ಸಣ್ಣ ನಗೆಯ ಮಿಂಚು, ಮನದ ಸಣ್ಣ ಸಂಚು
ಎಲ್ಲಿ ಮನೆಯ ಮಾಡಿತ್ತು,
ನಿನ್ನ ಅರಿತ ಆ ಮುಗ್ದ ಮನಸು, ಅದರ ಎಲ್ಲಾ ಕನಸು
ಒಟ್ಟಾಗಿ ನೀನು ಹೆಕ್ಕಿ ತರುತಿರುವೆ
ತಂದೆ ನೀನು ಒಲವ ನೆನಪು
ಮರೆತ ಜೀವನದ ಸಣ್ಣ ತುಣುಕು
ಮೌನದಿಂದಲೇ ಅರಿತ ನಿನ್ನ ಗುಣಗಳನು
ಇಂದು ನಿನ್ನ ಸಂದೇಶಗಳಲ್ಲಿ ಹುಡುಕುತ್ತಿದ್ದೆ
ಅಂದಿನ ದಿನಗಳ ನಿನ್ನ ಮುಗ್ಧ ನುಡಿಗಳೆ
ಇಂದು ನಿನ್ನ ಮಾತುಗಳಲ್ಲಿ ನಲಿದಾಡುತಿದೆ
ದಿನವ ಆರಂಭಿಸಿದೆ ನಿನ್ನ ನೆನಪಲ್ಲಿ
ಹೃದಯದ ಆ ಸಣ್ಣ ಬಡಿತದ ಏರುಪೇರಲ್ಲಿ
ನಿನ್ನ ಒಮ್ಮೆ ನೋಡಿ ಮಾತನಾಡುವಾಸೆ
ಆ ಹಳೆಯ ದಿನಗಳ ನೆನೆಯುವಾಸೆ
ಜೀವನದ ಈ ಎಲ್ಲಾ ಕದನಗಳಲಿ
ಗಟ್ಟಿಯಾಗಿ ನೀ ನಿಂತೆ ಮನದ ಮೂಲೆಯಲಿ
ಆದರೆ ಮರಳಿ ಬಾರದು ಆ ದಿನಗಳೆಂದು
ನೆನಪನು ಮಾಡುತಿರುವ ಉದಯ ಸಿಂಧು
ಎಲ್ಲಿ ಮನೆಯ ಮಾಡಿತ್ತು,
ನಿನ್ನ ಅರಿತ ಆ ಮುಗ್ದ ಮನಸು, ಅದರ ಎಲ್ಲಾ ಕನಸು
ಒಟ್ಟಾಗಿ ನೀನು ಹೆಕ್ಕಿ ತರುತಿರುವೆ
ತಂದೆ ನೀನು ಒಲವ ನೆನಪು
ಮರೆತ ಜೀವನದ ಸಣ್ಣ ತುಣುಕು
ಮೌನದಿಂದಲೇ ಅರಿತ ನಿನ್ನ ಗುಣಗಳನು
ಇಂದು ನಿನ್ನ ಸಂದೇಶಗಳಲ್ಲಿ ಹುಡುಕುತ್ತಿದ್ದೆ
ಅಂದಿನ ದಿನಗಳ ನಿನ್ನ ಮುಗ್ಧ ನುಡಿಗಳೆ
ಇಂದು ನಿನ್ನ ಮಾತುಗಳಲ್ಲಿ ನಲಿದಾಡುತಿದೆ
ದಿನವ ಆರಂಭಿಸಿದೆ ನಿನ್ನ ನೆನಪಲ್ಲಿ
ಹೃದಯದ ಆ ಸಣ್ಣ ಬಡಿತದ ಏರುಪೇರಲ್ಲಿ
ನಿನ್ನ ಒಮ್ಮೆ ನೋಡಿ ಮಾತನಾಡುವಾಸೆ
ಆ ಹಳೆಯ ದಿನಗಳ ನೆನೆಯುವಾಸೆ
ಜೀವನದ ಈ ಎಲ್ಲಾ ಕದನಗಳಲಿ
ಗಟ್ಟಿಯಾಗಿ ನೀ ನಿಂತೆ ಮನದ ಮೂಲೆಯಲಿ
ಆದರೆ ಮರಳಿ ಬಾರದು ಆ ದಿನಗಳೆಂದು
ನೆನಪನು ಮಾಡುತಿರುವ ಉದಯ ಸಿಂಧು
No comments:
Post a Comment