ಏನಿದು ಹೊಸ ರಂಗು ಎಲ್ಲೆಲ್ಲೂ,
ಏನಿದು ಹೊಸ ಗುಂಗು ಮನಸಲ್ಲೂ,
ಏನೋ ಹೇಳದ ಹೊಸ ಸಂತಸ ಕಣ್ಣಲ್ಲೂ,
ಪ್ರೀತಿಯ ಕರುಣೆ ಇರಬಹುದೇನೋ ಇದು ..
ನನ್ನ ಒಲವಿನ ರೂಪ ನೀನಾಗಲು ನಿನ್ನ ಒಲವು ನಾನಾಗುವೆ
ನನ್ನ ಕಣ್ಣಿನ ಬಿಂಬ ನೀನಾಗಲು ನಿನ್ನ ನೆರಳು ನಾನಾಗುವೆ।।
ದೂರವಾಗಿ ನೀ ಇರಲು, ನೆನಪಲ್ಲೇ ನಲಿದಾಡುವೆ
ಹಾಡನ್ನು ನಾ ಹಾಡಲು, ಹೊಸ ರಾಗವಾಗಿ ಮೂಡುವೆ
ಹೀಗೆ ಪ್ರತಿ ಗಳಿಗೆ ನನ್ನ ನೀ ಸೋಲಿಸಿ ಗೆದ್ದು ನಗುತಿರುವೆ
ಕರೆಯುತಿರುವೆ ನೀ ನನ್ನ ಪ್ರೇಮ ರಂಗದಲ್ಲಿ
ಸೋಲಲು ಬಯಸಿರುವೆ ನಾ ಈಗ ಅದರಲ್ಲಿ
ನಿನ್ನ ಅನುಕರಣೆಯೆ ದಿನಚರಿಯಾಗಿ ಮಾಡಿದೆ
ನನ್ನ ಒಲವಿನ ರೂಪ ನೀನಾಗಲು ನಿನ್ನ ಒಲವು ನಾನಾಗುವೆ
ನನ್ನ ಕಣ್ಣಿನ ಬಿಂಬ ನೀನಾಗಲು ನಿನ್ನ ನೆರಳು ನಾನಾಗುವೆ।।
ಹೀಗೆ ನಾ ಬಂದಿಯಾಗಿರುವೆ ನಿನ್ನ ತೋಳಲ್ಲಿ
ನೀ ಪ್ರತಿ ಕ್ಷಣ ನೆನಯುತಿರು ನನ್ನಾ ಮನಸಲ್ಲಿ
ಈ ಯುಗದ ಹೊಸ ಲಿಪಿ ನೀ ಮೂಡಿಸು
ನಮ್ಮಿಬ್ಬರ ಹೆಸರನ್ನು ನೀ ಈಗ ಜೋಡಿಸು
ಅದರಲ್ಲಿ ನಾವು ಬೇರೆಯಾಗದ ಬಂಧನವ ಬೆರೆಸು
ನಾ ನಿನ್ನ ಧರತಿಯಂತೆ ನೀ ನನ್ನ ರವಿ
ಈ ಧರತಿಯ ತಾವರೆ ನಾನಾದರೆ ನೀನಾದೆ ತೊರೆ
ಕೈಹಿಡಿದು ನೀ ನಡೆವೆಯಾ ಆ ಸಪ್ತ ಪದಿ
ನವಿರಾದ ಒಲವ ಗೀತೆ ಹಾಡುವೆಯಾ ಪ್ರತಿ ಸಾರಿ
ದೂರಾಗಿ ಹೋದರು ಕನಸ ಕಾಣುವೆ
ಜೀವನವ ತುಂಬುವೆ ನಿನ್ನ ಗುಂಗಲ್ಲಿ
ನನ್ನ ಒಲವಿನ ರೂಪ ನೀನಾಗಲು ನಿನ್ನ ಒಲವು ನಾನಾಗುವೆ
ನನ್ನ ಕಣ್ಣಿನ ಬಿಂಬ ನೀನಾಗಲು ನಿನ್ನ ನೆರಳು ನಾನಾಗುವೆ।।
No comments:
Post a Comment