ಹನಿ ಹನಿ ಮೂಡುತ ಸುರಿಯಿತು ಅಲ್ಲಿ ಪ್ರೇಮದ ಮಳೆ
ಮನೆ - ಮನ ತುಂಬಿತು ಒಲಿವಿನ ನಿನ್ನ ಕರೆಯೋಲೆ
ಸುಂದರ ಚಿತ್ರಣ ಬಿಡಿಸುವ ಆ ಜೀವ ಕಲೆ
ಸ್ವಪ್ನದ ಆ ಕಲ್ಪನೆಯ ವಿಧ ವಿಧ ಸೆಲೆ
ಹತ್ತಾರು ರಂಗಿನೊಡನೆ ಆಯಿತಲ್ಲಿ ನಿನ್ನ ಆಗಮನ
ನಾಚುತ ರಂಗೋಲಿಯು ಬರೆಯಿತು ಹೊಸ ಕವನ
ಬೆಳಕಿನ ರಶ್ಮಿ ತುಂಬಿತು ಆ ಗಗನ
ಮರೆಯಲ್ಲಿ ಉಳಿದ ನೋಡು ವರುಣ
ಹೆಜ್ಜೆಯ ಗುರುತು ನಿನ್ನ ಬರುವಿಕೆಯ ದಿಟ್ಟ ಮಾಡಿತು
ಹಸಿರ ಸೀರೆಯ ನನ್ನೊಡನೆ ಪ್ರಕೃತಿ ಉಟ್ಟಿತ್ತು
ನಿನ್ನ ಉಸಿರ ದನಿ ನನಗೆ ಕೇಳಿಸುತಿತ್ತು
ಮನವು ನಿನ್ನ ಮರೆಯಲಿ ನೋಡುತ್ತಿತ್ತು
ಕಾಣುವ ತವಕ ತಡೆಯದೆ ಹೊರಬಂದೆ
ಮನದಣಿಯೆ ನಿನ್ನ ಕಣ್ ತುಂಬಿ ಕೊಂಡೆ
ಹೃದಯದಲ್ಲಿ ನಿನ್ನ ದೀಪ ಬೆಳಗಿಸಿ ಕೊಂಡೆ
ಆಗ ಕಣ್ಣಲಿ ಹನಿಯ ಪರದೆ ಕಂಡೆ
No comments:
Post a Comment