Thursday, November 6, 2014

ಭಾವನೆ

ಹಾದಿಯಲಿ ಮುಗಿಯದ ಪಯಣ
ಕರಿ ಮೋಡದ ಒಳಗೆ ಬೆಳಗಿಲ್ಲದ ಯಾನ 
ಸ್ಪೂರ್ತಿ ಇಲ್ಲದ ಜೀವನಕೆ 
ಮರಿಚಿಕೆಯಾದ ನಲಿವು

ಸ್ವಪ್ನ ಲೋಕದಲ್ಲಿ ಹಾರುತ್ತಿದ್ದ ಮನದ ಗಾಳಿಪಟ 
ಕಳೆದು ಕೊಂಡಿತು ಏಕೋ ಹಾರುವ ತನ್ನ ಹಠ 
ಸ್ನೇಹ ಪ್ರೇಮವಿರದ ಖಾಲಿ ಲೋಕದಲ್ಲಿ 
ಬಂಧವ ಬಯಸುವ ಈ ಚಟ 

ಕೈಗೆ ಸಿಗುತ್ತಿಲ್ಲ ಆಸರೆ, ಬಣ್ಣವಿಲ್ಲದ ಲೋಕವಾಗಿದೆ ಈ ಧರೆ 
ಖಾಲಿ ಖಾಲಿಯಾಗಿದೆ ಮನದ ಕವಿತೆ, ಆದರೂ ನುಡಿಯುತಿದೆ ಪದಗಳ ಕಂತೆ 
ಈ ಅಕ್ಷರಗಳ ಮಾಲೆ, ಹೇಳಬಲ್ಲದೆ ಭಾವನೆಗಳ ಸರಮಾಲೆ 
ಸ್ವರಗಳು ಬಿಡಿಸಬಲ್ಲದೇ ಅಂತರಂಗದ ಬಲೆ 

ಬೇಕಿದೆ ಬಿಡುಗಡೆಯ ದಾರಿ, ಹರಿದು ಬಿಡಬೇಕಿದೆ ನೋವಿನ ಸೆಲೆ 
ನಗುವ ತರಬೇಕಿದೆ ತುಟಿಗಳಿಗೆ, ನಿರ್ಮಲ ಸ್ಪರ್ಶ ನೀಡಬೇಕಿದೆ ಮನಕೆ 
ಅಲೆಗಳ, ತರಂಗಳ ತೊಳಲಾಟ ಹರಿಸಿ, ನೆಮ್ಮದಿಯ ನಗು ಹರಿಸಬೇಕಿದೆ
ಪಡೆಯಬೇಕಿದೆ ಮರಳಿ ಕೊಂಚ  ಮುಗ್ಧ ಜೀವನದ ನೆನಪುಗಳು 



Monday, July 7, 2014

ಪ್ರೀತಿ

ಪ್ರೀತಿ ದೇವರಂತೆ!
ಕಾಣದ ಕಡಲಂತೆ!
ಪ್ರೀತಿ ಕನಸಂತೆ!
ಹುದಿಗಿರುವ ಬೆಂಕಿಯಂತೆ!

ವಿಭಿನ್ನ ಭಾವನೆಗಳ, ಭದ್ರ ಕೋಟೆಯಿದು
ವಿಚಿತ್ರ ಲೋಕದ ಹುಚ್ಚು ಕನಸಿನಡಿ
ಬೇಡಿ ಇರದೆ, ಬೇಲಿ ಇರದೆ,
ಹೆಜ್ಜೆಗಳ ಸದ್ದು ಮಾಡದೆ ಆವರಿಸುವ ಮಾಯೆಯಿದು

ಬೆಳಕಿಂದ ಕತ್ತಲಿನೆಡೆಗೆ, ಕತ್ತಲಿಂದ ಬೆಳಕಿನೆಡೆಗೆ
ಒಂಟಿ ಹೃದಯದಿಂದ ಜಂಟಿ ಜೀವನದವರೆಗೆ
ತೃಪ್ತಿಯಿಂದ ಅತೃಪ್ತಿವರೆಗೆ
ಸೋಲಿಲ್ಲದ ಜಯದವರೆಗೆ ಕಾಡುವ ಮಾಯೆಯಿದು

ಹರಿವ ನದಿಯ ಉತ್ಸುಕತೆಯಂತೆ
ಸಮುದ್ರದ ತೆರೆದ ಬಾಹುವಿನಂತೆ
ಮಳೆಯಲಿ ಮಿಂದ ಅವನಿಯ ತೆರದಿ
ಸಂಪ್ರೀತಿಯ ಸಮ್ಮಿಲನದ ಛಾಯೆಯಿದು

