।।ನೆನಪಿನ ಹಂದರ ।।
ಮನಸಿಂದು ಕಲ್ಪನೆ ಮಾಡಿ ,
ಸಣ್ಣದೊಂದು ನೆಪವ ತೋರಿ,
ನೆನಪುಗಳ ಬುತ್ತಿಯ ತೆರೆಯಲು
ನೀ ನನಗೆ ಕೊಂಚ ಸಮಯವ ಕೊಡಬಹುದೇ ?
ಒಲವನ್ನು ಬಯಸಿ ಸ್ನೇಹವನ್ನು ಗೆದ್ದ ಆ ದಿನ ನೆನಪಿದೆಯೇ?
ಗೆಳೆತನದ ಜೊತೆಯಲ್ಲಿ ಪ್ರೀತಿಯ ಆ ಹೂವು ಅರಳಿತಲ್ಲವೇ ?
ಬೆಳಕಾಗಿ ಬಂದ ಆ ರವಿ ಮೋಡದ ಮರೆಯಲ್ಲೂ, ನೆರಳಾಗಿ ಜೊತೆಯಿದ್ಧನಲ್ಲವೇ?
ಬೆಳಕು ನೆರಳಿನ ಮಧ್ಯೆ ನಿನ್ನ ಇರುವಿಕೆಯೇ ನನ್ನ ಶಕ್ತಿಯಾಗಿತ್ತಲ್ಲವೇ?
ಹೃದಯದ ಪ್ರತಿ ಬಡಿತಕ್ಕೆ ಈ ಸ್ನೇಹ ಪ್ರೇಮದ ರಾಗವಾಗಿ
ಸಮಯದ ಪರಿಯನ್ನು ಗೆದ್ದಿತ್ತಲ್ಲವೇ ?
ಸ್ನೇಹದ ಬಂಧುವಾಗಿ, ಬದುಕಿನ ಸಾರಥಿಯಾಗಿ,
ಜೀವನವನ್ನೇ ಬಹುಮಾನವಾಗಿ ನಾ ನೀಡಿದೆ.
ಪ್ರೀತಿಯನ್ನೇ ಗೆದ್ದು, ನನ್ನನ್ನು ಕದ್ದು
ನನ್ನ ಜೀವನವನ್ನು ನೀ ಹೊಸತನ್ನಾಗಿಸಿದೆ
ಹೆಜ್ಜೆಗೆ ಹೆಜ್ಜೆಯ ಜೋಡಿಸಿ ನಿನ್ನಲ್ಲಿ ನನ್ನ ಮರೆಸಿ
ಅಂದು ನಮ್ಮ ಒಲವನ್ನು ಹೊಸರಂಗಿಂದ ನೀ ಮೆರೆಸಿದ್ದೆ.
ರಂಗೋಲಿಯ ಈ ಚಿತ್ತಾರದ ಬದುಕು
ಹಲವು ಚಕ್ರವ್ಯೂಹಗಳ ತೊಡಕು,
ಯಾವುದೋ ಗುಂಗಿನಲ್ಲಿ ನಾವ್ ಹೀಗೆ ಕಳೆದಿರಲು, ಸಮಯ ಹೀಗೆ ಮೀರುತ್ತಿರಲು
ಹುಡುಕಬೇಕಿದೆ ಆ ಶಕ್ತಿ, ತೆರೆಯ ಬೇಕಿದೆ ನಾವೀಗ ಸಮಯದ ಬುತ್ತಿ
ಸೇರಿಸಲು ಒಲವಿಗೆ ನಮ್ಮ ಹೊಸ ಪ್ರತಿ , ಹೊಸ ಕೃತಿ
No comments:
Post a Comment