ರೆಕ್ಕೆ ಇರದ ಕನಸುಗಳನು ನನ್ನಲ್ಲಿ ಕಂಡೆ ನಾನು
ರೆಕ್ಕೆಗಳಿಗೆ ಜೀವ ತುಂಬಿ ನನ್ನಡಿಗೆ ಇಟ್ಟೆ ನೀನು
ಕಣ್ಣಿನಲ್ಲಿ ಇದ್ದ ಭಯವ ದೂರ ಮಾಡಿ ನಿಂತೆ ನೀನು
ಹಸ್ತ ಚಾಚಿ ಸೆಳೆದೆ ಬಳಿಗೆ.. ಕಳೆದು ಹೋದೆ ಅಲ್ಲೇ ನಾನು ...
ನನ್ನೊಳಗೆ ಮೂಡಿದಂತ ಪ್ರೇಮದಾ ಚಿಲುಮೆ
ತರಂಗಳ ಮೂಡಿಸುತ ನೀ ನಲಿಯುತಲಿರುವೆ
ಬಣ್ಣಗಳ ಲೋಕವನ್ನು ನೀ ಇಲ್ಲಿ ನೇಯ್ದು
ತಣಿಸಿತಲಿರುವೆ ನನ್ನೀ ಜೀವನವನ್ನೇ
ಕಣ್ಣಿನೊಳಗೆ ಕಣ್ಣ ಬೆಳಕಾಗಿ ರಾಗದೊಳಗೆ ರಾಗದ ಸ್ವರವಾಗಿ
ಸಣ್ಣದೊಂದು ಮನದ ಈ ಹಂಬಲಕೆ ಹಚ್ಚಿರುವೆ ಆಸೆಯ ಹೊಸ ಹಣತೆ
ಆ ಬೆಳಕಿನ ಹೊಂಗಿರಣ ತುಂಬಿದೆ ನೋಡು ನನ್ನ ಆವರಣ
ಚೆಂದದ ಈ ಪ್ರೇಮ ಪರಧಿ ಆವರಿಸಿದೆ ನನ್ನ ಹೊಸಾ ತರದಿ...
ನೀ ಇರಲು ಹೀಗೆ ನನ್ನೊಳಗೆ ಅತಿಯಾಗಿ
ನಾ ಕಳೆದು ಹೋಗುವೆ ನಿನ್ನೊಳಗೆ ನಾನಾಗಿ ....
ನಮ್ಮ ಮೇಲೆ ಪ್ರೇಮದಾ ನೆಲೆಯಿರಲು, ಇನ್ನೆಲ್ಲಿದೆ ನೋವಿನಾ ಕಡಲು
ಹೆಜ್ಜೆಯ ಜೊತೆ ಹೆಜ್ಜೆಗಳ ಸಂಗಮ, ಅಲ್ಲಾಗಿದೆ ಈ ಪ್ರೀತಿ ಸಮಾಗಮ
ಕನಸಲ್ಲಿದೆ ನೂರಾರು ಬಿತ್ತಿ ಕವನಗಳು .. ತುಂಬುತಲಿರುವೆ ರಾಗವ ನೀ ಅಲ್ಲೂ ...
ಈ ಸ್ನೇಹ ಈ ಪ್ರೇಮದ ಅಂದ
ಜೀವನದ ಎಲ್ಲಾ ಕದಗಳನು ಮಾಡಿದೆ ಚೆಂದ

No comments:
Post a Comment