ರವಿ ನೀ ಮೂಡಿದಾಗ ಆಗಸದಿ
ಸಂತಸದ ಹೊನಲು ಧರಣಿಯಲಿ,ಸುಪ್ರಭಾತದ ರಾಗ ಪಕ್ಷಿಗಳ ಇಂಚರದಲಿ
ಇಬ್ಬನಿಯ ಪ್ರೇಮ ನೀರಿನ ಹನಿಗಳಲಿ !!!!
ಹೊಸ ದಿನದ ಆರಂಭ ಜೀವನದಿ,
ಒಲವಿನ ಚಿತ್ತಾರ ಹೃದಯದಿ,
ಬೆಳಕಿನ ಸ್ಪರ್ಶ ಹೂಗಳಲಿ,
ರವಿ ನೀ ಮೂಡಿದಾಗ ಆಗಸದಿ
ಕವಿಗೆ ಹೊಸ ಕವಿತೆಯ ಹುಡುಕಾಟ
ಬಣ್ಣಗಳ ವಯ್ಯಾರದ ಮೈಮಾಟ,
ಅಲ್ಲಿದೆ ಕತ್ತಲು ಬೆಳಕಿನ ಆಟ!!!
ರವಿ ನೀ ಮೂಡಿದಾಗ ಆಗಸದಿ
ಮನದಲಿ ಹೊಸ ಆಶಾ ಕಿರಣದ ಆಗಮನ
ಆ ಬೆಳಕೇ ನನ್ನ ಜೀವನದ ತೋರಣ,ನಾನಾಗಿ ತಾವರೆ ಅರಳಿಸುವೆ ಪ್ರೇಮ ಕವನ
ನೀ ಆಗು ನನ್ನ ಬಾಳಿನ ಸೃಜನ!!!!!
ರವಿ ನೀ ಮೂಡಿದಾಗ
ಅಲ್ಲಿದೆ ಪ್ರೇಮ ರಾಗ ...............