ಮೌನದ ನಡುವೆ ಮೌನದ ಕದನ
ಮೌನವಿಲ್ಲದ ಕಡೆ ಮೌನದ ತಪನ
ಮೌನದಿಂದ ಮೌನದ ಜನನ
ಮೌನವೆ, ನಿನಗೆ ಇದೋ ಮೌನದ ನಮನ
ಮೌನ ಬಂಧಿಸಬಲ್ಲದು ಮಾತಿನ ಆಳ
ಮೌನಕೆ ತಿಳಿದಿದೆ ಶಾಂತಿಯ ಗಾಳ
ಮೌನ ಸಿಲುಕದು ಎಂದೂ ಕೋಪದ ಜಾಲ
ಮೌನ ಆವರಿಸಬಲ್ಲದು ಪ್ರತಿಯೊಂದು ಸ್ಥಳ!
ಮೌನ ನೀ ನಿರ್ಮಲ, ಮೌನ ನೀ ಶಾಂತ
ಮೌನದ ಒಲುಮೆ ಆಗಾಧ ಮತ್ತು ಅನಂತ
ಮೌನವಿರಬೇಕು ಜಗದ ಸುತ್ತಮುತ್ತ
ಮೌನ ಸೃಷ್ಟಿಸಿದೆ ಈ ಕವಿತೆಯ ವೃತ್ತ!
ಮೌನವಿರುವಾಗ ಮೌನದ ಭಯವೇಕೆ?
ಮೌನವಿರುವಾಗ ಮನದ ದಿಗಿಲೇಕೆ?
ಮೌನವಿಹುದು ಎತ್ತರ, ನಿರಂತರ
ಮೌನವೇ ಒಮ್ಮೊಮ್ಮೆ ಎಲ್ಲ ಪ್ರಶ್ನೆಯ ಉತ್ತರ!
ಮೌನವಿಲ್ಲದ ಕಡೆ ಮೌನದ ತಪನ
ಮೌನದಿಂದ ಮೌನದ ಜನನ
ಮೌನವೆ, ನಿನಗೆ ಇದೋ ಮೌನದ ನಮನ
ಮೌನ ಬಂಧಿಸಬಲ್ಲದು ಮಾತಿನ ಆಳ
ಮೌನಕೆ ತಿಳಿದಿದೆ ಶಾಂತಿಯ ಗಾಳ
ಮೌನ ಸಿಲುಕದು ಎಂದೂ ಕೋಪದ ಜಾಲ
ಮೌನ ಆವರಿಸಬಲ್ಲದು ಪ್ರತಿಯೊಂದು ಸ್ಥಳ!
ಮೌನ ನೀ ನಿರ್ಮಲ, ಮೌನ ನೀ ಶಾಂತ
ಮೌನದ ಒಲುಮೆ ಆಗಾಧ ಮತ್ತು ಅನಂತ
ಮೌನವಿರಬೇಕು ಜಗದ ಸುತ್ತಮುತ್ತ
ಮೌನ ಸೃಷ್ಟಿಸಿದೆ ಈ ಕವಿತೆಯ ವೃತ್ತ!
ಮೌನವಿರುವಾಗ ಮೌನದ ಭಯವೇಕೆ?
ಮೌನವಿರುವಾಗ ಮನದ ದಿಗಿಲೇಕೆ?
ಮೌನವಿಹುದು ಎತ್ತರ, ನಿರಂತರ
ಮೌನವೇ ಒಮ್ಮೊಮ್ಮೆ ಎಲ್ಲ ಪ್ರಶ್ನೆಯ ಉತ್ತರ!