Tuesday, March 27, 2012

ಕಾಯ್ಕಿಣಿಯ ಕಂಡೆ

ನಾ ಆರಾಧಿಸುವ ಕವಿಯ ಮುಂದೆ
ಮಾತಾಡಲಾಗಲಿಲ್ಲ  ಆ ದಿನ ನನಗೆ
ಸುಮ್ಮನಿದ್ದ ನನ್ನಲ್ಲಿ ಕವನಗಳ ಕದನ 
ಅಲ್ಲಿ ನನ್ನೊಳಗೆ ಮಾತುಗಳ ಸರಿಗಮ, ಸಮಾಗಮ!!

ನಾನು ಹುಡುಕುತ್ತಿದ್ದ ಜಾಡು ಸೇರಿದ್ದು
ಒಂದು ಪುಸ್ತಕದ ಅಂಗಡಿಯ
ರೆಪ್ಪೆಗಳು ಕದಲದೆ ಹುಡುಕ್ಕಿದ್ದು
ಆ ಕವಿಯ ಒಂದು ಸಣ್ಣ ಜಲಕ್ ನ !!!  



ಟಿಕ್ ಟಿಕ್ ಓಡುತ್ತಿದ್ದ ಗಡಿಯಾರದ ಸದ್ದಿನೊಡನೆ
ನನ್ನ ಹೃದಯದ ಮಿಡಿತದ ಶಬ್ದಮಾಲೆ
ಸಂತಸದ ಆ ಸಂದರ್ಭದಲ್ಲಿ
ನಾ ತೂಗಿಕೊಂಡೆ ಹರುಷದ ಜೋಕಲೆ

ಕೊನೆಗೆ ಕಂಡೆ ಆ " ಚಾರ್ ಮಿನಾರ್ " ವ್ಯಕ್ತಿಯ 
ಹಿಂದಿಂದ ಕಂಡಂತಾಯ್ತು ಸೂರ್ಯ ಕಾಂತಿಯ
ನಾನು ಸ್ಪರ್ಶಿಸಿದೆ, ಸೂರ್ಯಕಾಂತಿ ಹೂ ತರದಿ
ಮರೆತು ಹೋದೆ ಪದಗಳ, ಸೌಭಾಗ್ಯದ ಸುಳಿಯಲಿ

ಅವರ ಕಂಡ ಆ ಸಂತಸವ ಮನದಲ್ಲಿ ತುಂಬಿಕೊಂಡೆ
ಹಸ್ತಾಕ್ಷರವ ವರವಾಗಿ ಪಡೆದೆ,
ಅರ್ಪಿಸಿದೆ ಕವನಗಳ ಅವರ ಮಡಿಲಲಿ
ಕಾಯುತಲಿರುವೆ ಈಗಲೂ ಅವರ ಕಾವ್ಯಮಯ ಉತ್ತರಗಳಿಗೆ!!!

Tuesday, March 13, 2012

ರಾಗ

ಎಲ್ಲೊ ದೂರದಿ ನೀನು ಹಾಡಿದ
ರಾಗವನ್ನು ಆಲಿಸಿದೆ....
ನಿನ್ನ ಕಾವ್ಯದ ರಾಗದೊಳಗೆ
ನನ್ನ ಭಾವನೆ ಬೆರೆಸಿದೆ .....

ಸಂಧಿಗೊಂದಿಯ ನಡುವೆ ಹರಿವ
ಜಲಧಾರೆಯಂತೆ ನೀನು....
ನನ್ನ ಮನದ ಅರಮನೆಯ
ದಿವ್ಯ ಜ್ಯೋತಿಯ ಬೆಳಕು ನೀನು .....
ಹೇಗೆ ತಿಳಿಸಲಿ ಮೌನ ಭಾಷೆಯ ಹೃದಯದ ಅಂತರಾಳವನು!!!
ಅಲೆದು ಅಲೆದು ದಣಿದೀಹುದೀ ಮನ ಅರಿಯಲು ನಿನ್ನ ರಾಗವನು !!!!

ಎಲ್ಲೊ ದೂರದಿ ನೀನು ಹಾಡಿದ ........

