Saturday, October 26, 2024

ನೆನಪಿನ ಹಂದರ

।।ನೆನಪಿನ  ಹಂದರ ।।


ಮನಸಿಂದು ಕಲ್ಪನೆ ಮಾಡಿ ,

ಸಣ್ಣದೊಂದು ನೆಪವ ತೋರಿ,

ನೆನಪುಗಳ  ಬುತ್ತಿಯ ತೆರೆಯಲು 

ನೀ ನನಗೆ ಕೊಂಚ ಸಮಯವ ಕೊಡಬಹುದೇ ?


ಒಲವನ್ನು ಬಯಸಿ ಸ್ನೇಹವನ್ನು ಗೆದ್ದ ಆ ದಿನ ನೆನಪಿದೆಯೇ?

ಗೆಳೆತನದ ಜೊತೆಯಲ್ಲಿ ಪ್ರೀತಿಯ ಆ ಹೂವು ಅರಳಿತಲ್ಲವೇ ?

ಬೆಳಕಾಗಿ ಬಂದ  ಆ ರವಿ ಮೋಡದ ಮರೆಯಲ್ಲೂ, ನೆರಳಾಗಿ ಜೊತೆಯಿದ್ಧನಲ್ಲವೇ? 

ಬೆಳಕು ನೆರಳಿನ ಮಧ್ಯೆ ನಿನ್ನ ಇರುವಿಕೆಯೇ ನನ್ನ ಶಕ್ತಿಯಾಗಿತ್ತಲ್ಲವೇ?

ಹೃದಯದ ಪ್ರತಿ ಬಡಿತಕ್ಕೆ ಈ ಸ್ನೇಹ ಪ್ರೇಮದ ರಾಗವಾಗಿ 

ಸಮಯದ ಪರಿಯನ್ನು ಗೆದ್ದಿತ್ತಲ್ಲವೇ ?


ಸ್ನೇಹದ ಬಂಧುವಾಗಿ, ಬದುಕಿನ ಸಾರಥಿಯಾಗಿ, 

ಜೀವನವನ್ನೇ ಬಹುಮಾನವಾಗಿ ನಾ ನೀಡಿದೆ. 

ಪ್ರೀತಿಯನ್ನೇ ಗೆದ್ದು, ನನ್ನನ್ನು ಕದ್ದು 

ನನ್ನ ಜೀವನವನ್ನು ನೀ ಹೊಸತನ್ನಾಗಿಸಿದೆ

ಹೆಜ್ಜೆಗೆ ಹೆಜ್ಜೆಯ ಜೋಡಿಸಿ  ನಿನ್ನಲ್ಲಿ ನನ್ನ ಮರೆಸಿ 

ಅಂದು ನಮ್ಮ ಒಲವನ್ನು ಹೊಸರಂಗಿಂದ ನೀ ಮೆರೆಸಿದ್ದೆ. 


ರಂಗೋಲಿಯ  ಈ ಚಿತ್ತಾರದ ಬದುಕು 

ಹಲವು ಚಕ್ರವ್ಯೂಹಗಳ ತೊಡಕು,

ಯಾವುದೋ ಗುಂಗಿನಲ್ಲಿ ನಾವ್ ಹೀಗೆ ಕಳೆದಿರಲು, ಸಮಯ ಹೀಗೆ ಮೀರುತ್ತಿರಲು 

ಹುಡುಕಬೇಕಿದೆ ಆ ಶಕ್ತಿ, ತೆರೆಯ ಬೇಕಿದೆ  ನಾವೀಗ ಸಮಯದ ಬುತ್ತಿ 

ಸೇರಿಸಲು ಒಲವಿಗೆ ನಮ್ಮ ಹೊಸ ಪ್ರತಿ , ಹೊಸ ಕೃತಿ 


Creative Commons Licence
This work is licensed under a Creative Commons Attribution-ShareAlike 3.0 Unported License.