ಅಲ್ಲಿ ಸ್ನೇಹದ ಹರುಷದ ಸುರಿಮಳೆ,
ನಡೆದಿತ್ತು ಬದುಕಿನ ಭಾವನೆಗಳ ಸಮ್ಮಿಲನ,
ಜೀವನದ ಕೆಲವು ಕ್ಷಣಗಳಲ್ಲಿ ಸಂತಸದ ಸಂಚಲನ
ಇದು ನನ್ನ ಬಾನುವಾರದ ಸಂಜೆಯ ಒಂದು ಗಾನ!!
ಮನಸು ಅಲ್ಲಿ ಗರಿಗೆದರಿ ಹಾರುತ್ತಿತ್ತು
ಎಲ್ಲಾ ಮುಗ್ದತೆಯ ಸವಿ ನೆನಪುಗಳು
ಅಲ್ಲಿ ಎಲ್ಲರೂ ಬಯಸಿದ್ದು ನಗುವಿನ ಹಾಡುಗಳು
ಗುನುಗುನಿಸಿದ್ದು Sanireeta ಪದಗಳು!!
ಪಯಣದ ದಾರಿ ತುಂಬಾ ಚಿಕ್ಕದೆನಿಸಿತು
ಕ್ಷಣಗಳು ಕ್ಷಣದಲ್ಲಿ ಮರೆಯಾಗುತಿತ್ತು
ಅಲ್ಲಿ ನನಗೆ ಕಂಡದೆಲ್ಲಾ ಹತ್ತಿರವಾಗುತಿತ್ತು
ಹಾಗೆ ಸಮಯ ನನ್ನಿಂದ ದೂರವಾಗುತಿತ್ತು!!
ಪ್ರತಿ ಪದಗಳು ಕವನವಾಯಿತು
ಮನಸಲ್ಲಿ ಶಾಂತತೆ ನೆಲಸಿತು
ಸಮೀಪದ ಸಂಗೀತ ಅಲ್ಲಿ ಕೇಳಿಸಿತು
ಆದರೆ ಕೊನೆಗೂ ವಿದಾಯ ಹೇಳುವ ಸಮಯ ಹತ್ತಿರವಾಯ್ತು!!!