ಸಪ್ತಸಾಗರದ ಸಪ್ತಸ್ವರಗಳ ಅಡಗಿಸಿರುವ
ಆ ರಾಗ......
ಮರೆಯಬಹುದೆ ಎಂದಾದರೂ ನೀ
ನಾನು ತಂದ ಉದ್ವೇಗ
ನೆರಳು ಬಿಸಿಲಲಿ ಆಡುವ ಜೋಕಾಲಿ, ನಿಲ್ಲದಿರಲಿ ಎಂದೆಂದೂ
ಜೀವಂತವಾದ ನಿನ್ನ ನೆನಪು ಸೇರಲಿ ಗುರಿಯನು ತಾನೆಂದೂ


-----------------------------------------------------------------------------------------------------------------------
ನನ್ನ ಮೊದಲ ಭಾವಗೀತೆ ................

Monday, March 12, 2012

ನೀ

ನೀ ಸುಳಿದೆ ಮರಗಳ ಮರೆಯಲಿ
ಆಡುತ ಕಣ್ಣಾ ಮುಚ್ಚಾಲೆ,
ಹರಡುತ ಬಣ್ಣಗಳ ಸುಂದರ ರಂಗು
ಮೆರೆಸುತ್ತಿದ್ದೆ ನೀ ನಿನ್ನ ಮೆರುಗು

ನಾ ಸಾಗುತ್ತಿದ್ದ ಹಾದಿಯಲ್ಲೇ ನಿನ್ನ ಪಯಣ
ಹೆಜ್ಜೆ ಹೆಜ್ಜೆಯಲ್ಲೂ ನಿನ್ನದೇ ಧ್ಯಾನ
ದಿನಚರಿಯ ಭಾಗ ಕಳೆದು ಹೋದಂತೆ ನನಗೆ
ಮರೆಯಾಗಿ ನೀ ದೂರ ನಿಂತರೆ ಹೇಗೆ??

ವಾಹನದ ಚಕ್ರಗಳು ಉರುಳುತಿದ್ದರೂ ನಾನು ಕಳೆದು ಹೋದೆ ಎಲ್ಲೊ
ಆಲಿಸುತ್ತಿದ್ದೆ ನಿನ್ನ ದನಿಯನ್ನು ಕುಳಿತು ಅಲ್ಲೆಲ್ಲೂ
ನೀ ಆಗಲಾರೆ ದೂರ ನನ್ನಿಂದ,
ಇದ್ದರೂ ನಮ್ಮಿಬ್ಬರ ನಡುವೆ ಈ ಸಮಯದ ಅಂತರ

ಜಗದ ಯಾವುದೇ ಮೂಲೆಯಲಿ ನಾ ಉಳಿದರೂ
ಕಾಣುವೆ "ರವಿ" ನಿನ್ನ ಮೊಗವ ನಾ ಎಲ್ಲೆಲ್ಲೂ
ಹರಿಸು ದಿನವು  ನೀ ನಿನ್ನ ಕಿರಣಗಳ ಸುರಿಮಳೆ
ನಾ ತೊಡುವೆ ಆಗ ಆ ಚಿನ್ನದ ರೇಖೆಯ ಬಳೆ




 

Thursday, December 22, 2011

Cricket ಹುಚ್ಚು

ಹೆಚ್ಚೆಂದರೆ ಅತಿಶಯೋಕ್ತಿ ಅಲ್ಲವೇನೋ
ಹುಚ್ಚೆಂದರೂ ತಪ್ಪಲ್ಲವೇನೂ
ನನ್ನ ಹುಡುಗನ ಮಧುರ ಒಲವು
ನಾನ್ನಲ್ಲ ಎಂದರೆ ನಂಬುವಿರೋ ಏನೋ?

ಆ ಹಳೆಯ ನೆನಪಿಗೆ ಆ ಸವಿಯಾದ ಪಯಣ
ಹೊಡೆತ ತಿಂದ ಆ ಏಟುಗಳ ಸ್ಮರಣ
ತಿಂದ ಊಟ ಆಗುತ್ತಿರಲಿಲ್ಲ ಜೀರ್ಣ
ಏನು ಇದಕ್ಕೆಲ್ಲ ಕಾರಣ?

