Monday, May 19, 2014

ನಾನಿರುವೆ

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ
ನೋವಿನಲ್ಲಿ ನಿನ್ನ ಕಣ್ಣೀರ ಹನಿಯಾಗಿ
ನಿನ್ನ ಹೃದಯ ತುಂಬುವ ಒಲವಾಗಿ
ನಿನ್ನ ತೊಳ ಆಸರೆಯಾಗಿ।।

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ

ಮೃದುವಾದ ನಿನ್ನ ನಿಶ್ಚಲ ಪ್ರೀತಿ
ಸಂತಸ ತರುವ ನಿನ್ನ ನಗುವಿನ ರೀತಿ
ತಾಳಕೆ ಸೇರುವ ನಿನ್ನಯ ಶೃತಿ
ಎಲ್ಲದರ ಜೊತೆ ಸೇರಿ ....

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ

ಅಳುಕದಿರು ಅಂಜದಿರು
ಪ್ರೀತಿ ನಮ್ಮ ಜೊತೆ ಇದೆ ಧೈರ್ಯಗುಂದದಿರು
ಹೆಜ್ಜೆ ಹೆಜ್ಜೆಗೆ, ನಿನ್ನ ನಾಡಿಯ ಮಿಡಿತಕೆ 
ಉಚ್ವಾಸ ನಿಚ್ವಾಸದ ಜೊತೆಗೆ...

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ

ಸಾಕು ನಮಗೆ ಜಗದ ಜಗಳ
ತಿಳಿದಿದೆ ನಮಗೆ ನಮ್ಮ ಪ್ರೀತಿಯ ಆಳ
ನಮ್ಮಿಬ್ಬರ ಹೃದಯ ತಿಳಿಯಾದ ಸ್ನೇಹದ ಕೊಳ
ನಿಶ್ಚಿಂತೆಯಿಂದಿರು ನನ್ನೊಲವೆ ....

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ

No comments:

Post a Comment

Creative Commons Licence
This work is licensed under a Creative Commons Attribution-ShareAlike 3.0 Unported License.