲಾ ಹತ್ತಿರವಾಗುತಿತ್ತು
ಹಾಗೆ ಸಮಯ ನನ್ನಿಂದ ದೂರವಾಗುತಿತ್ತು!!

ಪ್ರತಿ ಪದಗಳು ಕವನವಾಯಿತು 
ಮನಸಲ್ಲಿ ಶಾಂತತೆ ನೆಲಸಿತು 
ಸಮೀಪದ ಸಂಗೀತ ಅಲ್ಲಿ ಕೇಳಿಸಿತು
ಆದರೆ ಕೊನೆಗೂ ವಿದಾಯ ಹೇಳುವ ಸಮಯ ಹತ್ತಿರವಾಯ್ತು!!!




Friday, May 27, 2011

ಒಂಟಿ

ಈ life ಲಿ ನಾನು ಒಬ್ಬಂಟಿ 
ಜೀವನವಾಯ್ತು twenty twenty
ಅಲ್ಲಿ ತುಂಬಿತ್ತು ಬರೀ ಶುಂಟಿ
ಇಲ್ಲವಾಯ್ತು ಇಲ್ಲಿ ಮಸ್ತಿ !!!!!

ಬಯಸುತ ಸೇರಿದೆ ಕೆಲವು  group
ಆದರೂ ಮನದ ಗೂಡು ಆಗಿತು ಕಲಬೆರಿಕೆ soup
ನನ್ನ ದಿನಗಳು ಆಗಿದೆ ಖಾಲಿ pipe 
ಈಗ ಎಲ್ಲರೂ ಅಂತಾರೆ ನಾನು ಒಂದು type !!!!

ಹೇಗೆ ತುಂಬಲಿ ಈ ದಿನಗಳಲಿ happiness
ಇರದಾಗಿದೆ ಇಲ್ಲಿ  ಬಂಧನದ sickness 
ಆವರಿಸಿದೆ ಇಲ್ಲಿ ತುಂಬಾ darkness 
ಕಣ್ಣಲ್ಲಿ ತುಂಬಿದೆ ಬರೀ tears !!!!

ಬೇಜಾರಾದ್ರೆ ಕಂಪ್ಯೂಟರ್ ನಲ್ಲಿ games 
ಹೊರಗಡೆ ಹೋದ್ರೆ traffic signals 
ದಿನಗಳು ಕಳೆದಿದೆ  without  friends 
ಬೇಕಿದೆ ಈಗ ಸಂತಸದ showers !!!!!   

ಪ್ರೀತಿ ತುಂಬುವುದಂತೆ energy 
ಆದರೂ ಜನರಲ್ಲಿ ತುಂಬಿದೆ stratergy 
ಜೀವನದಲ್ಲಿ ಹಾಕಿಕೊಂಡು ಹಲವೂ policy 
ಯಾವಾಗ ಸಿಗುವುದು ಇದಕ್ಕೆಲ್ಲಾ clarity !!!!

Thursday, May 19, 2011

Life ಇಷ್ಟೇನೆ

ನೆನಪಿನ ಅಂಗಳ ಚಿಕ್ಕದಾದ್ರು
ಕನಸಿನ ಕವಲು ಹಿರಿಯದಾದ್ರು 
ಬದುಕಿನ ಆಯಸ್ಸು limited ತಾನೆ 
Life ಇಷ್ಟೇನೆ !!!

ಅಲೆಗಳ ಹಾಗೆ ನಡೆವ ಬಾಳು
ಏಳು ಬೀಳು ಎಲ್ಲಾ ಉಂಟು
ಬೇವು ಬೆಲ್ಲದ ರುಚಿಯು ಹೆಚ್ಚು 
Life ಇಷ್ಟೇನೆ!!!!

ಅರ್ಥಗಳೆ ಇರದ ಪದವು ಇಹುದು
ಪ್ರೀತಿಯ ಅರಿಯದ ಲೋಕವು ಇಹುದು
ಇಂತ ಸಮಾಜದಿ ನೀನು ಬದುಕು 
Life ಇಷ್ಟೇನೆ!!! 

ಬೆಳಿಗ್ಗೆ ಎದ್ದು ಮುಖವ ತೊಳೆದು 
Brush ಮಾಡಿ ಕೆಲಸವ ಹುಡುಕು 
ಇಷ್ಟ ಇರದ ಕೆಲಸವ ಸೇರ್ಕೋ
Life ಇಷ್ಟೇನೆ!!!