ಅಷ್ಟು ದೊಡ್ಡ ಸಂಘದಲ್ಲಿ ಅವನಾದ ಹೀರೋ
ಬೇರೆಯೆಲ್ಲಾ ಆಯ್ತು ಝೀರೋ ದೊಡ್ಡ ಝೀರೋ
ಬಿಳಿ ಬಣ್ಣಕ್ಕೆ ತಿಳಿಯದ ಆಕರ್ಷಣೆ
ಭೂಮಿ ಆಕಾಶದ ಮಧ್ಯೆ ಸಂಘರ್ಷಣೆ

ಸ್ವರ್ಗದ ಮಡಿಲೇನೋ ಎಂಬ ಭಾವನೆ
ಮಾಡುತ್ತಿದ್ದ ಅನುಕರಣೆ
ಅದೇ ಪ್ರಪಂಚದ ಪೀಠಾಧಿಪತಿ ಇವ
ಮುಗ್ದ ಮನಸಿನ ಚಂಚಲ ಭಾವ

ಕೈಲಿ ಹಿಡಿದ ಆ ದಾಂಡು
ಬೀಸಿ ಬರುವ ಆ ಚೆಂಡು
ಆಗ ಪ್ರಪಂಚವಿತ್ತು ತುಂಬಾ ಗುಂಡು
ನಾನಾಗುವ ಮೊದಲು ಅವನಿಗೆ ಬಂಧು




Monday, December 19, 2011

ಅರ್ಧ ಹೆಂಡತಿ

ಯಾರಪ್ಪ ಈ ಮಾರಾಯ?? ಹೀಗೆ ಮಾತಾಡುತ್ತಾನೆ
ವಿಚಾರ ವಿನಿಮಯದ ನಂತರ ನನ್ನ ಮುಂದೆ ಹೀಗೆ ಹೇಳುತ್ತಾನೆ
ಮನೆ ಮಂದಿಯ ಬಗ್ಗೆ ಕೇಳದ ನಾನು
ಪುರಾಣವ ತೆಗೆದೇ, ಆಗಲೇ ತಿಳಿದದ್ದು ಈ ಅರ್ಧ ಹೆಂಡತಿಯ ಬಗ್ಗೆ!!!

ಈ ದೊಡ್ಡ ಬಂಗಲೆಯ ಒಳಗೆ ಆಂಗ್ಲ ಪದಗಳ ಕಾರುಬಾರು
ಸಣ್ಣ ಸಂಕಟದ ಅಲೆಯ ಮುಂದೆ ಬರಿ ಇತ್ತು ಅದರ ರಂಗು ಜೋರು
ಆದರೆ ಕನ್ನಡದ ಕಂಪು ಎಲ್ಲಿಯೂ ಅಳಿಯದೆ ಮಾತುಗಳು ಅಲ್ಲಿ ಬರ್ಜರಿ ಸಾಗಿದೆ
ಮನಸು ಬಿಚ್ಚಿ ಭಾವನೆಗಳು ಗರಿಗೆದರಿದೆ!

ಪದಗಳ ಮದ್ಯೆ ತಿಳಿಯಿತು "ಗೋವಾ" ದ ವಿಷಯ
ಅಲ್ಲಿತ್ತು ಮದುವೆಯ ಸಂಭ್ರಮದ ಮಾಯಾ
ಹತ್ತಿರ ಬಂಧುಗಳ ನಡುವೆ ಮಧುವಣಗಿತ್ತಿ
ಹರುಷವು ತುಂಬಿತ್ತು ಅವಳ್ಳನ್ನು ಸುತ್ತಿ ಸುತ್ತಿ

ಈ ಚರ್ಚೆಯೆಲ್ಲಾ ಆಕೆಯ ಮೇಲೆ
ಅವಳೇ ಈ ಅರ್ಧ ಹೆಂಡತಿ ಎಂಬಾ ಬಾಲೆ!!
ಯಾರೋ ಏನೋ ತಿಳಿಯದ ನಾನು, ಆ ಪದಕ್ಕೆ ಮನಸೋತೆ
ಕವನವ ಬರೆವ ಆಸೆ ವ್ಯಕ್ತ ಪಡಿಸಿದೆ!!

