Wednesday, June 19, 2013

Isshq tera....

ನಯವಾದರೂ, ಹಠವಾದಿಯಂತೆ
ಕಣ್ಣಲಿ ತೋರುವ ಬೆಳಕಿನ ಕಿರಣದಂತೆ
ಕೈಯಲ್ಲಿನ ಒಲವ ರೇಖೆಯಂತೆ Isshq tera....

ಆ ದಡದ ಹೂ ನೀನಾದರೆ, ಈ ದಡದ ನೀರು ನಾನಾಗುವೆ
ನಿನ್ನೆಡೆಗೆ ಒಲವ ಧಾರೆ ಎರೆಯಲು ನಾ ಹರಿಯುವೆ...
ಸೆಳೆಯುತ ನಿಂತಿದೆ (ನೋಡು)  Isshq tera....

ನಿಂತರೆ ಹತ್ತಿರ ಕರಗಿ ನಾ ಹೋಗುವೆ,
ಬಂಧಿಸುತ ನಿನ್ನಲಿ ಏಕೆ ನೀ ಓಡುವೆ... 
ಜೊತೆಯಲಿ ಎಂದಿಗೂ ನಾ ನಡೆಯುವೆ....
ನಡೆಯುತಾ ನಡೆಯುತಾ ದಾರಿಯ ಮರೆಯುವೆ...
ಎಲ್ಲಿಯೇ ಇದ್ದರೂ ತುಂಬುವೆ ಎದೆಗೆ ನೀ  Isshq tera....


Creative Commons Licence
This work is licensed under a Creative Commons Attribution-ShareAlike 3.0 Unported License.