ದಿನವೂ ದೇವರ ಪೂಜೆ ಮಾಡು 
ಬೇಕಿದ್ದು ಬೇಡದ್ದು ಎಲ್ಲ ಕೇಳ್ಕೋ 
ದೇವರೇ ನಿನಗೆ ವರವ ನೀಡಲಿ 
Life ಇಷ್ಟೇನೆ !!!

ಆಂಗ್ಲ ಭಾಷೆಯಲಿ ಓದನು ಮುಗಿಸು 
ವಿದೇಶಕ್ಕೆ ಪ್ರಯಾಣ ಮಾಡು
ಹೆಚ್ಚು ಹೆಚ್ಚು ಹಣವ ಗಳಿಸು 
Life ಇಷ್ಟೇನೆ!!

ಎಲ್ಲ tension  ತೊರೆದು ನೀನು
ಹೊಲದಿ ಒಮ್ಮೆ ಓಡಾಡು
ಮನದ ಶಾಂತಿಯ ಮರಳಿ ಪಡೆ 
Life ಇಷ್ಟೇನೆ!!!



ಪ್ರೇಮ ಕವನ

ನನ್ನ ಪ್ರತಿ ಹೆಜ್ಜೆಗಳ ಗುರುತು ನೀ ಆಗಬೇಕೆಂದು ನಾ ಬಯಸಿದೆ,
ನಿನ್ನದೇ ನೆನಪಿನಲ್ಲಿ ಮಗ್ನಳಾಗಿ ನಾ ನಿನ್ನ ಅರಸಿದೆ,
ಬಾಳ ಪಯಣದ ಒಂದೊಂದು ತಿರುವಿನಲೂ 
ಕೇವಲ ನಿನ್ನ ನೆರಳ ನಾ ಆಶಿಸಿದೆ!!

ನೂರೊಂದು ಕಿರಣಗಳ ಬಿರುತಾ ರವಿ ತಾ ಮೂಡಿದ 
ಆ ಕಿರಣಗಳ ಪದರಗಳಲಿ ನನ್ನ ಸೇರಿಸಿದ 
ಮೂಡಿಸಿದ ಮನದಲ್ಲಿ ಹೊಸ ಆಸೆಗಳ 
ತುಂಬುತ ಒಲವಿನಾಸರೆಯ ಕೆರೆಯ 

ಒಲಿದನು  ಒಲವಿನ ಚರಿತೆಯ ಬರೆಯುತ
ಹೃದಯದಲ್ಲಿ ಪ್ರೇಮದ ಮುಸುಕ ಎಳೆಯುತ 
ಕಳೆದು ಹೋದೆ ನಾ ನಿನ್ನಲ್ಲಿ  ಉಸಿರ ಸೇರಿಸುತ 
ಜೀವನದಲ್ಲಿ ಎಲ್ಲರಿಗೂ ಈ ಪ್ರೇಮದ ಮಾಹಿತಿ ನೀಡುತ 

ಜೀವನದ ಪುಟಗಳಲಿ ಬರೆದೆ ನಾನು ನಿನ್ನ ಹೆಸರು
ನನಗೆ ತಿಳಿದಿತ್ತು ನಾನೇ ನಿನ್ನ ಉಸಿರು
ನನ್ನ ಬದುಕಿನ ಹಾಲಿಗೆ ನೀನೇ ಮೊಸರು 
ನೀಡು ನನ್ನ ಕವನಗಳಿಗೆ ನೀ ಹಸಿರು!!!

  

Wednesday, May 11, 2011

ಅಲೆ

ಕಣ್ಣಂಚಿನಲ್ಲಿ ಹನಿಯೊಂದು ಮೂಡಿ ದನಿಯಾಯ್ತು ಹೇಗೋ ಈಗ,
ಬರಿದಾದ ಮನದಿ ಹೂ ಚಿಗುರಿತೊಂದು ಹೇಗೋ ತಾನೇ ಆಗ!!
ಕನಸನ್ನು ಕಾಣಲು ಅನುಮತಿಯ ತಂದೆಯಾ
ಮನದಲ್ಲಿ ಮೂಡಿಸಿ ಹೊಸ ಕವಿತೆಯ .....

