ಸಮಾಜದ ಪ್ರತಿ ವ್ಯಕ್ತಿಯು ತನ್ನದೇ ಪುಟ್ಟ ಪ್ರಪಂಚದ ಮಾಲಿಕ, ದಿನದ ಆಗು ಹೋಗುಗಳ ನಡುವೆ ಯಾವ ರೀತಿಯಲ್ಲಿ ಬದುಕುವನೋ ತಿಳಿಯದು, ಆದರೆ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಮಹಾತ್ಮರು ಇದ್ದಾರೆ, ಅವರು ರೂಪಿಸಿದ ಆ ರೂಪುರೆಕೆಗಳು ಸಮಾಜಕ್ಕೆ ಪೂರಕ.
ಸಮಾಜದಲ್ಲಿ ಬದುಕುವ ನಮಲ್ಲಿ ಎಷ್ಟೋ ಮಂದಿ ಮನುಷತ್ವವನ್ನು ಎಷ್ಟರ ಮಟ್ಟಿಗೆ ಮರೆತಿರಬಹುದು ಎಂದಾದರೂ ಯೋಚಿಸಿದ್ದೀರಾ? ನಾವು ಪ್ರತಿ ದಿನ ನಡೆದಾಡುವ ರಸ್ತೆಯ ಬದಿಗಳಲ್ಲಿ ಎಷ್ಟೋ ಮಂದಿ ಭಿಕ್ಷೆ ಬೇಡುವ ಮಕ್ಕಳು, ಅವರ ಹರಿದ ಅಂಗಿಗಳು ಕೆದರಿದ ಕೂದಲು, ಕಣ್ಣಿರಿನ ಬಾವಿಗಳಾದ ಕಣ್ಣುಗಳು, ಸುಂದರ ಭವಿಷ್ಯದಿಂದ ವಂಚಿತರು, ಇದರ ನಡುವೆ ಅನಾಥರೆಂಬ ಅಸಹಾಯಕತೆ, ಅದಕ್ಕೆ ಉತ್ತರವ ನೀಡಲು ಯಾವ ದನಿಯು ಇಲ್ಲ. ಹೀಗೆ ಕಂಡ ಕಾಣುತ್ತಿದ್ದಂತೆ, ವಾಹನಗಳ ದಟ್ಟನೆಯ ನಡುವೆ ಸುಳಿದು ಹತ್ತಿರ ಇರುವ ಆಟಿಕೆಗಳನ್ನು ಮಾರಾಟ ಮಾಡುತ್ತ ಅತ್ತಿತ್ತ ಸುಳಿವ ಆ ಪುಟ್ಟ ಪಾದಗಳು, ಕಾರುಗಳ ಒಳಗೆ ಕುಳಿತ ಮಕ್ಕಳಿಗೆ ತಮ್ಮ ಆಟಿಕೆ ತೋರಿಸಿ ಹೇಗಾದರೂ ಇಂದಿನ ವ್ಯಾಪಾರದ ಆರಂಭ ಮಾಡಲು ಹವಣಿಸುವರು!
ಹೀಗೆ ನಿನ್ನೆ ನಾನು ಕಂಡ ಒಂದು ದೃಶ್ಯದ ತುಣುಕು ನನ್ನ ಕಣ್ಣ ಮುಂದೆ ಸುಳಿಯಿತು, ಪುಟ್ಟ ಹುಡುಗ ಸುಮಾರು ೭ - ೮ ವರ್ಷದವನಿರಬಹುದು. ಒಂದು ಕಾರಿನ ಬಳಿ ಬಂದು ತನ್ನ ಬಳಿ ಇದ್ದ ಚೀಲದಿಂದ ಆಟಿಕೆ ತೆಗದುಕೊಳ್ಳಿರೆಂದು ಗೊಗೆರದ, ಆದರೆ ಆ ಪುಣ್ಯಾತ್ಮ ಬೇಕು ಬೇಡ ಏನು ಹೇಳದೆ ಕಿಟಕಿಯ ಗಾಜು ಮುಚ್ಚಿದ, ಆ ಹುಡುಗನ ದುರದೃಷ್ಟವೇನೋ ಅವನ ಚೀಲ ಆ ಕಾರಿನ ಅಂಚನ್ನು ಉಜ್ಜಿಕೊಂಡು ಹೋಯಿತು, ಆ ವ್ಯಕ್ತಿ ಕಾರಿನಿಂದ ಇಳಿದು ಆ ಹುಡುಗನನ್ನು ಚೆನ್ನಾಗಿ ತಳಿಸಿದ, ನಿಜ ಹೇಳಬೇಕಂದೆರೆ ಆ ಚೀಲದಿಂದ ಕಾರಿಗೆ ಯಾವುದೇ ಹಾನಿಯಾಗಿರಲಿಲ್ಲ.
