ಮನದಾಳದ ಮಾತಿಗೆ ನೀ ಆದೆ ಕವನ
ಮನಸಿನಲ್ಲಿ ನಡೆದಿದೆ ನಿನ್ನ ಮಾತಿನ ಮನನ
ಏಕೆ ನಡೆದಿದೆ ಮನಸಲಿ ಈ ಕದನ
ನೀನೆ ತಾನೇ ಕಟ್ಟಿದೆ ಈ ಪ್ರೇಮ ಸಧನ
ಹೇಗೋ ನೀ ಸೇರಿದೆ ಈ ಪುಟ್ಟ ಹೃದಯಕೆ
ಎಲ್ಲ ಸಮಯವೂ ನಿನ್ನಧೆ ಕನವರಿಕೆ
ನೀ ಆದೆ ಈ ಜೀವನದ ಹೊಸ ಕವಿತೆ
ಕಣ್ಣಿನ ಮುಂದೆ ಇದೆ ನಿನ್ನ ಚಿತ್ರದ ಸ್ಪಷ್ಟತೆ
ಸುಪ್ತ ಜಗತಿನ ಸುಪ್ತ ಮನಸಿಗೆ ಸುಪ್ತತೆ ತಂದೆ
ಸುಪ್ಥತೆಯ ಸ್ಥಿತಿಯಲಿ ಸುಪ್ತಳಾಗಿ ನಿಂತೆ
ನೀ ತಂದ ಈ ಹೊಸತನಕೆ
ಹೊಸತು ಏನೆಂದು ನಾ ಅರಿತೆ
ಅರಿವಿಕೆಗೆ ನೀ ಹೊಸತನ ತಂದೆ
ಮನದಾಳದ ಮಾತಿಗೆ ನೀ ಆದೆ ಕವನ
ಮನಸಿನಲ್ಲಿ ನಡೆದಿದೆ ನಿನ್ನ ಮಾತಿನ ಮನನ
ಏಕೆ ನಡೆದಿದೆ ಮನಸಲಿ ಈ ಕದನ
ನೀನೆ ತಾನೇ ಕಟ್ಟಿದೆ ಈ ಪ್ರೇಮ ಸಧನ