ಬರಿಗೈಯಲ್ಲೇ ನಾ ಬರೆಯಬಲ್ಲೆ ಮನದಾಳದ ಮಾತು,
ನನ್ನಲ್ಲಿ ಮೂಡಿಸುತಾ ಪ್ರೇಮದ ಚಿತ್ತಾರದ ಮಾತು,
ಹೃದಯದ ಸೆರೆಮನೆಯೊಳಗೆ ನನ್ನ ನೀನು ಬಂಧಿಸಿ
ತೊಡಿಸುತ ನನ್ನ ಕೈಗೆ ನೀರ ಅಲೆಯ ಉಂಗುರ
ಆ ಅಲೆಯೇ ನನ್ನ  ಜೀವನದಿ ಮೂಡಿಸಿದೆ ಹೊಸ ರಂಗು
ಜೋಕಾಲಿಯಾಗಿ ತೂಗುತಿದೆ ನಿನ್ನ ಪ್ರೇಮದ ಗುಂಗು

ಮಣ್ಣಿನ ಕಣ ಕಣದಲ್ಲೂ ನಿನ್ನ ನೆನಪಿನ ಮಳೆಯ ಕಂಪು
ಹಾದಿಯಲ್ಲೆಲ್ಲಾ ಹೂವಿನ ಆ ನವಿರಾದ ಕಂಪು
ಬೆಳಕಿನ ಬಣ್ಣದ ಕಾಮನಬಿಲ್ಲು
ಕಟ್ಟಿರುವೆ ನಾನು ಅಲ್ಲಿ ಪ್ರೇಮದ ಮಹಲು
ಆ ಮಹಲೇ ನನ್ನ ಬಾಳ ಮೈಲಿಗಲ್ಲು
ಅಲ್ಲಿ ನೀನು ಹೀಗೆ ಪ್ರೀತಿಯ ಚೆಲ್ಲು.....

Tuesday, April 5, 2011

ಹೃದಯ ಮಿಲನ

ಸ ರಿ ಗ ಮ ಪ ದ ನಿ ನುಡಿದಿದೆ ನನ್ನ ಈ ಉಸಿರು
ಬೆಳಕಿನ ಹಾದಿ ತೆರೆದಿದೆ ಹೀಗೆಯೇ
ಕಣ್ಣು ಕಣ್ಣಿನ ಮಿಲನದಿ ಹೃದಯ ಹೃದಯಗಳ ಕಚಗುಳಿ
ಬರೆಯುತ ಹೊಸ ಪ್ರೇಮ ಪದಕೆ ಮುನ್ನುಡಿ!!!

ನನ್ನಯ ಒಲುಮೆಯ ಪ್ರೇಮ ಕವಿತೆ ನೀನು
ನನ್ನಯ ಕನಸಿನ ನನಸಾದೆ ನೀನು
ಹೇಗೆಂದು ಬಣ್ಣಸಲಿ ನಿನ್ನ ಪ್ರೇಮದ ಬಣ್ಣಗಳನು
ಚಿತ್ತಾರ ಬರೆದೆ ನನ್ನ ಜಗತ್ತಲಿ ಹೊಸ ರಂಗು ತುಂಬಿ ನೀನು 

ಬರೆಯುತ ಹೊಸ ಪ್ರೇಮ ಪದಕೆ ಮುನ್ನುಡಿ!!!

ಸ ರಿ ಗ ಮ ಪ ದ ನಿ...........

ಕಣ್ಣನು ಕಾಯುವ ರೆಪ್ಪೆಯಂತಾದೆ ನೀ
ದಾರಿಯ ತೋರುವ ಬೆಳಕಂತಾದೆ ನೀ
ನನ್ನ ಕಣ ಕಣದಲು ಸೇರಿದೆ ನಿನ್ನ ಪ್ರೀತಿಯ ಮಂಪರು
ನಿನ್ನ ಹೃದಯವ ಹೀಗೆ ಸೇರುವೆ ನಾನಾಗಿ ಮಳೆ ತುಂತುರು 

ಬರೆಯುತ ಹೊಸ ಪ್ರೇಮ ಪದಕೆ ಮುನ್ನುಡಿ!!
ಸ ರಿ ಗ ಮ ಪ ದ ನಿ...........



Creative Commons Licence
This work is licensed under a Creative Commons Attribution-ShareAlike 3.0 Unported License.