Friday, February 1, 2013

ನೆನಪು - ನೋವು

ನೆನೆದು ನೆನೆದು ನಿನ್ನ ನಾನು, ಮನದ ದುಗುಡ ತಳ್ಳಲೇನು?
ಮನದಿ ಮುದುಡಿದ ಆಸೆ ಸ್ವರವ, ರಾಗವಿಲ್ಲದೇ ಆಲಾಪಿಸಲೇನು?
ಕಲ್ಪನೆ ಇರದೇ ಊಹಿಸಿ ನಾನು, ವರ್ಣಗಳಿಗ ರಚಿಸಲೇನು?
ಸೂಕ್ಷ್ಮ ಮನಸ ಅತೃಪ್ತಿ ನೋವಿನಿಂದ ಬಿಡುಗಡೆಗೊಳಿಸಲೇನು?

ತಳಮಳದ  ಸಣ್ಣ ಕಹಿ ನೆನಪು, ಒಲಿಮೆಯ ಎರೆದ ಆ ಕಂಪು
ಸಂತಸದ ರಾಗವ ಆಲಾಪಿಸಬೇಕಿದ್ದ ಆ ಹಾಡಿನ ಇಂಪು
ಗೊಂದಲದ ನಡುವಲಿ ಮೂಡಿದ ನುಡಿಗಳ ಜೋಂಪು
ಮಧುರತೆಯ ಜೊತೆಗೆ ನೀಡಿತ್ತು ಜೀವಕೆ ತಂಪು!!

ಸರಳವಾದ ಜೀವನಕೆ ಜನ್ಮಗಳ ಬಂಧನದ ಕಗ್ಗಂಟು
ನೋವು ನಲಿವಿನ ವಿವರಣೆಯ ನಿಗಂಟು
ಸುಂದರ ಬದುಕಿಗೆ ಸ್ವಾರ್ಥದ ಅಂಟು
ನಾ ಅರಿಯೆ ಇದು ಯಾವ ಬಗೆಯ ಸಂಚು

ನೊಂದ ಮನಸಿನ ಕ್ಷಣ ಕ್ಷಣದ ತಪನೆ ಅಶ್ರುಧಾರೆಯಲ್ಲಿ ಕಂಡ ಆ ಯಾತನೆ
ವಾಕ್ಯವಾಗಿ  ಕಾವ್ಯವಾಗಿ ಕೊನೆಗೆ ಉಳಿದ ನಿನ್ನ ಸ್ಮರಣೆ
ನೆನಪು - ನೋವು ಇದು ಮುಗಿಯದ ಬಣ್ಣನೆ!!

2 comments:

Creative Commons Licence
This work is licensed under a Creative Commons Attribution-ShareAlike 3.0 Unported License.