ಅಲ್ಲಿದ ಜನರೆಲ್ಲಾ ಆ ದೃಶ್ಯವನ್ನು ನೋಡುವ ಮೂಕ ಪ್ರೇಕ್ಷಕರಾಗಿದ್ದರು, ಅವನ ತಪ್ಪೇ ಇಲ್ಲದೆ ಅಷ್ಟು ಏಟನು ತಿಂದ ಆ ಮುಗ್ದ ಹೃದಯ ಅದೆಷ್ಟು ವೇದನೆ ಅನುಭವಿಸಿರಬಹುದು? ಆತನ ಜೊತೆ ಇದ್ದ ಹೆಂಡತಿ ಬಿಸಿಲಲ್ಲಿ ಬಂದರೆ ಎಲ್ಲಿ ಕರಗುವೇನೋ ಎನ್ನುವ ರೀತಿಯಲ್ಲಿ ಕಾರಿಗೆ ವಾಪಾಸಾದಳು, ಆ ಹುಡುಗ ಆತನ ಕೆಟ್ಟ ಬೈಗುಳ ಕೇಳಿ ಕೂಡ ತಾನು ಕೆಟ್ಟದಾಗಿ ವರ್ತಿಸಲಿಲ್ಲ, ಅಲ್ಲೇ ತನ್ನ ಸಹಚರನೊಬ್ಬ ಕೈವಸ್ತ್ರಗಳ ಮಾರುತ್ತಿದ್ದ, ಸೀಟಿ ಹೊಡೆದು ಅವನಿಗೆ ಕೈ ಬೀಸಿದ, ಈ ಮಹರಾಯ ಈಗ ಸ್ವಲ್ಪ ಹೆದರಿದ , ಆದರೂ ಅವನ ಕೈ ಹಿಡಿದು ಕಾರಿನ ಬಳಿ ಕರೆದೊಯ್ದು ಮಾತಾಡತೊಡಗಿದ.
ಅಷ್ಟರಲ್ಲಿ ಆ ಮತ್ತೊಬ್ಬ ಹುಡುಗ ಓಡಿ ಬಂದ, ಆತನಿಗೆ ಈ ಪುಟ್ಟ ಹುಡುಗ ೧೦ ರೂ ಕೊಟ್ಟು ಕರವಸ್ತ್ರ ಕರೀದಿಸಿ ಆ ಕಾರಿನವನಿಗೆ ಕೊಟ್ಟು ಚಿಲ್ಲರೆಯನ್ನು ಕೂಡ ಕೈಲಿ ಇತ್ತು ಬೆವರನ್ನು ಒರಿಸಿಕೊಳ್ಳುವಂತೆ ಹೇಳಿ ನಡೆದು ಹೋದ.
ನಿಜಕ್ಕೂ ಆ ಹುಡುಗ ನನ್ನ ನೆನಪಿನಲ್ಲಿ ಉಳಿದು ಹೋದ, ಎಷ್ಟೇ ಒಳ್ಳೆಯವರಾದರು ಒಮ್ಮೊಮ್ಮೆ ನಮ್ಮ ಕೋಪವ ನಾವು ಸ್ತಿಮಿತದಲ್ಲಿ ಇಡಲು ಕಷ್ಟವಾಗುತ್ತದೆ, ಆದರೆ ಆ ಪುಟ್ಟ ಹುಡುಗನ ವ್ಯಕ್ತಿತ್ವ ನನಗೆ ತಾಳ್ಮೆಯ ಪಾಠ ಕಲಿಸಿತು. ನನ್ನ ಈ "ಬ್ಲಾಗ್" ಆ ಹುಡುಗನಿಗಾಗಿ. ಆ ಪುಟ್ಟ ಪಾಠವ ಕೊನೆಯವರೆಗೂ ನೆನಪಲ್ಲಿ ಕೂಡಿಡುವೆ.

ಧನ್ಯವಾದಗಳು ನಿನಗೆ, ವಿಶಾಲ ಹೃದಯದ ಪುಟ್ಟ ಹುಡುಗ !!!!
No comments:
Post a Comment