Thursday, November 25, 2010

ಪ್ರೇಮಧಾರೆ

ಬದುಕಿನ ಪುಟಗಳಲಿ ಅರಿಯದೆ ಸುಳಿದೆ
ತಂಗಾಳಿಯ ಕಂಪನು ನನ್ನಲಿ ತುಂಬಿದೆ
ಹೊಸ ಕವನದ ಮುನ್ನುಡಿ ನೀ ಆದೆ
ಸವಿಯಾದ ನೆನಪಗಳ ನೀ ನನ್ನ ಮುಡಿಗೆರಿಸಿದೆ!!!

ಸ್ನೇಹಮಯಿ ನೀನು ಬಾಂಧವ್ಯ ಬೆಸೆದೆ
ಉಸುಕಿನೊಳಗೆ ನಾ ನನ್ನ ಗೂಡನು ಕಟ್ಟಿದೆ
ನೀರಿನ ಅಲೆಗಳಿಗೆ ಅದನು ಸಿಲುಕಿಸದಿರು
ಉತ್ತರ ಸಿಗದ ಪ್ರಶ್ನೆ ಆಗದಿರು


ಮನದಾಳದಲಿ ಹುದುಗಿದೆ ನನ್ನ ಈ ಪ್ರೇಮ
ಸೂಕ್ಷ್ಮ ಆದರೆ ಬಣ್ಣದ ಚಿಟ್ಟೆ ಅಲ್ಲ
     ಮುಗ್ದ ಈ ಜೀವ, ನುನ್ಯತೆ ಇಲ್ಲಿ ಇಲ್ಲ
     ನೀನೆ ನನ್ನ ಜೀವ, ನನಗೆಲ್ಲಾ

ಸಂಗೀತದ ತಕದಿಮಿತ ನಿನ್ನ ನುಡಿಗಳಲಿ
ಭಾವಗಳ ಮಿಡಿತ ನಿನ್ನ ಪದಗಳಿ
ಸಂತಸದ ಹೊಸ ಲೋಕ ನಿನ್ನ ಪ್ರೇಮದಲಿ
ಎಂದೆದಿಗೂ ಹೀಗೆ ಇರು ನನ್ನ ಎದೆ ಗೂಡಿನಲಿ!!!!!!!

2 comments:

  1. s janu i will be there with u always till my last breath

    love u janu love u a lot
    (=)
    (=)

    ReplyDelete
  2. s janu i will be there all ways with u till my last breath

    love u janu love u a lot

    ReplyDelete

Creative Commons Licence
This work is licensed under a Creative Commons Attribution-ShareAlike 3.0 Unported License.