Wednesday, October 19, 2011

ಸ್ಪಂದನ

ಸ್ಪಂದಿಸಲಾರೆನು ನಿನ್ನಯ ಪ್ರೀತಿಗೆ,
ಸ್ನೇಹಕೆ ಸೋತೆನು ಹೇಗೋ ಕನಸನು ಅಳಿಸದೆ!!
ನಿನ್ನೆಲ್ಲಾ ಮೌನವನ್ನು ನಾ ಕದ್ದು ಒಯ್ಯಲೇನು?
ಒಮ್ಮೆ ಸುರಿಸಲು ಆ ಮುತ್ತಿನ ನಗೆಯೊಂದನು! ಸೇರಿದೆ ನಿನ್ನನು!!

ಬಯಸದೆ ಬಳಿಗೆ ಬಂದ ಸ್ಪೂರ್ತಿ ಕಿರಣ ಸ್ಪರ್ಶವು 
ಸೇರಿತು ಈ ಎದೆಯನು ತುಂಬಲು ಹೊಸ ರಾಗವು 
ಆ ಬಾನಿಗೆ ರಂಗನು ನಿನ್ನ ಬಣ್ಣದಿಂದ ನೀಡಬಲ್ಲೆ 
ನನ್ನ ಹುಡುಗುತನವನು ತಪ್ಪು ತಿಳಿಯಬೇಡ ನೀ ಇಂದು!!
ನೂರಾರು ಕವಿತೆಗಳನು ನಾ ಬರೆದು ನೀಡಲೇನು? 
ಅದರಲ್ಲಿಯೇ ಅಡವಿಸಿದೆ ನಾ ನನ್ನ ಬಾಳನು! ಕೊಡುಗೆಯ ನೀಡಲು!!

ಪ್ರೇಮದ ಈ ಕವನಗಳಿಗೆ ಪದಗಳಿಗ ಸಾಲದೇ?
ಹಾರಲು ಕಳಿಸಿದ ನಿನಗೆ ಹಾರಲೀಗ ಬಾರದೇ?
ಈ ಜೀವಕೆ ಜೀವವ ನೀನೆ ಸೇರಿಸಿ ಕೂಡಿಸಿ ಜೊತೆ ಸಾಗಬೇಕು 
ನನ್ನ ಆ ಹೆಜ್ಜೆಗಳಿಗೆ ನಿನ್ನ ಲಜ್ಜೆಯ ಗುಂಗು ಜೊತೆ ಸೇರಿತೆನು?
ಮರುಭೂಮಿಯಲ್ಲಿ ನೀನು ಹೂವಾಗಿ ಬಂದೆಯೇನು?
ನೀ ತೋರಲು ಆ ನೀರಿನ ಹೊಸ ಜಾಡನು?ದಾಹವ ತೀರಲು!!



Wednesday, October 12, 2011

ತಾಣ-ಪಯಣ

ಮುಗಿಲ ಓಡಲಲಿ ಆ ಬೆಟ್ಟಗಳು 
ಮನದ ದುಗುಡತೆಯ ದೂರ ತಳ್ಳಿದವು
ಮಂಜು ಮುಸುಕಿದ ಆ ಹಾದಿ
ಸ್ವರ್ಗದ ಮುಸುಕ ಎಳೆದವು!!

ಸಣ್ಣ ಎಳೆಯ ಬೀಸುತ ರವಿಯು 
ನೀರ ಬಿಂದುಗಳ ಸ್ಪರ್ಶಿಸಿದ
ಹವಾಮಾನದ ಆ ವೈಪರಿತ್ಯಕೆ 
ಮಧುರ ಸುಧೆಯ ಹರಿಸಿದ 


ಎಲ್ಲೆಲ್ಲೋ ಕಾಗದದ ಹಾಳೆಯ ಮೇಲೆ ಕಂಡ ಚಿತ್ರವದು
ನೈಜ ಚಿತ್ರಣ ತಲ್ಲಣವ ಮೂಡಿಸಿದ ಕ್ಷಣವದು
ಸುಂದರ ಆ ತಾಣದಲ್ಲಿ ಸಣ್ಣ ಝರಿಯ ಆಲಾಪ 
ತಂಪು ತಂಪು ಗಾಳಿಯ ಮಧುರ ಪ್ರಲಾಪ

ಪಯಣಿಸುತ್ತಿದ್ದ ದಾರಿಯ ತುಂಬೆಲ್ಲಾ ಹಸಿರು
ದೂರ ಮಾಡತೊಡಗಿತ್ತು ನಮ್ಮ ಬೇಸರು
ಅಲ್ಲಲ್ಲಿ ಕಿತ್ತು ಬಂದಿದ್ದ ಮರಗಳ ಬೇರು 
ಹುಟ್ಟಿಸಿತು ನಮ್ಮಲ್ಲಿ ಒಮ್ಮೊಮ್ಮೆ ಬೆವರು!

ನಿಂತ ತಾಣವೆಲ್ಲಾ ಸೃಷ್ಟಿಯ ಸುಂದರ ಚಿತ್ರಣ 
ಯಾರಲ್ಲಿ ಮೂಡಿಸದು ಹೇಳಿ ನವಿರಾದ ತಲ್ಲಣ?
ಅದೊಂದು ಅನಾನುಭಾವ ಮಂಥನ 
ಅದೇ ಈ ಕವಿತೆಯ ಮೂಲ ಚೇತನ!

ಈಗ ಮೂಡಿತಲ್ಲವೇ ಮನದಲ್ಲಿ ಪ್ರಶ್ನೆ?
ಯಾವುದೀ ಪರಿಸರ ಚಿನ್ಹೆ
ಯಾವುದೋ ಕನಸಲ್ಲ ಇದು
ಅದುವೇ ನಮ್ಮ ಕರುನಾಡ ಚಿಕ್ಕಮಗಳೂರು




Creative Commons Licence
This work is licensed under a Creative Commons Attribution-ShareAlike 3.0 Unported License.