ಬೆಳಕೇ ಬೆಳಕೇ ಹೇ ಕಣ್ಣ ಬೆಳಕೇ
ದಾರಿಯ ತೋರಿಸು ನೀ ... ಅವಳ ಕಡೆಗೆ
ಕಳೆದು ಹೋಗಿರುವೆ ನಾ ... ಅವಳ ಒಳಗೆ
ಗೊಂದಲವಾಗಿದೆ ಮನವು ಏನು ತಿಳಿಯದೆ ....
ಅವನ ಹೃದಯ ಬಡಿತಕೆ ನನ್ನ ಹೆಜ್ಜೆ ಸಪ್ಪಳ ಸೇರಿರಲಿ
ಸಾವಿನೆಡೆಗೆ ಸುಳಿದಿಹ ಮನವನು ನಿನ್ನ ಪ್ರೀತಿ ಬಂದು ಉಳಿಸಲಿ ...
ನಾನು ಈಗ ಮೂಕ ಪ್ರೇಮಿ,
ನಿನ್ನ ಪ್ರೀತಿ ನನಗೆ ಈ ಭೂಮಿ,
ಬೆಂಕಿ ಉರಿಯ ನಡುವೆ ನನ್ನ ನೀನು ಹೇಗೆ ನೋಡುವೇ?
ಬೆಂಕಿಯ ಉರಿಯನು ಒಲವಿನಿಂದ ನಾ ಗೆಲ್ಲುವೆ...
ಈ ಕಾಡಿನ ಕಪ್ಪು ಲೋಕದಿ ನನ್ನ ನೀನು ಹೇಗೆ ಪಡೆಯುವೆ?
ನೀನು ನನ್ನ ಪ್ರೀತಿಯ ಸ್ವರೂಪ
ನಾನು ಈಗ ಗೊಂದಲದ ಪ್ರತಿರೂಪ
ಏಕೆ ನೀ ನನ್ನನ್ನು ಒಲವಿನಲ್ಲಿ ಬಂಧಿಸಿಹೆ ?
ನೋವಿನ ಪ್ರೀತಿಯ ಏಕೆ ನೀ ನನಗೆ ನೀಡಿದೆ ?
ನೋವಿನ ಅರಿವೇ ಇಲ್ಲದೆ ಮಾಡಿದ ತಪ್ಪಿಗೇಕೆ ಶಿಕ್ಷೆಯ ನೀಡುವೆ?