Wednesday, May 21, 2014

ನೀನೇ

ಪುಟ್ಟ ಪುಟ್ಟ ಹೃದಯದ ಒಲವಿದು
ಚಿಕ್ಕ ಚಿಕ್ಕ ಕಣ್ಣಿನ ದೊಡ್ಡ ಕನಸಿದು
ಸಣ್ಣ ಸಣ್ಣ ಪದಗಳ ಕವನವಿದು
ಹೇಗೆ ಇದನು ನಾ ರಚಿಸಲಿ
ಆ ಹೃದಯದಲಿ ನೀನೇನೇ
ಆ ಕನಸು ನಿನದೇನೆ
ಆ ಕವನ ನಿನ್ನ ನೆನಪೇನೆ!
ಹೇಗೆ ನಾ ಅದನು ತಿಳಿಸಲಿ ।।

ಜೀವವ ಕೊಟ್ಟವನೇ; ಜೊತೆಯಲಿ ಬಂದವನೇ
ನನ್ನ ಜೀವನ ನೀನೇನೇ;
ಹೃದಯದ ಬಡಿತದಲಿ ಒಲವನು ಕೊಟ್ಟವನೇ
ಪ್ರೀತಿ ಪ್ರೇಮ ಎಲ್ಲಾ ನೀನೇ,
ನೋವ ಸುಳಿಯಿಂದ ಹೊರಗೆಳದು ತಂದವನೆ
ನನ್ನ ತುಟಿಯ ನಗು ನೀನೇನೆ ।।

ಸ್ನೇಹದ ಎದುರಲ್ಲಿ ಪ್ರೀತಿಯ ಅಡಿಯಲ್ಲಿ
ಹೃದಯ ಬಡಿತ ಅರಿತವನೇ
ಬೆಳಕಿನ ಕಿರಣದಲಿ, ನೆರಳಿನ ಹೆಜ್ಜೆಯಲಿ
ನಾಡಿಯ ಮಿಡಿತ ನೀನೇ;
ರವಿಯ ಬೆಳಕಂತೆ ಬಾನಿನ ರಂಗಂತೆ
ನಿರ್ಮಲ ನದಿ ನೀನೇ .... ।।

ಕಣ್ಣಾಗಿ ಬಂದವನೇ ಕನ್ನಡಿ ಆದವನೇ
ನನ್ನ ಮನಸಿನ ಆಳ ನೀನೇ
ಬಣ್ಣಗಳ ತಂದವನೆ ಬೆಳಕಾಗಿ ಬಂದವನೇ
ಆ ಬಣ್ಣಗಳ ತಾರೆ ನೀನೇ
ಕಮಲದ ಹೂವಂತೆ, ನೀರಿನ ಮುತ್ತಂತೆ
ನನ್ನೊಳಗೆ ನೀನೇ .... ।।





No comments:

Post a Comment

Creative Commons Licence
This work is licensed under a Creative Commons Attribution-ShareAlike 3.0 Unported License.