Wednesday, May 21, 2014

ನೀನೇ

ಪುಟ್ಟ ಪುಟ್ಟ ಹೃದಯದ ಒಲವಿದು
ಚಿಕ್ಕ ಚಿಕ್ಕ ಕಣ್ಣಿನ ದೊಡ್ಡ ಕನಸಿದು
ಸಣ್ಣ ಸಣ್ಣ ಪದಗಳ ಕವನವಿದು
ಹೇಗೆ ಇದನು ನಾ ರಚಿಸಲಿ
ಆ ಹೃದಯದಲಿ ನೀನೇನೇ
ಆ ಕನಸು ನಿನದೇನೆ
ಆ ಕವನ ನಿನ್ನ ನೆನಪೇನೆ!
ಹೇಗೆ ನಾ ಅದನು ತಿಳಿಸಲಿ ।।

ಜೀವವ ಕೊಟ್ಟವನೇ; ಜೊತೆಯಲಿ ಬಂದವನೇ
ನನ್ನ ಜೀವನ ನೀನೇನೇ;
ಹೃದಯದ ಬಡಿತದಲಿ ಒಲವನು ಕೊಟ್ಟವನೇ
ಪ್ರೀತಿ ಪ್ರೇಮ ಎಲ್ಲಾ ನೀನೇ,
ನೋವ ಸುಳಿಯಿಂದ ಹೊರಗೆಳದು ತಂದವನೆ
ನನ್ನ ತುಟಿಯ ನಗು ನೀನೇನೆ ।।

ಸ್ನೇಹದ ಎದುರಲ್ಲಿ ಪ್ರೀತಿಯ ಅಡಿಯಲ್ಲಿ
ಹೃದಯ ಬಡಿತ ಅರಿತವನೇ
ಬೆಳಕಿನ ಕಿರಣದಲಿ, ನೆರಳಿನ ಹೆಜ್ಜೆಯಲಿ
ನಾಡಿಯ ಮಿಡಿತ ನೀನೇ;
ರವಿಯ ಬೆಳಕಂತೆ ಬಾನಿನ ರಂಗಂತೆ
ನಿರ್ಮಲ ನದಿ ನೀನೇ .... ।।

ಕಣ್ಣಾಗಿ ಬಂದವನೇ ಕನ್ನಡಿ ಆದವನೇ
ನನ್ನ ಮನಸಿನ ಆಳ ನೀನೇ
ಬಣ್ಣಗಳ ತಂದವನೆ ಬೆಳಕಾಗಿ ಬಂದವನೇ
ಆ ಬಣ್ಣಗಳ ತಾರೆ ನೀನೇ
ಕಮಲದ ಹೂವಂತೆ, ನೀರಿನ ಮುತ್ತಂತೆ
ನನ್ನೊಳಗೆ ನೀನೇ .... ।।





Monday, May 19, 2014

ನಾನಿರುವೆ

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ
ನೋವಿನಲ್ಲಿ ನಿನ್ನ ಕಣ್ಣೀರ ಹನಿಯಾಗಿ
ನಿನ್ನ ಹೃದಯ ತುಂಬುವ ಒಲವಾಗಿ
ನಿನ್ನ ತೊಳ ಆಸರೆಯಾಗಿ।।

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ

ಮೃದುವಾದ ನಿನ್ನ ನಿಶ್ಚಲ ಪ್ರೀತಿ
ಸಂತಸ ತರುವ ನಿನ್ನ ನಗುವಿನ ರೀತಿ
ತಾಳಕೆ ಸೇರುವ ನಿನ್ನಯ ಶೃತಿ
ಎಲ್ಲದರ ಜೊತೆ ಸೇರಿ ....

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ

ಅಳುಕದಿರು ಅಂಜದಿರು
ಪ್ರೀತಿ ನಮ್ಮ ಜೊತೆ ಇದೆ ಧೈರ್ಯಗುಂದದಿರು
ಹೆಜ್ಜೆ ಹೆಜ್ಜೆಗೆ, ನಿನ್ನ ನಾಡಿಯ ಮಿಡಿತಕೆ 
ಉಚ್ವಾಸ ನಿಚ್ವಾಸದ ಜೊತೆಗೆ...

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ

ಸಾಕು ನಮಗೆ ಜಗದ ಜಗಳ
ತಿಳಿದಿದೆ ನಮಗೆ ನಮ್ಮ ಪ್ರೀತಿಯ ಆಳ
ನಮ್ಮಿಬ್ಬರ ಹೃದಯ ತಿಳಿಯಾದ ಸ್ನೇಹದ ಕೊಳ
ನಿಶ್ಚಿಂತೆಯಿಂದಿರು ನನ್ನೊಲವೆ ....

ನಾನಿರುವೆ ನಿನಗಾಗಿ ನಾನಿರುವೆ ನಿನಗಾಗಿ

Monday, April 7, 2014

My angel

Day or dawn
My prayers were on
Love you my angel
Till my life is gone

Your beautiful eyes
Your warm touch
You and your voice jingled happiness around
Call it what ever you became my addiction

Those tiny feet that sweet smile
Nothing could be more special...
My love my care was all yours
I say even my tears belong to you

A deep sorrow for life time
Nothing that I could call as mine
Come back to me my angel
We love you forever and ever

Creative Commons Licence
This work is licensed under a Creative Commons Attribution-ShareAlike 3.0 Unported License.