ಪದಗಳ ಹೆಕ್ಕಿ ಬರೆಯಲಾದೆ, ಸಣ್ಣ ಪುಟ್ಟ ಪದಗಳ ಹೊಂದಿಸಿದೆ
ಕವಿತೆಯ ಓದಿ ಮನನೊಂದಬೇಡಿ, ಪದಗಳನು ಕಾವ್ಯದಲ್ಲಿ ಬಂಧಿಸಿದೆ


"साली आधी घर वाली "

Saturday, December 10, 2011

ಬಂಧನ

ಎಲ್ಲೋ ಅಳಿದುಹೋಗುತ್ತಿದ್ದ ಪ್ರೀತಿಯ ಭರವಸೆಯ ನನ್ನಲ್ಲಿ ಮೂಡಿಸಿದೆ
ಬಾಡಿ ಹೋಗುತ್ತಿದ್ದ ಬಳ್ಳಿಗೆ ನೀರಿನ ಆಸರೆಯಾದೆ!
ಸಂತಸವ ಹರಡುವ ಭಾವನೆಯ ತಂದೆ
ನನ್ನ ಪುನಃ ಜೀವಂತವಾಗಿಸಿದೆ!

ಹೇಗೋ ಏನೋ ತಿಳಿಯದೆ ನಿನ್ನಲ್ಲಿ ನಂಬಿಕೆ ಅತಿರೇಕವಾಯ್ತು
ಬಣ್ಣದ ಆಗಸದಲ್ಲಿ ಹಾರುವ ನನಗೆ ರೆಕ್ಕೆಯ ಕಳೆದುಕೊಂಡತಾಯ್ತು
ಸದಾ ನಾನು ನಿನ್ನ ನೋವಿಗೆ ಕಾರಣವೇನೋ ಅನಿಸುವಂತಾಯ್ತು
ಕೊನೆಗೆ ನನ್ನ ಜೀವಂತಿಕೆಯ ಬಗ್ಗೆ ನನಗೆ ದುಃಖವೆನಿಸಿತು!!

ಸಂತಸದ ಕಡಲಲ್ಲಿ ಸಾಗುತ್ತಿದ್ದ ನಮಗೆ ಈ ನೋವೇಕೆ?
ನಮ್ಮ ಮಧ್ಯ ಕ್ಷಮೆಯ ಬಂಧನವೇಕೆ?
ನಾವೇನು ಸಮಾಜದ ಕಟ್ಟುಪಾಡುಗಳಿಗೆ ಹೊರತಲ್ಲ
ಆದರೆ ಅದನ್ನು ಅರ್ಥೈಸಿಕೊಳ್ಳದ ಮನಸ್ತಿತಿ ಏಕೆ?

ಕೋಪದ ನುಡಿಗಳ ಕೋಡಿ ನಮ್ಮ ನಡುವೆ ಬಂದಿತೆ?
ಜೀವನವ ಮರೆವಷ್ಟು ದೂರ ನಿಂತೇ ಹೇಗೆ?
ನನ್ನ ಉಪಸ್ತಿತಿ ನಿಂಗೆ ಅನವಶ್ಯಕ ಅನಿಸಿತೆ?
ನನ್ನ ಮಾತುಗಳು ನಿನಗೆ ಮುಳುವಾಯ್ತೆ?

ಈ ಪ್ರಶ್ನೆಗಳಿಗೆ ಉತ್ತರ ಬೇಡ
ನಿನ್ನನು ಅರಿಯುವ ಸ್ವತಂತ್ರ ನೀಡು ನನಗೆ
ನಿನ್ನ ಮನದ ಮೂಲೆಯ ಆಳುವ ಯೋಗ ನನ್ನದಾಗಲಿ ನಿನ್ನ ಮನೆಯನಲ್ಲ!
ನಿನ್ನ ಮನೆಯ ಸಂತಸದ ತೋರಣ ನಾನಾಗುವ ಭಾಗ್ಯ ನನಗೆ ಸಿಗಲಿ!

