ದಟ್ಟ ಹಸಿರ ನಡುವೆ ತನ್ನ ವಿಶಾಲ ಆವರಣವ ಹೊಂದಿ ಪ್ರವಾಸಿಗರ, ಕನ್ನಡ ಅಭಿಮಾನಿಗಳ ತನ್ನತ್ತ ಬರಮಾಡಿಕೊಳ್ಳುತ್ತಿದ್ದ ಆ ತಾಣ, ಕಿರಿದಾದ ತಿರುವುಗಳ್ಳನ್ನು ಒಳಗೊಂಡು ಆ ಪರಿಸರವ ಸವಿಯುವ ಕುತೂಹಲ ಇಮ್ಮಡಿಯಾಗಿಸುತ್ತದೆ. ಅಲ್ಲಿ ಕಾಲಿಡುತ್ತಿದ್ದಂತೆ ಆ ಮನೆಯ ಸುಂದರ ಚಿತ್ರಣ ಮನ ಹಾಗೂ ಮೊಗವ ತಿಳಿಯಾಗಿಸುತ್ತದೆ, ಆ ಕವಿಗೆ ಕವಿತೆಗೆ ಸ್ಪೂರ್ತಿಯೇನೆಂಬೂದರ ಅರಿವಾಗುತ್ತದೆ.
ಎತ್ತರ ಬೆಳೆದ ಅಡಿಕೆ ತೋಟಗಳು, ಹಸಿರಿನ ರಂಗನ್ನು ಎಲ್ಲೆಡೆ ಪಸರಿಸಿದ್ದ ಭೂಮಿತಾಯಿ, ಪ್ರಶಾಂತವಾಗಿರುವ ಆ ನೆಲ ನಿಮ್ಮನ್ನು ಭಾವನ ಲೋಕಕ್ಕೆ ಕರೆದೊಯ್ಯುತ್ತದೆ. ಆ ಕವಿಯ ಜನ್ಮ ಸ್ಥಳ "ಕುಪ್ಪಳಿ", ಆ ಸ್ಥಳ ಕವಿಯ ಕಾವ್ಯಗಳ ಕನ್ನಡಿ. ಇದು ನಮ್ಮ ರಾಷ್ಟ್ರ ಕವಿ ಕುವೆಂಪುರವರ ಪಾರಂಪರಿಕ ಒಟ್ಟು ಕುಟುಂಬದ ಬಾಂಧವ್ಯವ ಸಾರುವ ಮನೆ.
ಕುಪ್ಪಳಿ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆಯಲ್ಲಿದೆ, ಕೊಪ್ಪ ಇಂದ ಕುಪ್ಪಳಿ ತಲುಪುವ ಮಾರ್ಗ ಮಲೆನಾಡಿನ ನಿಸರ್ಗವ ಬಣ್ಣಿಸುವುದು. ಮೊದಲಿಗೆ ಹಾದಿಯಲ್ಲಿ ಕವಿಶೈಲ, ಅಲ್ಲಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನದ ಮನದ ದುಗುಡಗಳ ತೊರೆಯಬಲ್ಲ ನಿರ್ಮಲ ಶಾಂತಿಯ ಮೈದುಂಬಿಸಿಕೊಳ್ಳಬಲ್ಲನು. ಕವಿಯ ಪ್ರತಿ ಹೆಜ್ಜೆಯ ಕವಿತೆಯ ಸ್ಪರ್ಶ ಅಲ್ಲಿ ಸಿಗುತ್ತದೆ.

ಕವಿ ಶೈಲ
"ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು
ಕಲಾವಂತನಿಗೆ ಅದು ಸಗ್ಗ ವೀಡು "
- ಕುವೆಂಪು
ಈ ಮೇಲಿನ ಎಲ್ಲಾ ಪದಗಳು ಅಕ್ಷರಃ ಸಹ ಸತ್ಯ. ತನ್ನ ಒಡಲಲ್ಲಿ ಆಪಾರ ಸೌಂದರ್ಯವ ಅಡಗಿಸಿಕೊಂಡು ಎಲ್ಲರನು ತನ್ನಲ್ಲಿ ಮಂತ್ರಮಗ್ದವಾಗಿಸಬಲ್ಲದು. ಒಮ್ಮೆ ಯಾರೇ ಅಲ್ಲಿ ಬಂದರು ಆ ಒಲವಲ್ಲಿ, ಪ್ರಕೃತಿಯಲ್ಲಿ ಕಳೆದು ಹೋಗುವುದು ಸತ್ಯ. ಕವಿಗೆ ಬಹಳ ಹತ್ತಿರವಾದ ಈ ಕವಿಶೈಲ ಆವರ ಎಷ್ಟೋ ಕವನ ಕಾದಂಬರಿಗಳ ಹುಟ್ಟು ಹಾಕಿದ ಮಾತೃ ಸ್ವರೂಪಿ.
ಕವಿ ಆರಾಧಿಸುವ ಆ ಕವಿಶೈಲದಲ್ಲಿ ಅವರ ಸಮಾಧಿ ಹಾಗೂ ಧ್ಯಾನ ಪೀಠ ಇದೆ, ಕನ್ನಡವ ಉನ್ನತ ಪ್ರಗತಿಗೆ ಕರೆದೊಯ್ದ ಕವಿಯ ಆರಾಧನಾ ಸ್ಥಳಕ್ಕೆ ಒಮ್ಮೆ ಭೇಟಿ ಕೊಡಿ.
ಅಲ್ಲೇ ಸಮೀಪದಲ್ಲಿ ಕವಿಯ ಮನೆ ಇದೆ, ಅವರ ಬಾಲ್ಯದ ನೆನಪುಗಳಿಂದ ಅವರ ಕೊನೆಯ ದಿನಗಳವರೆಗಿನ ಎಲ್ಲಾ ವಿವರಗಳು ಅಲ್ಲಿ ತಿಳಿಯಬಹುದು. ಆವರ ಮನೆಯ ಪ್ರತಿ ಹೆಜ್ಜೆಯಲ್ಲೂ ಕನ್ನಡದ ಸಂಸ್ಕೃತಿಯ, ಮಲೆನಾಡ ಸೊಗಡ ಸವಿಯಬಹುದು. ಅಲ್ಲಿಯೇ ಕುವೆಂಪುರವರ ಪುಸ್ತಕಗಳ ಮಾರಾಟ ಅಂಗಡಿ ಇದೆ, ಸ್ವಲ್ಪ ರಿಯಾಯಿತಿ ದರದಲ್ಲಿ ಪುಸ್ತಕಗಳ ಕೊಳ್ಳಬಹುದು.
"ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!"
- ಕುವೆಂಪು
ಕನ್ನಡದ ಅಭಿಮಾನವ ಎತ್ತಿ ಸಾರುವ ಈ ಗುಡಿ ನಿಜಕ್ಕೂ ಕಲೆಯ ಸೆಲೆ, ನವ್ಯ ಕವಿಗಳಿಗೆ ಸೂರ್ಯ ರಶ್ಮಿ ಈ ನಾಡು. ಇಲ್ಲಿನ ಕವನ ಸಂಸ್ಕೃತಿಯ ಸಮರಸವ ಎತ್ತಿ ಹಿಡಿದು, ಕಾವ್ಯ ದೀಪವ ಬೆಳಗಿ ಕನ್ನಡದ ಉನ್ನತಿಯ ಅರಿವು ಮೂಡಿಸಬೇಕಿದೆ.
No comments:
Post a Comment