ಮನಸಿನ ಮೌನಕೀಗ, ಮಾತಿನ ಅವಸರ
ಕಣ್ಣಿನ ಕನಸಿಗೆ, ಕಲ್ಪನೆಯ ಕಾತುರ
ಬಣ್ಣ ಬಣ್ಣದ ಜೀವನಕೆ, ನೆನಪಿನ ಹಂದರ
ಚೈತನ್ಯ ಭಾವ ಮೂಡಿಸುವ ಈ ಬದುಕಿಗೆ ನೀನೇ ಸುಂದರ
ಲೆಕ್ಕ ಇಡುತಿರುವೇ ಈಗ ನಾನು ಬಾನಿನ ಚುಕ್ಕಿಗಳ
ಕದ್ದು ಬರುತಾ ಸಿಕ್ಕಿ ಬಿದ್ದೆ ನಿನ್ನ ನಗುವಿನ ಮೌಲ್ಯಗಳ
ಸುಳಿಯಲಿ ಈಜುತಿರುವೆ ಸೇರಲು ನಿನ್ನ ಒಲವಿನ ಸರಳುಗಳ
ಸಣ್ಣ ಮುಗುಳುನಗೆ ಕಾಣಲು ನಿನ್ನ ಕಣ್ಣಿನ ಬೆಳಕುಗಳ .... ಒಮ್ಮೆಯಾದರೂ
ಹೇಗೋ ನುಡಿಯದೆ ನಡೆದ ವೈಮನಸ್ಸು , ಮನದ ವಿಷಮತೆಯ ಗುರುತು
ಬಾಡಿ ಹೋದ ಆ ನೆರಳು, ಮುಗಿಯದೆ ಹೋದ ಆ ಇರುಳು....
ಸಣ್ಣ ಕಹಿ ನೆನಪಿನ ಘಟನೆ, ಅಂಧಕಾರದ ಯಾತನೆ ...
ಬೇಡೆನಗೆ ಆ ಬದುಕಿನ ಬಣ್ಣನೆ ....
ನಡೆಯುತಾ ಆ ಜಡಿ ಮಳೆಯಲಿ, ಹೆಜ್ಜೆಗಳ ನಡುವಲಿ
ಕಳೆದುಹೋದ ಆ ದಿನವು ಬರಿದಾದ ಮನವು
ಹುಡುಕಲು ಪರಿಚಯದ ಸ್ವರಗಳು, ಈ ಭಾವನೆಗಳು ...
ನೆನೆದ ಕಣ್ಣುಗಳು ಮಂಜಾದ ಮುಂಜಾವು.... ಕಥೆಯ ಕೊನೆಯ ಸಾರುತಿದೆ