ಪ್ರತಿ ಮಾತಿನಲ್ಲೂ ಸೋಲಿನ ಅನುಭವ ಬೇಡ
ನಿನ್ನ ಜಯದ ಮಾಲೆಗೆ ನಾನು ಹೂವಾದರೆ ಸಾಕು
ನಿನ್ನ ಎಲ್ಲ ಆಸೆಗಳ ನನ್ನ ಕನಸಿನಂತೆ ಸಿಂಗರಿಸುವೆ
ಬದಕನ್ನು ಒಮ್ಮೆ ನನ್ನ ಕಣ್ಣುಗಳಿಂದ ನೋಡುವ ಔದಾರ್ಯ ತೋರು ಎನಗೆ

ಈ ಕವನವ ನನ್ನ ಭಾವನೆಗಳಿಂದ ಅಲಂಕರಿಸಿರುವೆ
ಅದಕ್ಕೆ ಅಹಂಕಾರದ ಹೆಸರು ಬೇಡ
ನನ್ನಲ್ಲಿ ನೀನು ಕೊಂಚ ನಂಬಿಕೆಯ ಇಡು
ನಿನ್ನ ನಂಬಿಕೆಯ ಎಂದೂ ತಪ್ಪು ಮಾಡೆನು!

Wednesday, October 19, 2011

ಸ್ಪಂದನ

ಸ್ಪಂದಿಸಲಾರೆನು ನಿನ್ನಯ ಪ್ರೀತಿಗೆ,
ಸ್ನೇಹಕೆ ಸೋತೆನು ಹೇಗೋ ಕನಸನು ಅಳಿಸದೆ!!
ನಿನ್ನೆಲ್ಲಾ ಮೌನವನ್ನು ನಾ ಕದ್ದು ಒಯ್ಯಲೇನು?
ಒಮ್ಮೆ ಸುರಿಸಲು ಆ ಮುತ್ತಿನ ನಗೆಯೊಂದನು! ಸೇರಿದೆ ನಿನ್ನನು!!

ಬಯಸದೆ ಬಳಿಗೆ ಬಂದ ಸ್ಪೂರ್ತಿ ಕಿರಣ ಸ್ಪರ್ಶವು 
ಸೇರಿತು ಈ ಎದೆಯನು ತುಂಬಲು ಹೊಸ ರಾಗವು 
ಆ ಬಾನಿಗೆ ರಂಗನು ನಿನ್ನ ಬಣ್ಣದಿಂದ ನೀಡಬಲ್ಲೆ 
ನನ್ನ ಹುಡುಗುತನವನು ತಪ್ಪು ತಿಳಿಯಬೇಡ ನೀ ಇಂದು!!
ನೂರಾರು ಕವಿತೆಗಳನು ನಾ ಬರೆದು ನೀಡಲೇನು? 
ಅದರಲ್ಲಿಯೇ ಅಡವಿಸಿದೆ ನಾ ನನ್ನ ಬಾಳನು! ಕೊಡುಗೆಯ ನೀಡಲು!!

ಪ್ರೇಮದ ಈ ಕವನಗಳಿಗೆ ಪದಗಳಿಗ ಸಾಲದೇ?
ಹಾರಲು ಕಳಿಸಿದ ನಿನಗೆ ಹಾರಲೀಗ ಬಾರದೇ?
ಈ ಜೀವಕೆ ಜೀವವ ನೀನೆ ಸೇರಿಸಿ ಕೂಡಿಸಿ ಜೊತೆ ಸಾಗಬೇಕು 
ನನ್ನ ಆ ಹೆಜ್ಜೆಗಳಿಗೆ ನಿನ್ನ ಲಜ್ಜೆಯ ಗುಂಗು ಜೊತೆ ಸೇರಿತೆನು?
ಮರುಭೂಮಿಯಲ್ಲಿ ನೀನು ಹೂವಾಗಿ ಬಂದೆಯೇನು?
ನೀ ತೋರಲು ಆ ನೀರಿನ ಹೊಸ ಜಾಡನು?ದಾಹವ ತೀರಲು!!



Creative Commons Licence
This work is licensed under a Creative Commons Attribution-ShareAlike 3.0 Unported License.